Ad imageAd image

ಶಿವ ಜಯಂತಿ ಮಹೋತ್ಸವದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪ್ರದರ್ಶನ

Bharath Vaibhav
ಶಿವ ಜಯಂತಿ ಮಹೋತ್ಸವದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪ್ರದರ್ಶನ
WhatsApp Group Join Now
Telegram Group Join Now

ಸಿರುಗುಪ್ಪ : ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕಛೇರಿಯ ಮುಂಭಾಗದಲ್ಲಿ ಸಹಯೋಗದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ನಡೆದ ಶಿವ ಜಯಂತಿಯ ಮಹೋತ್ಸವದಲ್ಲಿ ಸಾರ್ವಜನಿಕರಿಗೆ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ವ್ಯವಸ್ಥೆ ಮಾಡಲಾಗಿತ್ತು.

ಶ್ರೀ ಘಶ್ಮೇಶಂ ಶಿವಾಲಯ, ಕೇದಾರ, ತ್ರಯಂಬಕೇಶ್ವರ, ವಿಶ್ವನಾಥ, ನಾಗೇಶ್ವರ, ರಾಮೇಶ್ವರ, ಭೀಮಾಶಂಕರ, ವೈದ್ಯನಾಥ, ಶ್ರೀಶೈಲ ಮಲ್ಲಿಕಾರ್ಜುನ, ಓಂಕಾರ ಮಮಲೇಶ್ವರ, ಉಜ್ಜೈನಿ ಮಹಾಕಾಳೇಶ್ವರ, ಸೌರಾಷ್ಟ್ರ ಸೋಮನಾಥೇಶ್ವರರ ಶಿವಾಲಯಗಳು ಹಾಗೂ ಅಲಂಕೃತ ಶಿವಲಿಂಗಗಳ ಪ್ರದರ್ಶಿಸಲಾಯಿತು.

ಕೋಟಿಲಿಂಗಗಳ ದೃಶ್ಯವನ್ನು ಕನ್ನಡಿ ಮುಖಾಂತರ ಅಳವಡಿಸಲಾಗಿದ್ದು, ಸಾಲಾಗಿ ಬಂದ ಭಕ್ತರು ಜ್ಯೋತಿರ್ಲಿಂಗಳ ಪ್ರದರ್ಶನ ಪರವಶರಾಗಿ ನಮಿಸಿದರು. ಕೆಲವರು ವಿಶೇಷ ಅಲಂಕಾರವನ್ನು ತಮ್ಮ ಮೊಬೈಲ್ ಪೋನುಗಳಲ್ಲಿ ಸೆರೆಹಿಡಿದರು.

ಇದೇ ವೇಳೆ ಈಶ್ವರಿ ಪರಿವಾರದಿಂದ ಕಾಲಾನುಕ್ರಮವಾಗಿ ಶಿವನ ಅವತಾರ, ಆತ್ಮ ಮತ್ತು ಪರಮಾತ್ಮ ನಡುವಿನ ಸಂಬಂಧ, ಪರಮಾತ್ಮನ ಆರಾಧನೆಯಿಂದ ದೊರೆಯುವ ಮುಕ್ತಿಮಾಗ.

ದೇವರ ಅಸ್ತಿತ್ವ, ಸ್ವರೂಪ ಈಶ್ವರನ ದರ್ಶನಕ್ಕೆ ಮನುಷ್ಯರು ಅನುಸರಿಸಬೇಕಾದ ಸನ್ಮಾರ್ಗಗಳ ಬಗ್ಗೆ, ಉತ್ತಮ ಆರೋಗ್ಯಕ್ಕೆ ಬೇಕಾಗುವ ಯೋಗ ಶಿಬಿರ ಹಾಗೂ ಪ್ರವಚನಗಳಿಂದಾಗುವ ಪ್ರಯೋಜಗಳ ಬಗ್ಗೆ ವಿವರಣೆ ನೀಡಲಾಯಿತು.

ಬ್ರಹ್ಮಕುಮಾರಿ ಪೂರ್ಣಿಮಾ ಅಕ್ಕನವರು ಉಪಸ್ಥಿತರಿದ್ದು, ಎಲ್ಲಾ ವ್ಯವಸ್ಥೆಯ ಸಿದ್ದತೆ ಹಾಗೂ ತರಬೇತಿಯನ್ನು ವೀಕ್ಷಿಸುವುದರೊಂದಿಗೆ ತಮ್ಮ ಎಲ್ಲಾ ಈಶ್ವರಿ ಪರಿವಾರಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!