ಸಿಂಧನೂರು : ಮಾರ್ಚ್ ೪ ಮಾದಿಗ ದಂಡೋರ ಎಂ ಆರ್ ಪಿ ಎಸ್ ರಾಜ್ಯ ಸಮಿತಿ ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ಜಾರಿಗೆ ಒತ್ತಾಯಿಸಿ ಎರಡನೇ ದಿನದ ಧರಣಿ ಹೋರಾಟದಲ್ಲಿ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಬಿ. ನರಸಪ್ಪ ದಂಡೋರ ಅವರು ಉಪವಾಸ ವಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿ ಹೋರಾಟದ ವೇದಿಕೆಯಲ್ಲಿ ಕುಸಿದು ಬಿದ್ದು ಹಿನ್ನೆಲೆ ಪೊಲೀಸರು, ದಂಡೋರ ಕಾರ್ಯಕರ್ತರು ಅಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಇದೀಗ ಸ್ವಲ್ಪ ಚೇತರಿಸಿಕೊಂಡಿದ್ದು ಫ್ರೀಡಂ ಪಾರ್ಕ್ ಇನ್ ಚಾರ್ಜರು ಮತ್ತು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ರಾಜ್ಯಾಧ್ಯಕ್ಷ ನರಸಪ್ಪ ದಂಡೂರ ರವರ ಆರೋಗ್ಯ ವಿಚಾರಿಸಿದರು.
ಸಂದರ್ಭದಲ್ಲಿ , ಮಾದಿಗ ದಂಡೋರ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ ಎಂ, ದೇವರಾಜ್, ಶಾಮರಾಜ ಕಲಾ ಮಂಡಳಿ ಅಧ್ಯಕ್ಷರು, ಮಂಜುನಾಥ್ ಕೊಂಡಪಲ್ಲಿ ಕಲ್ಯಾಣ ಕರ್ನಾಟಕ ಅಧ್ಯಕ್ಷರು, ಮುತ್ಯಾಲಮ್ಮ ಮಹಿಳಾ ಘಟಕ ಅಧ್ಯಕ್ಷರು ಬೆಂಗಳೂರು ಇದ್ದರು,
ವರದಿ : ಬಸವರಾಜ ಬುಕ್ಕನಹಟ್ಟಿ




