ಬೆಳಗಾವಿ ಬಾಳೆಕುಂದ್ರಿ ಕ. ರ. ಸಾ. ಸಂಸ್ಥೆಯ ನಿರ್ವಾಹಕನ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಪೊಲೀಸ್ ಅಧಿಕಾರಿಯನು ಅಮನತುಗೊಳಿಸಬೇಕು. ಹಾಗೂ ಅತಿ ಶೀಘ್ರದಲ್ಲಿ ಎಂ.ಇ. ಎಸ್. ಪುಂಡರನ್ನು ಬಂಧಿಸಬೇಕು: ಕರವೇ ಆಗ್ರಹ.
ಸೇಡಂ: ಬೆಳಗಾವಿಯ ಬಾಳೆಕುಂದ್ರಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕನೊಬ್ಬ ಕನ್ನಡದಲ್ಲಿ ಮಾತನಾಡು ಎಂದು ಹೇಳಿದ್ದಕ್ಕೆ ಎಂ.ಇ.ಎಸ್. ಮರಾಠಿ ಪುಂಡರು ಹಲ್ಲೆ ಮಾಡಿದ್ದಾರೆ.
ಒಕ್ಕೂಟ ವ್ಯವಸ್ಥೆಯಲ್ಲಿರುವ ನಮ್ಮ ಭಾರತ ದೇಶದಲ್ಲಿ ಕನ್ನಡಿಗರ ಮೇಲೆ ನಿರಂತರ ಪದೇ ಪದೇ ತಮಿಳುಗರಿಂದ, ಮರಾಠಿಗರಿಂದ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಿದೆ ಕನ್ನಡ ಭಾಷೆ ದೇಶದಲ್ಲಿ 2000 ವರ್ಷಗಳ ಇತಿಹಾಸಗಳ ಭಾಷೆಯಾಗಿ ಮಾನ್ಯತೆ ಪಡೆದಿದೆ ಬೆಳಗಾವಿಯಲ್ಲಿ ಕನ್ನಡ ಮಾತನಾಡಿದ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಮರಾಠಿ ಪುಂಡರಿಗೆ ತಕ್ಕ ಶಿಕ್ಷೆ ನೀಡಿ ಕನ್ನಡಿಗರಿಗೆ ನ್ಯಾಯ ಒದಗಿಸಿಕೊಡಬೇಕು ಹಾಗೂ ಕನ್ನಡದ ನಿರ್ವಾಹಕನ ಮೇಲೆ ಸುಳ್ಳು ಪೋಕ್ಸೊ ಕೇಸ್ ದಾಖಲಿಸಿದ ಪೋಲಿಸ್ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಹಾಗೂ ಮುಂದೆ ಕನ್ನಡಿಗರಿಗೆ ಪದೇ ಪದೇ ಈ ರೀತಿ ಅನ್ಯಾಯ ಆಗದಂತೆ ಅಲ್ಲಿನ ಪೊಲೀಸರಿಗೆ ಎಚ್ಚರಿಕೆ ನೀಡಬೇಕೆಂದು ಸಮಸ್ತ ಸೇಡಂ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಸಾಹಯಕ ಆಯುಕ್ತರು ಸೇಡಂ ರವರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ. ರಾಮಚಂದ್ರ ಗುತ್ತೇದಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಹೇಶ್ ಪಾಟೀಲ್, ಚಂದ್ರಶೇಖರ್ ಪೂಜಾರಿ, ಶ್ರೀನಿವಾಸ್ ರೆಡ್ಡಿ, ಗುಂಡಪ್ಪ ಪೂಜಾರಿ, ರವಿಸಿಂಗ್, ದೇವುಕುಮಾರ್ ನಾಟಿಕರ್, ಚಂದ್ರಶೇಖರ ಮಡಿವಾಳ, ಮಹೇಶ ರೆಡ್ಡಿ, ರವಿ ಗುತ್ತೇದಾರ್, ಅನಿಲ್, ವೆಂಕಟೇಶ್ ಕೊಡ್ಲಾ, ಮುಕುಂದ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




