Ad imageAd image

ಬೈಕ್ ಮೇಲೆಯೇ ಪ್ರೇಮಿಗಳ ರೋಮ್ಯಾನ್ಸ್!

Bharath Vaibhav
ಬೈಕ್ ಮೇಲೆಯೇ ಪ್ರೇಮಿಗಳ ರೋಮ್ಯಾನ್ಸ್!
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಮಗೇ ಅರಿವಿಲ್ಲದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ಯುವಕ, ಯುವತಿಯರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ವ್ಹೀಲಿಂಗ್‌ ಮಾಡಿ ಪುಂಡಾಟ ಮೆರೆಯುತ್ತಿರುವವರು ಒಂದು ಕಡೆಯಾದ್ರೆ, ಮತ್ತೊಂದೆಡೆ ಪ್ರೇಮಿಗಳು ಪಾರ್ಕ್‌, ನಡುರಸ್ತೆ, ವಾಹನಗಳ ಮೇಲೆ ಅಷ್ಟೇ ಅಲ್ಲದೆ, ಸಾರ್ಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲೇ ಅಸಭ್ಯ ವರ್ತನೆಯಿಂದ ನಡೆದುಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ.

ಇದೀಗ ಮತ್ತೆ ಇಂತಹದ್ದೇ ಘಟನೆಯೊಂದು ನಗರದಲ್ಲಿ ಮತ್ತೆ ಮರುಕಳಿಸಿದೆ. ನಗರದಲ್ಲಿ ಕೆಲ ಯುವಕರು ಎಲ್ಲೆ ಮೀರಿ ಕಾನೂನುಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸಿರುವ ತುಂಬಾ ದೃಶ್ಯಗಳು ಈಗಾಗಲೇ ವೈರಲ್‌ ಆಗಿದ್ದು, ಅಂತಹವರ ಹೆಡೆಮುರಿ ಕಟ್ಟುವ ಕೆಲಸವನ್ನು ಪೊಲೀಸರು ಕೂಡ ಮಾಡುತ್ತಿದ್ದಾರೆ.

ಅಷ್ಟಾದರೂ ಇದೀಗ ಮತ್ತೆ ಸರ್ಜಾಪುರ ರಸ್ತೆಯಲ್ಲಿ ಯುವಕನೊಬ್ಬ ಯುವತಿಯೊಬ್ಬಳನ್ನು ಬೈಕ್‌ ಚಲಾಯಿಸಿಕೊಂಡೇ ತಬ್ಬಿಕೊಂಡು ಕಿಸ್‌ ಕೊಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಬೆಂಗಳೂರು ಸುತ್ತ ರೈಲ್ವೆ ಜಾಲ ವಿಸ್ತರಣೆ: ಸಮೀಕ್ಷೆಗೆ ಭಾರೀ ವಿರೋಧ ಚಲಿಸುತ್ತಿದ್ದ ಬೈಕ್ ಮೇಲೆ ಸಿನಿಮಾ ಸ್ಟೈಲ್‍ನಲ್ಲಿ ಪ್ರೇಮಿಗಳು ರೋಮ್ಯಾನ್ಸ್ ಮಾಡುತ್ತಾ ಹುಚ್ಚಾಟ ಮೆರೆದ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.

ಬುಲೆಟ್ ಬೈಕ್‍ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಉಲ್ಟಾ ಕೂರಿಸಿಕೊಂಡು ಹಾಡಹಗಲೇ ಹಗ್‌, ಕಿಸ್‌ ಮಾಡುತ್ತಾ ನಡುರಸ್ತೆಯಲ್ಲಿ ಯುವಕ ಬೈಕ್ ಚಲಾಯಿಸಿದ್ದಾನೆ. ತಮಿಳುನಾಡಿನ ನಂಬರ್ ಪ್ಲೇಟ್ ಹೊಂದಿರುವ ಬೈಕ್ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದೆ. ಇನ್ನು ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಇಂತಹ ಹುಚ್ಚರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ಇಂತಹ ಸಾಹಸಕ್ಕೆ ಮತ್ತೆ ಯಾರು ಕೈ ಹಾಕದಂತೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಆಗ್ರಹಿಸಿದ್ದಾರೆ. ಕರ್ನಾಟಕ ಪ್ರೋಟೋ ಫೊಲಿಯೋ ಎಂಬ ಪೇಜ್‍ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಲಾಗಿದೆ. ಇನ್ನು ಈ ವಿಡಿಯೋ ಅಧಾರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!