ಲಾಹೋರ: ರಚಿನ್ ರವೀಂದ್ರ ಅವರ ಬಿರುಸಿನ ಶತಕದ ನೆರವಿನಿಂದ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ ಮೊತ್ತದತ್ತ ಮುನ್ನಡೆದಿದೆ.
ಕಡೆಯ ವರದಿ ಬಂದಾಗ ನ್ಯೂಜಿಲೆಂಡ್್್ 32 ಓವರುಗಳಲ್ಲಿ 1 ವಿಕೆಟ್ ಗೆ 201 ರನ್ ಗಳಿಸಿತ್ತು. ರಚಿನ್್ ರವೀಂದ್ರ 105 (95 ಎಸೆತ,13 ಬೌಂಡರಿ, 1 ಸಿಕ್ಸರ್) ಹಾಗೂ ಕೇನ್ ವಿಲಿಯಮ್ಸನ್ 72 (74 ಎಸೆತ,7 ಬೌಂಡರಿ, 1 ಸಿಕ್ಸರ್್) ಬ್ಯಾಟ್ ಮಾಡುತ್ತಿದ್ದರು. ಇನ್ನು 18 ಓವರುಗಳ ಆಟ ಬಾಕಿ ಇದ್ದು ನ್ಯೂಜಿಲೆಂಡ್ 400 ರ ಗಡಿ ತಲುಪುವ ಉತ್ಸಾಹ ತೋರಿದೆ.




