ಕನ್ನಡ ಬಿಗ್ಬಾಸ್ ಸೀಸನ್-11ರ ಫೈರ್ ಬ್ರ್ಯಾಂಡ್ ಎಂದೇ ಕರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಅವರು ಕೊನೆಯ ಹಂತದವರೆಗೆ ತಮ್ಮ ಗಲಾಟೆ ಮೂಲಕ ಹೆಸರಾಗಿದ್ದರು. ದೊಡ್ಮನೆಯಲ್ಲಿದ್ದ ಕೆಲ ಸಹಸ್ಪರ್ಧಿಗಳ ಜೊತೆ ಮಾತಿಗೆ ಮಾತು ಕೊಡುತ್ತಾ ಬೆವರಿಳಿಸುತ್ತಿದ್ದರು. ಸದ್ಯ ಶೋ ಮುಗಿಸಿ ಹೊರಬಂದಿರುವ ಚೈತ್ರಾ ಅವರು ಬಿಗ್ಬಾಸ್ ಸ್ಪರ್ಧಿ ಮೇಲೆಯೇ ಫುಲ್ ಗರಂ ಆಗಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಈ ಸ್ಪರ್ಧಿ ಮೇಲೆ ಶುರುವಾಗಿದ್ದ ಈ ಕೋಪ ಹೊರಬಂದ ನಂತರವೂ ತಣ್ಣಗಾಗಿಲ್ಲ. ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋಗೂ ಕಾಲಿಟ್ಟಿರುವ ಚೈತ್ರಾ ಕುಂದಾಪುರ ಅವರು ಮತ್ತೆ ಫೈರ್ ಬ್ರ್ಯಾಂಡ್ ಆಗಿದ್ದಾರೆ. ಅದು ಮಾಜಿ ಬಿಗ್ಬಾಸ್ ಸ್ಪರ್ಧಿ ಮೇಲೆ. ಬಿಗ್ಬಾಸ್ ಮನೆಯಲ್ಲಿ ಕಚ್ಚಾಡಿದ್ದ ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಮತ್ತೆ ಈ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಚೈತ್ರಾ ಕಣ್ಣು ಕೆಂಪು ಮಾಡಿಕೊಂಡಿದ್ದಾರೆ. ಇದರ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ. ಈ ವೇದಿಕೆಯಲ್ಲಿ ಚೈತ್ರಾ ಕುಂದಾಪುರ ಅವರಿಗೆ ಟಾಸ್ಕ್ ಕೊಡಲಾಗಿದ್ದು, ಇದನ್ನು ಆಡುವಾಗ ರಜತ್ ಕಿಶನ್ ಹಾವಳಿ ಕೊಟ್ಟಿದ್ದಾರೆ. ಚೈತ್ರಾ ಬಗ್ಗೆ ಹಾಗೆ, ಹೀಗೆ ಎನ್ನುತ್ತಾ ಕಾಲೆಳೆಯುವ ಕೆಲಸ ಮಾಡಿದ್ದಾರೆ. ಚೈತ್ರಾ ಅವರ ಆಟದ ಬಗ್ಗೆ ರಜತ್ ಅಣಕಿಸಿದ್ದು, ಚೈತ್ರಾಳಿಂದ ಆಟ ಆಡಲು ಸಾಧ್ಯವಿಲ್ಲ ಎಂದು ಎಲ್ಲರ ಮುಂದೆ ಹೇಳಿದ್ದಾರೆ.
ಇದಕ್ಕೆ ಕೋಪಗೊಂಡ ಚೈತ್ರಾ, ಬಾಯಿಗೆ ಬಂದಂಗೆ ಮಾತನಾಡುವುದು, ಬ್ಲೇಮ್ ಮಾಡುವುದು ಬೇಡ ಎಂದು ರಜತ್ಗೆ ವಾರ್ನಿಂಗ್ ಕೊಟ್ಟಿದ್ದಾರೆ. ತುಮಕೂರು ಜಿಲ್ಲೆಯ ಈ ಭಾಗದಲ್ಲಿ ಅಭಿವೃದ್ಧಿಗೆ ವೇಗ! ಇದಕ್ಕೆ ರಜತ್ ಕೂಡ ಗರಂ ಆಗಿ ನಾನೇನು ಮಾತನಾಡಿದೆ? ಎಂದು ಕೇಳಿದ್ದಾರೆ. ಮತ್ತೆ ಮಾತಿಗೆ ಮಾತು ಮುಂದುವರಿಸಿದ ಚೈತ್ರಾ, ನಾನೇನು ಬಿಟ್ಟಿಗೆ ಬಿದ್ದಿದ್ದೀನಾ? ಎಂದು ಜೋರಾಗಿ ಕೇಳಿದ್ದಾರೆ. ತುಂಬಾ ಸಲ ನನ್ನನ್ನು ಕೆಳಗೆ ಹಾಕಿ ಮಾತನಾಡುತ್ತಿದ್ದಾರೆ ಎಂದು ಚೈತ್ರಾ ರೌದ್ರಾವತಾರ ತಾಳಿದ್ದಾರೆ.
ಇದನ್ನು ಕಂಡು ಅಲ್ಲಿದ್ದ ಉಳಿದ ಸ್ಪರ್ಧಿಗಳೆಲ್ಲ ಶಾಕ್ ಕೂಡ ಆಗಿದ್ದಾರೆ. ಈ ಪ್ರೋಮೋ ವೈರಲ್ ಆಗಿದೆ. ಬಿಗ್ಬಾಸ್ ಮನೆಯನ್ನು ರಣರಂಗ ಮಾಡಿಕೊಂಡು ಅದೆಷ್ಟೋ ಬಾರಿ ಈ ಇಬ್ಬರೂ ಸ್ಪರ್ಧಿಗಳು ತೊಡೆ ತಟ್ಟಿದ್ದನ್ನ ಪ್ರೇಕ್ಷಕರು ಮರೆಯಲು ಸಾಧ್ಯವೇ ಇಲ್ಲ. ಸೀಸನ್ ಮುಗಿದ ಮೇಲಾದರೂ ಇವರ ಜಗಳ ನಿಲ್ಲುತ್ತೆ ಎಂದು ಜನ ಮಾತನಾಡಿಕೊಂಡಿದ್ದರು. ಆದರೆ ಬಿಗ್ಬಾಸ್ನಲ್ಲಿ ಶುರುವಾಗ ಯುದ್ಧ ಈಗ ಮತ್ತೊಂದು ಕಾರ್ಯಕ್ರಮಕ್ಕೂ ಶಿಫ್ಟ್ ಆಗಿದೆ.
ಈ ಕಾರ್ಯಕ್ರಮ ಶುರುವಾದಾಗಲೂ ಆರಂಭದಲ್ಲೇ ಚೈತ್ರಾ ಹಾಗೂ ರಜತ್ ನಡುವೆ ಕಿರಿಕ್ ಆಗಿತ್ತು. ವೇದಿಕೆಗೆ ಬರುತ್ತಿದ್ದಂತೆ ರಜತ್ಗೆ ಪೇಟ ಹಾಕಿ ಚೈತ್ರಾ ಕುಂದಾಪುರ ಕಾಲೆಳೆದಿದ್ದರು. ಹಾರ ಹಾಕಿದ್ದನ್ನು ಕಂಡು ಇದು ಕುರಿಯನ್ನ ಬಲಿ ಕೊಡಂಗಿದೆ, ಈ ಶೋನಲ್ಲಿ ಹೇಗೋ ನೆಮ್ಮದಿಯಾಗಿರ್ತಿದ್ದೆ ಎಂದು ರಜತ್ ಹೇಳಿದ್ದರು. ಆಗ ನೀನು ನೆಮ್ಮದಿಯಾಗಿ ಇರಬಾರದು ಅಂತಾನೇ ನಾನು ಇಲ್ಲಿಗೆ ಬಂದಿರೋದು ಎಂದು ಚೈತ್ರಾ ಹೇಳಿದ್ದರು. ಇದೀಗ ಇವರ ಜಗಳ ಮತ್ತೆ ಮುಂದುವರಿದಿದೆ.




