ಬೆಂಗಳೂರು : ನಿರಂತರ ಅಧ್ಯಯನದಿಂದ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಗಳಿಸಲು ಅನುಕೂಲವಾಗುತ್ತದೆ ಎಂದು ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗದ ಶ್ರೀ ಶ್ರೀ ಶ್ರೀ ಶಾಂತವೀರ ಮಹಾಸ್ವಾಮಿಗಳು ಹೇಳಿದರು.

ಅವರು ತಿಗಳರಪಾಳ್ಯದ ಶ್ರೀಗಳ ಮಹಾಸಂಸ್ಥಾನ ಮಠದ ಸಂಚಾಲಿತ ಜೆ.ಬಿ ಕಾವೆಲ್ ಅನುದಾನಿತ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ, ೧೦ನೇ ವಿದ್ಯಾರ್ಥಿಗಳ ಬೀಳ್ಕೊಡುವ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ನಂತರ ಅವರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿ ಆಶಿರ್ವದಿಸಿ ಶುಭ ಕೋರಿ ಮಾತಾಡಿದರು.
ಶ್ರೀ ಶ್ರೀ ರೇಣುಕಾನಂದ ಮಹಾ ಸ್ವಾಮೀಜಿ ಗಳು ಮಾತನಾಡದರು.ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಲಗ್ಗೆರೆ ವಾರ್ಡಿನ ಪ್ರಭಾವಿ ನಾಯಕ ಲಗ್ಗೆರೆ ನಾರಾಯಣ ಸ್ವಾಮಿ ಮಾತನಾಡಿ ಈ ತಂತ್ರಜ್ಞಾನ ಯುಗದಲ್ಲಿ ಪರೀಕ್ಷೆ ಬರೆದು ಹೆಚ್ಚು ಅಂಕ ಪಡೆದರೆ ಸಾಲದು ಶಿಕ್ಷಣ ಜೊತೆಗೆ ಸಾಮಾಜಿಕ ಜ್ಞಾನ, ಸಂಸ್ಕಾರ ಸಂಸ್ಕೃತಿ ಧರ್ಮದ ಪೂಜ್ಯರ ಮತ್ತು ಕಲಿಸಿದ ಗುರುಗಳು, ಹೆತ್ತ ತಾಯಿ ತಂದೆ ಅವರಿಗೆ ಶಾಲೆಗೆ ಕೀರ್ತಿ ತರುವ ನಿಟ್ಟಿನಲ್ಲಿ ನಡೆದು ಕೊಂಡು ಹೋಗಬೇಕು ಎಂದು ವಿದ್ಯಾರ್ಥಿಗಳಿಗೆ ಗೌರವಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ ಹಾಡಿದರು.ಶಾಲೆಯ ಕಾರ್ಯಾಧ್ಯಕ್ಷ ಗಿರೀಶ್ ಸರ್ವರಿಗೂ ಸ್ವಾಗತಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಸುಧಾ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಲಾ ಅಭಿಮಾನಿ ರಂಗಸ್ವಾಮಿ, ರಾಜಗೋಪಾಲನಗರ ವಾರ್ಡಿನ ಕಾಂಗ್ರೆಸ್ ಪ್ರಭಾವಿ ಯುವ ಮುಖಂಡ ಹಾಗೂ ಬಿಬಿಎಂಪಿ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ಬಿ. ಜಗದೀಶ್ ಕುಮಾರ್, ನರಸಿಂಹಮೂರ್ತಿ ಸಮರ ಸಿಂಹ, ಕೃಷ್ಣ ಭಟ್ರು, ಶಿಕ್ಷಕರಾದ ಪರಶಿವ ಮೂರ್ತಿ, ಮಹೇಂದ್ರ, ಶಿಕ್ಷಕಿಯರಾದ ವಿಜಯಲಕ್ಷ್ಮಿ , ರಶ್ಮಿ ಮತ್ತು ಸಿಬ್ಬಂದಿ ವೃಂದದವರು ಪೋಷಕರು ವಿದ್ಯಾರ್ಥಿಗಳು ತಿಗಳರಪಾಳ್ಯದ ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
ವರದಿ :ಅಯ್ಯಣ್ಣ ಮಾಸ್ಟರ್




