ಸೇಡಂ: ಪಟ್ಟಣದ ಪತ್ರಿಕಾ ಭವನದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷರಾದ ಬಸವರಾಜ್ ಕೊರಳ್ಳಿ ಅವರು ಸುದ್ಧಿಗೋಷ್ಠಿ ನಡೆಸಿದರು.
ಸುಮಾರು ವರ್ಷಗಳಿಂದ ಮಾನ್ಯ ಸಹಾಯಕ ಆಯುಕ್ತರು ಕಾರ್ಯಾಲಯ ಇಲಾಖೆಗೆ ಸೇಡಂ ನಗರದಲ್ಲಿರುವ ವಸವದತ್ತಾ ಸಿಮೆಂಟ್ (ರಾಜಶ್ರೀ ಅಲ್ಟ್ರಾಟೆಕ್)ಕಾರ್ಖಾನೆ ಇಂದ ಆಗುತ್ತಿರುವ ವಿವಿಧ ಸಮಸ್ಯೆಗಳ ವಿರುದ್ಧ ಸುಮಾರು ಬಾರಿ ಮನವಿ ಪತ್ರ ನೀಡಿದರು ಯಾವುದೇ ಸ್ಪಂದನೆ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಇದರ ನಿಮಿತ್ಯವಾಗಿ ದಿನಾಂಕ 10/03/2025 ರಂದು ಸಹಾಯಕ ಆಯುಕ್ತರ ಕಾರ್ಯಾಲಯದ ಮುಂದೆ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕೊರಳಿ, ಉಪಾಧ್ಯಕ್ಷರಾದ ವರದಾ ಸ್ವಾಮೀ ಬಿ ಹಿರೇಮಠ, ದಯಾನಂದ ಪಾಟೀಲ್ ಆಫ್ಜಲ್ಪುರ್, ಅಶೋಕ್ ಮಡಿವಾಳ ಕೋತ್ತಾಪಲ್ಲಿ, ಮರೇಪ್ಪ ದೊರೆ, ರಾಜು ಯಾದವ, ನಾಗೇಂದ್ರ ಬೋವಿ, ವೆಂಕಟ್ ರೆಡ್ಡಿ, ಸಂತೋಷ್, ರವಿಕುಮಾರ್, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್