Ad imageAd image

‘ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಅಗತ್ಯವಿದೆ’

Bharath Vaibhav
‘ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಅಗತ್ಯವಿದೆ’
WhatsApp Group Join Now
Telegram Group Join Now

ಬೆಂಗಳೂರು: ಕೃಷಿಕರ ಜೀವನೋಪಾಯ ಭದ್ರತೆಯನ್ನು ಖಾತ್ರಿ ಮಾಡಲು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಎಂಎಸ್ಎಮ್ಇ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಸಿಎಆರ್-ಐಐಹೆಚ್ಆರ್) ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ತೋಟಗಾರಿಕೆ ಮೇಳ -೨೦೨೫ರ ಕಾರ್ಯ ಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ನಂತರ ಅವರು ಹಸಿರುಕ್ರಾಂತಿ ಪ್ರಯತ್ನಗಳ ಮೂಲಕ ಭಾರತ ಆಹಾರ ಭದ್ರತೆ ಸಾಧಿಸಿದರೂ ೨೦೪೭ರ ಒಳಗೆ ವಿಶ್ವ ದ ಆಹಾರ ಬುಟ್ಟಿಯಾಗುವ ನಿಟ್ಟಿನಲ್ಲಿ ಭಾರತ ಶಕ್ತಿ ಶಾಲಿ ರಾಷ್ಟ್ರವಾಗುವ ಸಾಧ್ಯತೆ ಇದೆ. ಉತ್ಕೃಷ್ಟ, ತಳಿಗಳು ಹೆಚ್ಚಿನ ಸಾಂದ್ರತಾ ಬೆಳೆ ಪದ್ಧತಿಗಳು ಮತ್ತು ಸ್ಥಿರತೆಯಿಂದ ಯುಕ್ತವಾದ ನವೀನ್ ತಂತ್ರಜ್ಞಾನಗಳ ಮೂಲಕ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದರು.

ನವದೆಹಲಿ ನೀತಿ ಆಯೋಗದ ಸದಸ್ಯ ಪ್ರೊ.ರಾಮೇಶ್ ಚಂದ್ರ ಅವರು ಸಾನಿಧ್ಯ ವಹಿಸಿ ಮಾತನಾಡಿದ ಅವರು ತೋಟಗಾರಿಕೆ ವೃದ್ದಿ ದರವು ಶೇಕಡಾ 7% ರಷ್ಟು ಕೃಷಿ ವೃದ್ದಿ ದರಕ್ಕಿಂತ ಶೇಕಡಾ 4%,2ರಷ್ಟು ಹೆಚ್ಚಳವಿದೆ. ತೋಟಗಾರಿಕೆ ರೈತರು ಕಳೆದ ದಶಕದಲ್ಲಿ ತಮ್ಮ ಆದಾಯವನ್ನು ಈಗಾಗಲೇ ದ್ವಿಗುಣ ಗೊಳಿಸಿದ್ದಾರೆ ಎಂದು ಅವರು ತಿಳಿಸಿದರು.

ಇದೇ ವೇಳೆ ಐಸಿಎಆರ್ -ಐಐಹೆಚ್ಆರ್ ಸಂಸ್ಥೆಯ ತಂತ್ರಜ್ಞಾನ ಅಳವಡಿಸಿಕೊಂಡು ಮತ್ತು ಪ್ರಚಾರ ಮಾಡಿ ಉತ್ತಮ ಕೃಷಿ ಅಭ್ಯಾಸಗಳನ್ನು ಹಂಚಿಕೊಂಡ ರೈತರಿಗೆ “ಶ್ರೇಷ್ಠ ರೈತ ಪ್ರಶಸ್ತಿ” ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಆಯೋಜನ ಸಮಿತಿ ಅಧ್ಯಕ್ಷ ಹಾಗೂ ಐಸಿಎಆರ್- ಐಐಹೆಚ್ಆರ್ ನಿರ್ದೇಶಕ ಡಾ.ತುಷಾರ್ ಕಾಂತಿ ಬೇಹೇರಾ, ಸುರೇಶ್ ಬಾಬು, ಉಪಕುಲಪತಿ ಡಾ.ಎಸ್. ವಿ ಸುರೇಶ್ ಶಿವಮೊಗ್ಗ, ಸಂಶೋಧನಾ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ ನಾಯಕ್, ಮಹಾನಿರ್ದೇಶಕ ಡಾ.ವಿ ಬಿ ಪಟೇಲ್ ಸೇರಿದಂತೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮುಖ್ಯಸ್ಥರು ಸಿಬ್ಬಂದಿ ವರ್ಗದವರು, ವಿವಿಧ ಜಿಲ್ಲೆಗಳಿಂದ ರೈತ ಬಾಂಧವರು ಸೇರಿದಂತೆ ಮುಂತಾದವರು ಇದ್ದರು.

(ವರದಿ: ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!