Ad imageAd image

ನೂರಕ್ಕೆ ನೂರರಷ್ಟು ಡಿಕೆಶಿ ಸಿಎಂ ಆಗಲಿದ್ದು, ಬೇಕಿದ್ದರೆ ರಕ್ತದಲ್ಲಿ ಬರೆದು ಕೊಡುವೆ : ಶಾಸಕ ಶಿವಗಂಗಾ

Bharath Vaibhav
ನೂರಕ್ಕೆ ನೂರರಷ್ಟು ಡಿಕೆಶಿ ಸಿಎಂ ಆಗಲಿದ್ದು, ಬೇಕಿದ್ದರೆ ರಕ್ತದಲ್ಲಿ ಬರೆದು ಕೊಡುವೆ : ಶಾಸಕ ಶಿವಗಂಗಾ
WhatsApp Group Join Now
Telegram Group Join Now

ದಾವಣಗೆರೆ : ರಾಜ್ಯ ಕಾಂಗ್ರೆಸ್​ ಸರ್ಕಾರದಲ್ಲಿ ಸಿಎಂ ಕುರ್ಚಿಗಾಗಿ ಫೈಟ್​​ ನಡೆಯುತ್ತಿದ್ದು, ಹೈಕಮಾಂಡ್​ ಕ್ಲಾಸ್​​ ಬಳಿಕವೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬಣ ನಾಯಕರು ಬಹಿರಂಗವಾಗಿ ಸಿಎಂ ಸ್ಥಾನದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಅತ್ತ ನವೆಂಬರ್ 16ರ ಒಳಗೆ ಡಿಕೆಶಿ ಸಿಎಂ ಸ್ಥಾನವನ್ನು ಒದ್ದು ಕಿತ್ತಿಕೊಳ್ಳುತ್ತಾರೆ ಎಂದು ವಿಪಕ್ಷ ನಾಯಕ ಆರ್​ ಅಶೋಕ್ ಹೇಳಿಕೆ ನೀಡಿದ್ದು, ನವೆಂಬರ್ ಅಲ್ಲ, ಡಿಸೆಂಬರ್​​​​ನಲ್ಲಿ ಡಿಕೆಶಿ ಅವರು ಸಿಎಂ ಆಗುತ್ತಾರೆ ಎಂದು ಡಿಕೆಶಿ ಆಪ್ತ ಶಾಸಕ ಬಸವರಾಜ್ ಶಿವಗಂಗಾ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ನೂರಕ್ಕೆ ನೂರರಷ್ಟು ಡಿಕೆಶಿ ಅವರು ಸಿಎಂ ಆಗಲಿದ್ದು, ಬೇಕಿದ್ದರೆ ರಕ್ತದಲ್ಲಿ ಬರೆದು ಕೊಡುವೆ ಎಂದೂ ಒತ್ತಿ ಹೇಳಿದ್ದಾರೆ.

ಪಕ್ಷಕ್ಕಾಗಿ ಡಿಕೆಶಿ ಅವರು ಹೆಚ್ಚೆಚ್ಚು ದುಡಿದಿದ್ದಾರೆ. 80 ಶಾಸಕರು ಗೆಲ್ಲಿಸುವಲ್ಲಿ ಅವರ ಶ್ರಮ ದೊಡ್ಡದಿದೆ. ಡಿಸೆಂಬರ್​​​ನಿಂದ ಮುಂದಿನ ಏಳು ವರ್ಷ ಡಿಕೆಶಿ ಅವರೇ ಸಿಎಂ ಆಗಿರುತ್ತಾರೆ ನೋಡಿ. ಸಿಎಂ ಆಗೋದು ಗ್ಯಾರಂಟಿ ಎಂದೂ ಭವಿಷ್ಯ ನುಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!