ಸೇಡಂ ತಾಲೂಕಿನ ರಾಘಪೂರ ಮುತ್ಯಾನ ಮಹಿಮೆ ನೆರರಾಜ್ಯಗಳಿಂದ ಜನರ ಆಗಮನ.
ಸೇಡಂ: ತಾಲೂಕಿನ ರಾಘಪುರ ಗ್ರಾಮದ ಹಜರತ್ ಮೌಲಾಲಿ ದರ್ಗಾದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ತಿಪ್ಪಯ್ಯ ಮುತ್ಯಾನವರು ಗುರುವಾರ ಹಾಗೂ ಸೋಮವಾರ ವಿಶೇಷವಾಗಿ ನೂರಾರು ಭಕ್ತರಿಗೆ ಇಡೀ ರಾತ್ರಿ ಹಗಲು ದರ್ಶನ ಭಾಗ್ಯ ಕಲ್ಪಿಸುತ್ತಾರೆ.
ಇಲಿಗೆ ಅನೇಕ ಜನರು ತಮ್ಮ ತಮ್ಮ ಕಷ್ಟಗಳನ್ನು ಹೊತ್ತುಕೊಂಡು ಶ್ರೀಗಳ ದರ್ಗಾಕ್ಕೆ ಬರುತ್ತಾರೆ.

ನೆರೆರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜ್ಯಗಳಿಂದ ಸಾವಿರಾರು ಭಕ್ತರು ಬಂದು ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ ಎಂದು ತಿಳಿಯುತ್ತಿದೆ.
ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ.ರಾಮಚಂದ್ರ ಗುತ್ತೇದಾರ್ ಅವರು ಬೇಟಿ ನೀಡಿ ಅಲ್ಲಿನ ಭಕ್ತರ ಅಭಿಪ್ರಾಯ ತಿಳಿದುಕೊಂಡರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಮಡಿವಾಳ, ಅಂಜಿಲಪ್ಪ ಬೊಯಿನ್, ಸುಭಾಷ್ ಚಂದ್ರ ನಾಟಿಕರ್, ನಾಗಪ್ಪ ಕೆ ಹೊಸಳ್ಳಿ, ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್



