ಬೆಂಗಳೂರು: ರ್ಯಾಪ್ ಸಾಂಗ್ನಲ್ಲಿ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿರುವ ಆರೋಪ ಕೇಳಿಬಂದಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಈ ಬಗ್ಗೆ ಆರೋಪ ಮಾಡಿದ್ದು, ರ್ಯಾಪರ್ ಕರಣ್ ಎಂಬುವವರ ವಿರುದ್ಧ ದೂರು ಕೊಡಲು ಮಹಾಸಭಾ ಮುಂದಾಗಿದೆ.
ರ್ಯಾಪರ್ ಕರಣ್ ತಾವು ಮಾಡಿರುವ ಹಾಡಿನಲ್ಲಿ ಲಿಂಗಾಯತ ಸಮುದಾಯಕ್ಕೆ ಅವಹೇಳನ ಮಾಡಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಬಿ.ಆರ್ ನವೀನ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರಣ್ ತಮ್ಮ ಹಾಡಿನಲ್ಲಿ ಒಂದು ಪದ ಬಳಕೆ ಮಾಡಿದ್ದು, ಅದು ಲಿಂಗಾಯತ ಸಮುದಾಯಕ್ಕೆ ಅವಹೇಳನ ಮಾಡುವಂತದ್ದಾಗಿದೆ ಎಂದು ಆರೋಪ ಮಾಡಲಾಗಿದೆ.
ಈ ಹಾಡಿನಲ್ಲಿ ಲಿಂಗಾಯತ ಎಂಬ ಪದವನ್ನು ಬಳಕೆ ಮಾಡಲಾಗಿದ್ದು, ಅದಕ್ಕೆ ಜೊತೆಗೆ ಸಮುದಾಯಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪದವನ್ನೂ ಬಳಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ಹಾಡು ಈಗಾಗಲೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದೆ. ಇನ್ನು ಲಿಂಗಾಯತ ಸಮುದಾಯದ ಅಪಮಾನಕ್ಕೆ ಮುಂದಾಗಿರುವ ಕರಣ್ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ದೂರು ನೀಡಲು ಮಹಾಸಭಾ ಮುಂದಾಗಿದೆ.




