ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಗೊಂಬೆ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ನೇಹಾ ಗೌಡ ಬಾಲ್ಯದಲ್ಲಿ ತಮ್ಮ ಮೇಲೆ ಆದ ದೌರ್ಜನ್ಯದ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಇನ್ನು ಮುಂದುವರಿದಂತೆ ತಾವು ನಟಿಯಾದ ಮೇಲೆ ತಮಗಾದ ಭಯಾನಕ ಅನುಭವದ ಬಗ್ಗೆ ಮಾತನಾಡಿದ್ದಾರೆ. ‘ನಾನೇ ನನ್ನ ಜೀವನದಲ್ಲಿ ಇನ್ನೊಂದು ಸಲ ತೊಂದರೆಯಾದರೆ ಆತನಿಗೆ ಹೊಡೆಯಬೇಕು ಎಂದುಕೊಳ್ಳುತ್ತೇನೆ. ಆದರೆ ಅದು ಆಗಲಿಲ್ಲ. ನನ್ನ ಜೀವನದಲ್ಲಿ ಮತ್ತೆ ಅದೇ ರೀತಿಯ ಘಟನೆ ನಡೆಯಿತು. ನಾನು ಚೆನೈನಲ್ಲಿ ಇತ್ತೀಚೆಗೆ ಒಂದು ರಿಯಾಲಿಟಿ ಶೋಗೆ ಹೋಗಿದ್ದೆ. ಆ ಕಾರ್ಯಕ್ರಮ ನಡೆಯುತ್ತಿದ್ದದ್ದು ಚೆನೈನ ಹೊರ ವಲಯದಲ್ಲಿ ಹೀಗಾಗಿ ನನಗೆ ಅಲ್ಲೇ ರೂಮ್ ಕೊಟ್ಟಿದ್ದರು’.
‘ಒಂದು ಹಂತದ ತನಕ ನನ್ನ ಅಮ್ಮ ನನ್ನ ಜೊತೆ ಬರುತ್ತಿದ್ದರು. ಅದಾದ ಮೇಲೆ ನಾನೇ ಎಲ್ಲಾ ಕಡೆ ಒಬ್ಬಳೇ ಹೋಗುತ್ತಿದೆ. ನೀವು ನಂಬಲ್ಲ ಆ ದಿನ ನಾನು ಮಲಗಿದ್ದಾಗ ಏನೋ ನನ್ನ ಕಾಲು ತಾಕಿದಂತಾಯಿತು. ಏನೋ ಆಗುತ್ತಿದೆ, ಏನೋ ಆಗುತ್ತಿದೆ ಎನ್ನುವುದು ಗೊತ್ತಾಗುತ್ತಿತ್ತು. ಆದರೆ ಎದ್ದು ಕಣ್ಣು ಬಿಟ್ಟು ನೋಡಲು ಆಗುತ್ತಿರಲಿಲ್ಲ.
ಮೊದಲು ಗಾಳಿ ಇರಬೇಕು ಎಂದುಕೊಂಡು ಸುಮ್ಮನಾದೆ. ಯಾಕೆಂದರೆ ಚೆನೈ ಅಂದಮೇಲೆ ಫ್ಯಾನ್ ಜೋರಾಗಿ ಹಾಕಿಕೊಂಡಿರುತ್ತೇವೆ. ಏನೋ ಗಾಳಿ ಎಂದುಕೊಂಡು ಸುಮ್ಮನಾದೆ’ ಎಂದರು. ‘ಮತ್ತೇನೋ ಕಾಲಿನಲ್ಲಿ ಏನೋ ಕೆರೆದಂತಾಯಿತು. ಎದ್ದು ನೋಡಿದರೆ ಕಣ್ಣೆದುರು ಒಂದು ನೆರಳು. ಆಗಲೂ ನಾನೇ ಓವರ್ ಥಿಂಕಿಂಗ್ ಮಾಡುತ್ತಿದ್ದೇನೆ ಎಂದುಕೊಂಡು ಸುಮ್ಮನಾದೆ. ಮತ್ತೆ ಅದೇ ರೀತಿ ಆಯ್ತು. ಆಮೇಲೆ ನೋಡಿದರೆ ಆ ಹೋಟೆಲ್‌ನಲ್ಲಿ ಕೆಲಸ ಮಾಡುವ ಹುಡುಗ ಅಲ್ಲಿ ನಿಂತಿದ್ದಾನೆ.
ಅವನನ್ನು ನೋಡಿ ನಾನು ಎಷ್ಟು ಬೆಚ್ಚಿಬಿದ್ದೆ ಅಂದರೆ ನನ್ನ ದೇಹ ನಡುಗುತ್ತಿತ್ತು. ನಾನೇನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ನನಗೆ ಅವನನ್ನು ಹಿಡಿದುಕೊಂಡು ಹೊಡೆಯಬೇಕು ಅನಿಸುತ್ತಿದೆ ಆದರೆ ಆಗುತ್ತಿಲ್ಲ. ಅವನು ಒಂದು ಕ್ಷಣದಲ್ಲಿ ಅಲ್ಲಿಂದ ಎಸ್ಕೇಪ್ ಆಗಿಬಿಟ್ಟ’.
‘ನಾನು ಅದನ್ನು ಅಲ್ಲಿಗೆ ಬಿಡಲಿಲ್ಲ. ಕೆಳಗೆ ಹೋಗಿ ಹೋಟೆಲ್ ಅವರಿಗೆ ತಿಳಿಸಿದೆ. ನನ್ನ ಬ್ಯಾಗ್ ಯಾರು ಇಟ್ಟುಕೊಟ್ಟನೋ ಅವನೇ ಬಂದಿರುವುದು ಕರೆಸಿ ಅವನನ್ನು ಅಂದೆ. ಅವರು ಇಲ್ಲ ಅವನು ಮಲಗಿದ್ದಾನೆ ಅಂದರು. ಮತ್ತೆ ಅವರು ಕರೆಸಿದರು. ಅವನು ಎಂತಹ ನಟ ಅಂದರೆ ಕಣ್ಣುಜ್ಜಿಕೊಂಡು ನಿದ್ದೆಯಲ್ಲಿ ಇರುವವರ ರೀತಿ ಬಂದ. ಆಮೇಲೆ ಅವರಿಗೂ ಅನುಮಾನ ಬಂತು ಕೊನೆಗೆ ಸಿಸಿಟಿವಿಯಲ್ಲಿ ನೋಡಿದರು.
ಈ ಮಧ್ಯೆ ನನ್ನನ್ನು ಅಲ್ಲಿಗೆ ಕರೆಸಿದವರಿಗೆ ಫೋನ್ ಮಾಡಿ ವಿಚಾರ ಹೇಳಿದೆ. ಅವರು ಬಂದು ಅವನಿಗೆ ಸರಿಯಾಗಿ ಹೊಡೆದರು. ನೀವು ಹೊಡೆಯಿರಿ ಅಂದರು ಆಗಲೂ ನನ್ನ ಕೈ ನಡುಗುತ್ತಿದ್ದವು. ಕೊನೆಯಲ್ಲಿ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಲು ಹೇಳಿದರು. ಆದರೆ ನನಗೆ ಅಲ್ಲಿ ಇರಲು ಆಗಲಿಲ್ಲ. ಬೇರೆ ಹೋಟೆಲ್ ಹೋದೆ. ಪೊಲೀಸ್ ದೂರು ಕೂಡ ಆಯ್ತು’. ಎಂದು ನಟಿ ನೇಹಾ ಗೌಡ ತಮಗಾದ ಭಯಾನಕ ಅನುವವನ್ನು ಬಿಚ್ಚಿಟ್ಟಿದ್ದಾರೆ.




