Ad imageAd image

ಬ್ರೇಕಪ್ ವಿಚಾರ: ಮತ್ತೇ ಸುದ್ದಿಯಲ್ಲಿ ನಟಿ ತಮನ್ನಾ

Bharath Vaibhav
ಬ್ರೇಕಪ್ ವಿಚಾರ: ಮತ್ತೇ ಸುದ್ದಿಯಲ್ಲಿ ನಟಿ ತಮನ್ನಾ
WhatsApp Group Join Now
Telegram Group Join Now

ಬಹುಭಾಷಾ ನಟಿ ತಮನ್ನಾ ಭಾಟಿಯಾ  ಅವರು ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದ್ದಾರೆ. ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ತಮನ್ನಾ ಭಾಟಿಯಾ ಅವರು ನಟ ವಿಜಯ್‌ ವರ್ಮಾ ಅವರೊಂದಿಗೆ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ ಇಬ್ಬರೂ ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದು, ಬಾಲಿವುಡ್‌ನ ಕ್ಯೂಟ್‌ ಜೋಡಿ ಎಂದು ಕರೆಸಿಕೊಂಡಿದ್ದರು. ಆದರೆ, ತಮನ್ನಾ ಹಾಗೂ ವಿಜಯ್‌ ವರ್ಮಾ ಪರಸ್ಪರ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದು ನಟಿಯ ಅಭಿಮಾನಿಗಳಿಗೂ ನಿಜಕ್ಕೂ ಶಾಕ್‌ ತರಿಸಿದೆ. ನಟರಾದ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಹಲವು ವರ್ಷಗಳಿಂದ ಲವ್‌ನಲ್ಲಿದ್ದರು. ಶೀಘ್ರದಲ್ಲೇ ಇಬ್ಬರೂ ಮದುವೆ ಊಟ ಹಾಕಿಸಲಿದ್ದಾರೆ ಎಂದು ಎಲ್ಲರೂ ನಿರೀಕ್ಷೆಯಲ್ಲಿದ್ದರು. ಆದರೆ ದಿಢೀರನೆ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ತಮನ್ನಾ ಅವರ ಬ್ರೇಕಪ್‌ ವಿಚಾರ ಯಾರೂ ನಿರೀಕ್ಷಿಸಿರಲಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇಬ್ಬರೂ ನಟರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಿಂದ ಇಬ್ಬರ ಫೋಟೋಗಳನ್ನು ಡಿಲೀಟ್‌ ಮಾಡುವ ಮೂಲಕ ತಮ್ಮ ಬ್ರೇಕಪ್‌ ಸುಳಿವು ನೀಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ವಿಜಯ್ ಮತ್ತು ತಮನ್ನಾ ಕಳೆದ ವಾರವೇ ಬ್ರೇಕಪ್‌ ಮಾಡಿಕೊಂಡಿದ್ದಾರೆ. ಆದರೆ, ಇಬ್ಬರೂ ಸ್ನೇಹಿತರಾಗಿ ಮುಂದುವರಿಯಲು ಇಚ್ಛಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಸಿನಿಮಾಗಳಲ್ಲಿ ಒಬ್ಬರೂ ಬ್ಯುಸಿಯಾಗಿರುವುದರಿಂದ ತಮ್ಮ ತಮ್ಮ ವೃತ್ತಿಜೀವನದ ಮೇಲೆ ಗಮನ ಹರಿಸಿದ್ದಾರೆ. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಬಹಿರಂಗ ಹೇಳಿಕೆ ನೀಡದೆ ಸುಮ್ಮನಾಗಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಫೋಟೋ ಅಳಿಸಿ ಹಾಕುವ ಮೂಲಕ ಅಭಿಮಾನಿಗಳಿಗೆ ಬ್ರೇಕಪ್‌ ವಿಚಾರ ತಲುಪಿಸಿದ್ದಾರೆ ಎನ್ನಲಾಗಿದೆ. ಪ್ರೇಮಿಗಳಾಗಿ ಇಬ್ಬರೂ ಬೇರೆಯಾಗಿದ್ದರೂ ವಿಜಯ್ ಮತ್ತು ತಮನ್ನಾ ಪರಸ್ಪರ ಗೌರವ ಮತ್ತು ಅಭಿಮಾನವನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ ಇಬ್ಬರ ನಡುವೆ ಯಾವುದೇ ಕೆಟ್ಟ ಘಟನೆಗಳು ನಡೆದಿಲ್ಲ. ಇನ್ನು ಮುಂದೆಯೂ ಸೌಹಾರ್ದವಾಗಿ ಸ್ನೇಹಿತರಾಗಿ ಮುಂದುವರಿಯಲು ಇಚ್ಛಿಸಿದ್ದಾರಂತೆ. ವಿಜಯ್ ಮತ್ತು ತಮನ್ನಾ ಅವರ ಬಿಡುವಿಲ್ಲದ ಕೆಲಸಗಳು, ವೃತ್ತಿಯಲ್ಲಿ ಮುಂದುವರಿಯುವುದು ಸೇರಿದಂತೆ ಇವರ ಬ್ರೇಕಪ್‌ಗೆ ಹಲವು ಕಾರಣಗಳು ಎಂದು ಹೇಳಲಾಗುತ್ತಿದೆ.

2023ರಲ್ಲಿ “ಲಸ್ಟ್ ಸ್ಟೋರೀಸ್-2” ವೆಬ್‌ಸಿರೀಸ್‌ ರಿಲೀಸ್‌ ವೇಳೆ ವಿಜಯ್ ಮತ್ತು ತಮನ್ನಾ ಅವರ ಲವ್‌ಸ್ಟೋರಿ ಬೆಳಕಿಗೆ ಬಂದಿತ್ತು. ಈ ವೆಬ್‌ ಸಿರೀಸ್‌ನಲ್ಲಿ ಇಬ್ಬರೂ ನಟಿಸಿದ್ದರು. ಆಗಿನಿಂದಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಡೇಟಿಂಗ್‌ ಸುಳಿವು ನೀಡಿದ್ದರು. ಹಲವು ವೇದಿಕೆಗಳಲ್ಲಿ ಜೋಡಿಯಾಗಿಯೇ ಕಾಣಿಸಿಕೊಳ್ಳುವ ಮೂಲಕ ಕ್ಯೂಟ್‌ ಕಪಲ್‌ ಎನಿಸಿಕೊಂಡಿದ್ದರು.

ಶೀಘ್ರದಲ್ಲೇ ಇಬ್ಬರೂ ಮದುವೆಯಾಗುವ ಬಗ್ಗೆಯೂ ಸುಳಿವು ನೀಡಿದ್ದರು. ಸಂಬಂಧಗಳು ನಿರ್ಬಂಧವನ್ನು ಅನುಭವಿಸಬಾರದು, ನಾನು ಮತ್ತು ತಮನ್ನಾ ಮುಚ್ಚಿಡಲು ಏನೂ ಇಲ್ಲ ಎಂದು ವಿಜಯ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ತಮಿಳು ಸಿನಿಮಾಗಳಿಂದ ಚಿತ್ರರಂಗಕ್ಕೆ ಕಾಲಿಟ್ಟ ತಮನ್ನಾ ತೆಲುಗು, ಕನ್ನಡ ಸಿನಿಮಾದಲ್ಲೂ ನಟಿಸಿ, ಇದೀಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಕೆಜಿಎಫ್‌ ಸಿನಿಮಾದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡಿಗೆ ಸೊಂಟ ಬಳುಕಿಸುವ ಮೂಲಕ ತಮನ್ನಾ ಕನ್ನಡಿಗರಿಗೆ ಹತ್ತಿರವಾಗಿದ್ದರು. ಇತ್ತೀಚೆಗೆ ತೆರೆಕಂಡ ಸ್ತ್ರೀ ಸಿನಿಮಾದಲ್ಲೂ ಆಜ್‌ ಕಿ ರಾತ್‌ ಸಾಂಗ್‌ ಟ್ರೆಂಡಾಗಿತ್ತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!