ಮುದಗಲ್ : ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ -1 ಶನಿವಾರ ಯಶಸ್ವಿಯಾಗಿ ನಡೆದವು -ಕಳೆದ ಬಾರಿ ಎಸ್ ಎಸ್ ಎಲ್ ಸಿ ಆರಂಭಸಿದ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ದ್ವಿತೀಯ ಪಿಯುಸಿಗೂ ವಿಸ್ತರಿಸಲಾಗಿತ್ತು ಮೊದಲ ದಿನ ಕನ್ನಡ ಮತ್ತು ಆರೇಬಿಕ್ ಭಾಷೆಯ ಪರೀಕ್ಷೆಯ ನಡೆಸಲಾಯಿತು ಅದರಂತೆ
ಪಟ್ಟಣದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ದ್ವಿತೀಯ ಪಿಯುಸಿ ಕನ್ನಡ ವಿಷಯದ ಪರೀಕ್ಷೆಯಲ್ಲಿ ಸುಮಾರು 582 ವಿದ್ಯಾರ್ಥಿಗಳು ಹಾಜರಾಗಿದ್ದು, ಯಾವುದೇ ಗೊಂದಲಗಳಿಲ್ಲದೇ ಶಾಂತಿಯುತವಾಗಿ ಪರೀಕ್ಷೆ ನಡೆದಿದೆ ಎಂದು ಎಬಿಸಿ ಪಿಯು ಕಾಲೇಜಿನ ಮುಖ್ಯ ಅಧೀಕ್ಷಕ ಶರಣಪ್ಪ ಜಿ ತಿಳಿಸಿದ್ದಾರೆ.
ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 11 ಕೊಠಡಿಗಳಲ್ಲಿ 326 ವಿದ್ಯಾರ್ಥಿಗಳ ಪೈಕಿ 297 ವಿದ್ಯಾರ್ಥಿಗಳು ಹಾಜರಿದ್ದು,26 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಎಬಿಸಿ ಪಿಯು ಕಾಲೇಜಿನ 10 ಕೊಠಡಿಗಳಲ್ಲಿ ಸುಮಾರು 293 ವಿದ್ಯಾರ್ಥಿಗಳ ಪೈಕಿ 285 ವಿದ್ಯಾರ್ಥಿಗಳು ಹಾಜರಾಗಿದ್ದು,8 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಗೊಂದಲಗಳಿಲ್ಲದೆ ಬೆಳಿಗ್ಗೆ 10:15ಕ್ಕೆ ಆರಂಭವಾದ ಮೊದಲ ದಿನದ ಪರೀಕ್ಷೆ 1.30ಕ್ಕೆ ಸುಗಮವಾಗಿ ಮುಗಿದವು.
ಎಲ್ಲಾ ಕೋಣೆಯಲ್ಲಿ ಸಿಸಿ ಕ್ಯಾಮರಾ, ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ ಎಂದು ಸರಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ರಾದ ಸರೋಜಾ ಅವರು ತಿಳಿಸಿದ್ದಾರೆ.
ಪರೀಕ್ಷೆ ಸಮಯದಲ್ಲಿ ಕೇಂದ್ರ ಸುತ್ತ 200 ಮೀಟರ್ ಅವರಿಗೆ ನಿಷೇಧಿತ ಪರಿಗಣಿಸಿ ,ಜೆರಾಕ್ಸ್ ,ಸೈಬರ್ ,ಕಂಪ್ಯೂಟರ್ ,ಕೇಂದ್ರ ಗಳನ್ನು ಮುಚ್ಚಿಸಲಾಗಿತ್ತು ಮುದಗಲ್ಲ ಪೋಲಿಸ್ ಠಾಣೆಯ ವೆಂಕಟೇಶ್ ಅವರ ನೇತೃತ್ವದಲ್ಲಿ ಯಾವುದೇ ರೀತಿಯ ನಕಲು ಪೂರೈಕೆಯಾಗದಂತೆ ಪರೀಕ್ಷೆ ಕೇಂದ್ರ ಸುತ್ತ ಸೂಕ್ತ ಪೋಲಿಸ್ ಬಂದು ಬಸ್ತ ಕೈಗೊಳ್ಳಲಾಗಿತ್ತು
ವರದಿ:- ಮಂಜುನಾಥ ಕುಂಬಾರ




