ಸಿರುಗುಪ್ಪ : ನಗರದ 29,30,31ನೇ ವಾರ್ಡಿನಲ್ಲಿ ಚರಂಡಿ ಮತ್ತು ನೆಲಗಟ್ಟು(ಪೇವರ್ಸ್) ಕಲ್ಲಿನ ರಸ್ತೆ ನಿರ್ಮಾಣಕ್ಕೆ ಶಾಸಕ ಬಿ.ಎಮ್.ನಾಗರಾಜ ಅವರು ಭೂಮಿಪೂಜೆ ಸಲ್ಲಿಸಿದರು.
ನಂತರ ಮಾತನಾಡಿ ಮೂರು ವಾರ್ಡ್ ಗಳಲ್ಲಿ ಅಭಿವೃದ್ದಿಗಾಗಿ 92 ಲಕ್ಷ 25 ಸಾವಿರ ಮೊತ್ತದ ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ ಚರಂಡಿ ಮತ್ತು ಸುಸಜ್ಜಿತ ರಸ್ತೆ ನಿರ್ಮಾಣ ಕಾರ್ಯಕ್ಕೆ ಪೂಜೆ ಸಲ್ಲಿಸಲಾಗಿದೆ.
ಉತ್ತಮ ಕಾಮಗಾರಿಯನ್ನು ಗುತ್ತಿಗೆದಾರರು ನಿರ್ಮಿಸಿಕೊಡಲು ಸ್ಥಳೀಯರು ಸಹಕರಿಸಬೇಕು. ತಾಲೂಕಿನ ಅಭಿವೃದ್ದಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ವೆಂಕಟೇಶ್, ಸದಸ್ಯರಾದ ಹೆಚ್.ಗಣೇಶ್, ಜಾಜಿ ರಾಮಣ್ಣ ವೈ.ಡಿ.ಲಕ್ಷ್ಮಿದೇವಿ, ಬಿ.ಎಮ್.ಅಪ್ಪಾಜಿ ನಾಯಕ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್.ಕರಿಬಸಪ್ಪ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಹಮದ್‌ಪಾಷಾ, ಗುತ್ತಿಗೆದಾರ ವಿ.ಗಾದಿಲಿಂಗಪ್ಪ, ಮಹಮದ್ ಪಾಷಾ ಮುಖಂಡರಾದ ಬಿ.ವೆಂಕಟೇಶ್, ವೈ.ಡಿ.ವೆಂಕಟೇಶ್, ಜಾಜಿ ರಾಮಣ್ಣ, ಶ್ರೀನಿವಾಸ, ಇನ್ನಿತರ ಮುಖಂಡರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




