ಬೆಂಗಳೂರು: ಸಾಹಿತ್ಯ ಮತ್ತು ಶ್ರಮ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ಡಾ.ಅಮೀನ್ ಬೇಗಂ ಕಾಲೇಖಾನ್ ಜಿಲ್ಲಾಧ್ಯಕ್ಷರು ಕಾಸರಗೋಡು ಕನ್ನಡ ಭವನ ಮೈಸೂರು ಹೇಳಿದರು.
ಅವರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ವಿಶ್ವ ಚೇತನ್ ಬಳಗ ಕನ್ನಡ ಕಲಿಕಾ ಗಾಯನ ಕಲಾವಿದರ ವೇದಿಕೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯಾಧ್ಯಕ್ಷ ಸಿ.ಎನ್ ಅಶೋಕ್ ಮತ್ತು ಜಿಲ್ಲಾಧ್ಯಕ್ಷ ಡಾ. ಎಂ. ಶಿವಸ್ವಾಮಿ ನೇತೃತ್ವದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ ಉಪನ್ಯಾಸ ಒಂದುದಿನದ, 2 ಕೃತಿ ಲೋಕಾರ್ಪಣೆ ಗೌರವ ಸನ್ಮಾನ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರು ನಗರದ ನಮನ ಕಲಾ ಮಂಟಪ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಆಯುಷ್ಮತಿ ಜಿ.ಪುಟ್ಟಮ್ಮಣ್ಣಿ ರವರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಸಿ.ಎನ್ ಅಶೋಕ್ ಅವರು ಸರ್ವರಿಗೂ ಸ್ವಾಗತ ಕೋರಿದರು. ಭಾರತಿ ಕೆ.ಪಿ ಅಧ್ಯಕ್ಷತೆ ವಹಿಸಿದ್ದರು. ಸಿ.ಎನ್ ಭಾಗ್ಯಲಕ್ಷ್ಮೀ ನಾರಾಯಣ ಮಕ್ಕಳಿಗೆ ಶಿಬಿರದ ಉಪನ್ಯಾಸ ನೀಡಿದರು.
ಹಿರಿಯ ಸಾಹಿತಿ ಯುಸುಫ್ ಹೆಚ್.ಬಿ ಕೃತಿ ಕುರಿತು ಮಾತನಾಡಿದರು. ಡಾ. ಕೆ.ರಘುರಾಮ್ ಕೃತಿ ಲೋಕಾರ್ಪಣೆ ಮಾಡಿದರು. ಜಿಲ್ಲಾಧ್ಯಕ್ಷ ಡಾ. ಶಿವಸ್ವಾಮಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.
ಇದೆ ವೇಳೆ ರಾಜ್ಯ ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್ ಜಡಗಿ ರವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್ ಜಡಗಿ. ಬಿಡಿಎಂ ಕುಮಾರ್,ರಾಚಪ್ಪ, ಬನಪ್ಪ, ಪುಟ್ಟಸ್ವಾಮಿ, ಸುರೇಶ್, ಬಿ.ರಮೇಶ್, ರೇಣುಕಾ ಪ್ರಸನ್ನ, ಡಾ.ಕೆ.ಇ ಸುಂದರ್ ಪ್ರಕಾಶ್, ಶಂಕರ್ ಮೂರ್ತಿ, ಮಹಿಳಾ ಮುಖಂಡರಾದ ಲೀಲಾವತಿ, ಶಾಂತಕುಮಾರಿ, ಪಾರ್ವತಮ್ಮ, ರಮ್ಯಾ, ರಾಣಿ ಮಾದಪ್ಪ, ಮಹಾದೇವಮ್ಮ ಸೇರಿದಂತೆ ಸಂಘದ ಪದಾಧಿಕಾರಿಗಳು ನಾಗರಿಕ ಬಂಧು ಭಗನಿಯರು ಎಂದು ರಾಜ್ಯ ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್ ಜಡಗಿ ರವರು ಬಿ ವಿ ನ್ಯೂಸ್-5 ಚಾನಲ್ ಗೆ ಪ್ರಕಟಣೆ ತಿಳಿಸಿದ್ದಾರೆ.
ವರದಿ : ಅಯ್ಯಣ್ಣ ಮಾಸ್ಟರ್




