ಬೆಂಗಳೂರು: ನಟ ಸಾಧು ಕೋಕಿಲ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಡಿಕೆ ಶಿವಕುಮಾರ್ ಹೇಳಿದ್ದರಲ್ಲಿ ತಪ್ಪಿಲ್ಲ ಅವರು ಸಿನಿಮಾದವರಿಗೆ ವಾರ್ನಿಂಗ್ ಕೂಡ ಕೊಟ್ಟಿಲ್ಲ ಅಂತ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ವರು, ಈ ಹಿಂದೆ ಡಿ. ಶಿವಕುಮಾರ್ ಅವರು ಸಿನಿಮಾ ವಿತರಕರು ಆಗಿದ್ದರು.
ಅವರಿಗೆ ಸಿನಿಮಾ, ಕಲಾವಿದರು ಅಂದ್ರೆ ಅಪಾರ ಪ್ರೀತಿ ಇದ. ಆ ಪ್ರೀತಿಯಿಂದಲೇ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೆ ಹೇಳಿದ್ದಾರೆ. ಈಗ ಅದೇ ಕಾಂಟ್ರಾವರ್ಸಿಯಾಗಿದೆ. ಇದಕ್ಕೆ ಏನು ಹೇಳೋದು ಅಂದರು. ನಾನು ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭಕ್ಕೆ ಯಾರಿಗೆ ಆಹ್ವಾನ ಪತ್ರಿಕೆ ಕೊಡಬೇಕೋ ಅವರಿಗೆಲ್ಲರಿಗೂ ಕೊಟ್ಟಿದ್ದೇನೆ. ಕಳದ ವರ್ಷದಂತೆ ಈ ವರ್ಷವೂ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ. ನಮ್ಮ ಚಿತ್ರರಂಗದಲ್ಲಿ ಒಗಟ್ಟಿದೆ ಎಂಬುದಾಗಿ ತಿಳಿಸಿದರು.
ಅಂದಹಾಗೇ ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಈ ಸಮಾರಂಭಕ್ಕೆ ಬಾರದ ಕನ್ನಡ ಚಿತ್ರರಂಗದವರ ನಟ್ಟು ಬೋಲು ಹೇಗೆ ಟೈಟ್ ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂಬುದಾಗಿ ಹೇಳಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು.




