Ad imageAd image

ತೂಕ ಇಳಿಕೆಗೆ ಬೆಸ್ಟ್‌: ಪ್ರತಿದಿನ ಬೂದು ಕುಂಬಳಕಾಯಿ ಜ್ಯೂಸ್ ಕುಡಿಯಿರಿ ಆರೋಗ್ಯದಲ್ಲಿ ಮ್ಯಾಜಿಕ್ ನೋಡಿ

Bharath Vaibhav
ತೂಕ ಇಳಿಕೆಗೆ ಬೆಸ್ಟ್‌: ಪ್ರತಿದಿನ ಬೂದು ಕುಂಬಳಕಾಯಿ ಜ್ಯೂಸ್ ಕುಡಿಯಿರಿ ಆರೋಗ್ಯದಲ್ಲಿ ಮ್ಯಾಜಿಕ್ ನೋಡಿ
WhatsApp Group Join Now
Telegram Group Join Now

ಸಾಮಾನ್ಯವಾಗಿ ಬೂದಿ ಕುಂಬಳಕಾಯಿಯನ್ನು ಸಸ್ಯಾಹಾರಿಗಳು ಹೆಚ್ಚಾಗಿ ಬಳಸುತ್ತಾರೆ. ಆದರೆ ಎಲ್ಲರಿಗೂ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಅರಿವಿಲ್ಲ.  ಆದರೆ ಅದರ ಪ್ರಯೋಜನಗಳ ಅರಿವಾದರೆ ಮಾತ್ರ ಬೂದು ಕುಂಬಳಕಾಯನ್ನು ಯಾರೂ ತಿನ್ನದೇ ಇರಲಾರರು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದಿ ಕುಂಬಳಕಾಯಿ ಜ್ಯೂಸ್ ಕುಡಿದರೆ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಅವುಗಳೆನೂ ಅಂತ ಇಲ್ಲಿ ನೋಡೋಣ.

ಬೂದಿ ಕುಂಬಳಕಾಯಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಾಣ ಸಿಗುವ ಒಂದು ಮುಖ್ಯವಾದ ತರಕಾರಿ. ಇದು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಪ್ರೋಟೀನ್, ಫೈಬರ್, ಐರನ್‌ನಂತಹವು ಬೂದಿ ಕುಂಬಳಕಾಯಿಯಲ್ಲಿ ಹೇರಳವಾಗಿವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದಿ ಕುಂಬಳಕಾಯಿ ಜ್ಯೂಸ್ ಕುಡಿದರೆ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಅವು ಯಾವುವು ಎಂದು ಇಲ್ಲಿ ತಿಳಿಯೋಣ.

ಬೂದಿ ಕುಂಬಳಕಾಯಿ ಜ್ಯೂಸ್:ಬೂದಿ ಕುಂಬಳಕಾಯಿ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದಲ್ಲಿನ ತ್ಯಾಜ್ಯಗಳನ್ನು ತೆಗೆದುಹಾಕುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತೂಕ ಕಡಿಮೆ ಮಾಡುತ್ತದೆ.

ತ್ಯಾಜ್ಯಗಳನ್ನು ತೆಗೆದುಹಾಕುತ್ತದೆ:

ಖಾಲಿ ಹೊಟ್ಟೆಯಲ್ಲಿ ಬೂದಿ ಕುಂಬಳಕಾಯಿ ಜ್ಯೂಸ್ ಕುಡಿದರೆ ದೇಹವನ್ನು ಶುದ್ಧೀಕರಿಸಿಕೊಳ್ಳಬಹುದು. ಇದು ದೇಹದಲ್ಲಿನ ತ್ಯಾಜ್ಯಗಳನ್ನು ತೆಗೆದುಹಾಕಲು ಚೆನ್ನಾಗಿ ಸಹಾಯ ಮಾಡುತ್ತದೆ.

ಆರೋಗ್ಯಕರ ಜೀರ್ಣಕ್ರಿಯೆ ಬೂದಿ ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಜೀರ್ಣವ್ಯವಸ್ಥೆಯನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಇದು ಮಲಬದ್ಧತೆ, ಅಜೀರ್ಣದಿಂದ ಉಪಶಮನ ನೀಡುತ್ತದೆ.

ದೇಹವನ್ನು ಹೈಡ್ರೇಟೆಡ್ ಆಗಿ ಇಡುತ್ತದೆ:

ಬೂದಿ ಕುಂಬಳಕಾಯಿ ಜ್ಯೂಸ್ ದೇಹವನ್ನು ಹೈಡ್ರೇಟೆಡ್ ಆಗಿ ಇಡಲು ಸಹಾಯ ಮಾಡುತ್ತದೆ. ಇದರ ತಂಪಾದ ಪರಿಣಾಮ ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಇಡುತ್ತದೆ.

ರೋಗನಿರೋಧಕ ಶಕ್ತಿ: ಬೂದಿ ಕುಂಬಳಕಾಯಿಯಲ್ಲಿ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿ ಇರುವುದರಿಂದ ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!