ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಪರ ಮತ್ತೆ ಬ್ಯಾಟ್ ಬೀಸಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ಸಿಎಂ ಮಾಡಿ ಅಂದಿದ್ದು ನಾನೇ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
2024ರ ಲೋಕಸಭಾ ಚುನಾವಣೆಯ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣೆ ಸಮಿತಿಯು ಟಿಕೆಟ್ ಕೊಡೋದು.ನನಗೆ ಟಿಕೆಟ್ ಕೊಡಿ ಅಂತ ಸಿದ್ದರಾಮಯ್ಯ ಮುಂದೆ ಕೈ ಚಾಚಿಲ್ಲ. ಆ ದುಸ್ಥಿತಿ ನನಗೆ ಬರಬಾರದು.
ಯಾರೋ ಕಿಡಿಗೇಡಿಗಳು ನನ್ನನ್ನು ಎಂಎಲ್‌ಸಿ ಮಾಡಲಿಲ್ಲ ಅಂತ ಹೇಳಬಹುದು. ಸಿದ್ದರಾಮಯ್ಯ ನನಗೆ ಟೂ ಜೂನಿಯರ್, ನಾನು ಸಚಿವನಾಗಿದ್ದಾಗ ಅವರು ಏನೇನೂ ಅಲ್ಲ. ಹೀಗಿರುವಾಗ ನಾನು ಯಾಕೆ ಅವರ ಬಳಿ ಹೋಗಿ ಟಿಕೆಟ್ ಕೇಳಲಿ ಎಂದಿದ್ದಾರೆ.
ಒಂದು ವೇಳೆ ಅಂದು ನನಗೆ ಟಿಕೆಟ್ ಕೊಟ್ಟಿದ್ರೆ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಿದ್ದೆ. ಅಷ್ಟರ ಮಟ್ಟಿಗೆ ನಾನು ಅಲ್ಲಿ ವರ್ಚಸ್ಸು ಬೆಳೆಸಿಕೊಂಡಿದ್ದೇನೆ. ನನಗೆ ಯಾರ ಮೇಲೂ ಹಗೆ ಇಲ್ಲ. 2013 ರ ಸರ್ಕಾರದಲ್ಲಿ ಇದೇ ಸಿದ್ದರಾಮಯ್ಯ ಬದಲಾವಣೆ ಅನ್ನೋ ಚರ್ಚೆಗಳು ಬಂದಾಗ ಮುಂದುವರಿಸಿ ಅಂದವನು ನಾನು.
ಈ ಸರ್ಕಾರದಲ್ಲೂ ಸಿದ್ದರಾಮಯ್ಯನವರನ್ನೇ ಸಿಎಂ ಮಾಡಿ ಅಂದಿದ್ದು ನಾನೇ. ಅವರ ಪ್ರಭಾವದಿಂದ ಗಳಿಸಬೇಕಾದದ್ದು ಏನೂ ಇಲ್ಲ ಎಂದು ಮೊಯ್ಲಿ ವಾಗ್ದಾಳಿ ನಡೆಸಿದರು.
ಇದೇ ವೇಳೆ ಡಿಕೆಶಿಯನ್ನು ಹೊಗಳಿದ ಅವರು, ಡಿಕೆಶಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ. ಕೆಪಿಸಿಸಿ ಅಧ್ಯಕ್ಷರಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.




