ಕನ್ನಡ ಚಿತ್ರರಂಗದ ಮೋಹಕ ತಾರೆ ನಟಿ ರಮ್ಯಾಗೆ ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ರಮ್ಯಾ ಅವರೊಂದಿಗೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹಾಗೂ ಹಾಸ್ಯ ನಟ ಸಾಧುಕೋಕಿಲ ಅವರಿಗೂ ಕ್ಲಾಸ್ ತೆಗೆದುಕೊಳ್ಳಲಾಗಿದೆ.
ಆದರೆ, ರಮ್ಯಾ ಅವರು ಕನ್ನಡ ಚಿತ್ರರಂಗದವರ ಬಗ್ಗೆ ಮಾತನಾಡಿರುವುದು ಹೆಚ್ಚು ವಿಮರ್ಶೆ ಹಾಗೂ ಟೀಕೆಗೆ ಗುರಿಯಾಗಿದೆ. ಒಂದು ಹಂತದಲ್ಲಿ ಕನ್ನಡಿಗರು ನಟಿ ರಮ್ಯಾ ಅವರ ಮೇಲೆ ಗರಂ ಆಗಿದ್ದಾರೆ. ಮೋಹಕ ತಾರೆ ಅಂತಲೇ ಖ್ಯಾತಿ ಗಳಿಸಿರುವ ನಟಿ ರಮ್ಯಾ ಅವರು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸಿನಿಮಾರಂಗದಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದ ಅವರು ಇತ್ತೀಚಿಗೆ ಸಿನಿಮಾಗೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಸಿನಿಮಾಗಳ ನಿರ್ಮಾಪಕಿಯಾಗಿ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ಇದೀಗ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಕನ್ನಡ ಚಿತ್ರರಂಗದ ಬಗ್ಗೆ ನೀಡಿರುವ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಮೂಲಕ ರಮ್ಯಾ ಅವರು ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ವಿಷಯ ಇಷ್ಟೇ ಆಗಿದ್ದರೆ ಆಕ್ರೋಶ ವ್ಯಕ್ತವಾಗುತ್ತಿರಲಿಲ್ಲ. ರಮ್ಯಾ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಚಿತ್ರರಂಗದ ಹಾಗೂ ನಟ ಮತ್ತು ನಟಿಯರ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದಾರೆ. ಈ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ. ನಟಿ ರಮ್ಯಾ ಅವರು ಕನ್ನಡ ಸಿನಿಮಾರಂಗದವರ ಬಗ್ಗೆ ಏನು ಮಾತನಾಡಿದ್ದಾರೆ. ಇದಕ್ಕೆ ಕನ್ನಡಿಗರು ಏನಂದರು ಎನ್ನುವ ವಿವರ ನೋಡೋಣ.. ಕಿಚ್ಚ ಸುದೀಪ್ ಜೊತೆ ನಟಿಸಿದ್ದ ನಟಿ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಶಕ್ಕೆ: ಕಾರಣವೇನು? ಸಾಹೇಬ್ರು ಹೇಳಿದ್ದು ತಪ್ಪಿಲ್ಲ: ಸಾಹೇಬ್ರು ಹೇಳಿದ್ದರಲ್ಲಿ ತಪ್ಪೇನು ಇಲ್ಲ.
ನಟ – ನಟಿಯರಿಗೆ ಅವರದ್ದೇ ಆದ ಜವಾಬ್ದಾರಿ ಇರುತ್ತದೆ. ಕಲಾವಿದರು ನಾಡಿನ ನೆಲ, ಜಲ ಹಾಗೂ ಭಾಷೆಯ ಪರವಾಗಿ ಹೋರಾಟ ಮಾಡಬೇಕು ಎಂದು ರಮ್ಯಾ ಹೇಳಿದ್ದಾರೆ. ಇದರ ನಡುವೆ ಡಾ. ರಾಜ್‌ಕುಮಾರ್ ಅವರ ಉದಾಹರಣೆಯನ್ನು ಸಹ ರಮ್ಯಾ ಅವರು ನೀಡಿದ್ದರು. ಸಿನಿಮಾ ಹಾಗೂ ಪಾಲಿಟಿಕ್ಸ್ ನಡುವಿನ ಬೆಂಬಲ ಈ ಹಿಂದೆಯಂತೆ ಈಗ ಕಾಣಿಸುತ್ತಿಲ್ಲ. ಆ ರೀತಿಯ ಬೆಂಬಲ ಅವಶ್ಯವಿದೆ ಎಂದು ಅವರು ಹೇಳಿದ್ದರು. ನೀವೆಷ್ಟು ಹೋರಾಟ ಮಾಡಿದ್ದೀರಿ ರಮ್ಯಾ ಅವರೇ:
ರಮ್ಯಾ ಅವರ ಮಾತಿಗೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡದ ಯಾವ ಹೋರಾಟದಲ್ಲಿ ನೀವು ಮುಂಚೂಣಿಯಲ್ಲಿ ಇದ್ದೀರಿ. ಕನ್ನಡ ಭಾಷೆ, ನೆಲ ಹಾಗೂ ಜಲದ ಯಾವ ವಿಚಾರದಲ್ಲಾದರೂ ನೀವು ಹೋರಾಟ ಮಾಡಿರುವಿರಾ ಹೇಳಿ ಅಂತ ಜನ ಕೇಳಿದ್ದಾರೆ. ಮೊನ್ನೆ ಬೆಳಗಾವಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದಾಗ ..ನಮ್ಮ ನಾಡಿನ ಭಾಷೆಯ ಪರವಾಗಿ ಯಾಕೆ ಧ್ವನಿ ಎತ್ತಲಿಲ್ಲ ಯಾಕೆ ಎಂದು ಪವನ್ ಕುಮಾರ್ ಎನ್ನುವವರು ರಮ್ಯಾ ಅವರನ್ನು ಪ್ರಶ್ನೆ ಮಾಡಿದ್ದಾರೆ.
ರಾಮ ಮಂದಿರ: ರಾಮ ಮಂದಿರದ ಮೇಲೆ ದಾಳಿ ಸಂಚು ವಿಫಲ! ಡಿ.ಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ ಸಾಧು ಕೋಕಿಲ!” ಈಗ ಕನ್ನಡದ ಬಗ್ಗೆ ಮಾತನಾಡುತ್ತಿರುವ ರಮ್ಯಾ ಅವರು ತಮಿಳು ಭಾಷೆಯಲ್ಲಿ ಪ್ರಚಾರ ಮಾಡಿದ್ದರು. ಇದೀಗ ಕನ್ನಡದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಹಲವು ಪ್ರಶ್ನೆ ಮಾಡಿದ್ದಾರೆ.




