Ad imageAd image

ನಾಳೆ ರಾಜ್ಯ ಬಜೆಟ್ : 4 ಲಕ್ಷ ಕೋಟಿ ರೂ. ಬಜೆಟ್ ಮಂಡನೆಗೆ ಸಿದ್ಧರಾಮಯ್ಯ ಸಿದ್ಧತೆ 

Bharath Vaibhav
ನಾಳೆ ರಾಜ್ಯ ಬಜೆಟ್ : 4 ಲಕ್ಷ ಕೋಟಿ ರೂ. ಬಜೆಟ್ ಮಂಡನೆಗೆ ಸಿದ್ಧರಾಮಯ್ಯ ಸಿದ್ಧತೆ 
siddaramaiah
WhatsApp Group Join Now
Telegram Group Join Now

ಬೆಂಗಳೂರು: ನಾಳೆ ಎಂದರೆ ಮಾರ್ಚ್‌ 7 ರಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16ನೇ ರಾಜ್ಯ ಬಜೆಟ್‌ ಅನ್ನು ಮಂಡಿಸಲಿದ್ದಾರೆ. ಈ ಸಲದ ಆಯವ್ಯಯ 4 ಲಕ್ಷ ಕೋಟಿ ರೂ.ಗೂ ಮೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಬಾರಿ ಸಿಎಂ ಆದಷ್ಟು ವಾಸ್ತವ ಹಾಗೂ ಸಮತೋಲನದ ಬಜೆಟ್‌ ಮಂಡಿಸುವ ಪ್ರಯತ್ನದಲ್ಲಿದ್ದಾರೆ.ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳು, ಬೃಹತ್‌ ಯೋಜನೆಗಳಿಗೆ ಅನುದಾನ ಸೇರಿದಂತೆ ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬುದ್ಧಿವಂತಿಕೆಯಿಂದ ಬಜೆಟ್‌ಗೆ ತಯಾರಿ ಮಾಡಿಕೊಂಡಿದ್ದಾರೆ.

ಕಳೆದ ಬಾರಿ ಸಿಎಂ ಸಿದ್ದರಾಮಯ್ಯ 4.71 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದ್ದರು. ಕೇಂದ್ರ ಸರ್ಕಾರದಿಂದ ಬರಬೇಕಿದ್ದ ರಾಜ್ಯ ತೆರಿಗೆಯ ಪಾಲು, ಜಿಎಸ್‌ಟಿ ಹಂಚಿಕೆ ಕೊರತೆಯಿಂದಾಗಿ ರಾಜ್ಯದಲ್ಲಿ ಆದಾಯದ ಕೊರತೆಯಿತ್ತು. ಇದರಿಂದ ಗ್ಯಾರಂಟಿಗಳಿಗೆ ಹಾಗೂ ಯೋಜನೆಗಳಿಗೆ ಬಂಡವಾಳ ಹೂಡಿಕೆ ವೆಚ್ಚಗಳು ಕಷ್ಟವಾಗಿತ್ತು.

ಈ ಬಾರಿ ಸಿದ್ದರಾಮಯ್ಯ ಬಜೆಟ್‌ ಗಾತ್ರ ಹೆಚ್ಚಿಸಿ ಅದಕ್ಕೆ ಅನುಗುಣವಾಗಿ ಸಾಲ ಪಡೆಯುವ ಪ್ರಮಾಣವನ್ನು ಏರಿಕೆ ಮಾಡಿ ವಿತ್ತೀಯ ಕೊರತೆಯನ್ನು ಮಿತಿಯಲ್ಲಿ ತೋರಿಸಲು ಪ್ರಯತ್ನ ನಡೆಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!