Ad imageAd image

ಅಷ್ಟಕ್ಕೂ ಇಷ್ಟೊಂದು ಚಿನ್ನವನ್ನು ನಟಿ ರನ್ಯಾರಾವ್ ಇಟ್ಟುಕೊಂಡಿದ್ದು ಎಲ್ಲಿ?

Bharath Vaibhav
ಅಷ್ಟಕ್ಕೂ ಇಷ್ಟೊಂದು ಚಿನ್ನವನ್ನು ನಟಿ ರನ್ಯಾರಾವ್ ಇಟ್ಟುಕೊಂಡಿದ್ದು ಎಲ್ಲಿ?
WhatsApp Group Join Now
Telegram Group Join Now

ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಲಾಕ್ ಆಗಿದ್ದಾರೆ. ಸೋಮವಾರ ರಾತ್ರಿ ದುಬೈನಿಂದ ಬೆಂಗಳೂರಿಗೆ ಬಂದು ಇಳಿಯುತ್ತಿದ್ದಂತೆ ಏರ್‌ಪೋರ್ಟ್‌ನಲ್ಲೇ ರನ್ಯಾರನ್ನು ಲಾಕ್ ಮಾಡಿದ್ದ ಡಿಆರ್ಐ ಅಧಿಕಾರಿಗಳು ಬರೋಬ್ಬರಿ 14 ಕೆಜಿ ಶುದ್ಧ ಬಂಗಾರವನ್ನು ಸೀಜ್ ಮಾಡಿದ್ದಾರೆ.

ಅಷ್ಟಕ್ಕೂ ಇಷ್ಟೊಂದು ಚಿನ್ನವನ್ನು ರನ್ಯಾ ಇಟ್ಟುಕೊಂಡಿದ್ದು ಎಲ್ಲಿ? ಹೇಗೆ ಆಕೆ ಬೆಂಗಳೂರಿಗೆ ಚಿನ್ನ ತಂದಳು ಅನ್ನೋ ಪ್ರಶ್ನೆ ಮೂಡುವುದು ಸಹಜ. ನಟಿ ರನ್ಯಾಳನ್ನು ಲಾಕ್ ಮಾಡಿದ್ದ ಡಿಆರ್ಐ ಅಧಿಕಾರಿಗಳು ಆಕೆಯ ಬಳಿ ಇದ್ದ ಬರೋಬ್ಬರಿ 14 ಕೆಜಿ ಬಂಗಾರ ಹಾಗೂ ನಗದು ಸೇರಿದಂತೆ ಒಟ್ಟು 17 ಕೋಟಿ ಮೌಲ್ಯದ ವಸ್ತು ಸೀಜ್ ಮಾಡಿದ್ದಾರೆ.

ಹಾಗಾದರೆ ರನ್ಯಾ ಚಿನ್ನ ಇಟ್ಟುಕೊಂಡಿದ್ದು ಎಲ್ಲಿ? ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದ ರನ್ಯಾಳ ಮನೆಗೆ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೆ ಎರಡುವರೆ ಕೋಟಿ ರೂಪಾಯಿ ಹಣ ಸಿಕ್ಕಿದೆ. ಅಲ್ಲದೆ ಅಲ್ಲೂ ಕೂಡ ಚಿನ್ನಾಭರಣೆ ಸಿಕ್ಕಿದೆ. ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 14 ಕೆಜಿ 200 ಗ್ರಾಂ ಚಿನ್ನ ಹಾಗೂ ಮನೆಯಲ್ಲಿ 2.6 ಕೆಜಿ ಚಿನ್ನದ ಜೊತೆಗೆ 2.67 ಕೋಟಿ ನಗದು ಸೇರಿದಂತೆ ಒಟ್ಟು 17. 29 ಕೋಟಿ ಮೌಲ್ಯದ ಚಿನ್ನ ನಗದು ಸಿಕ್ಕಂತಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲೇ ಇಷ್ಟೊಂದು ಚಿನ್ನ ಸಿಕ್ಕಿರೋದು ಈವರೆಗಿನ ದಾಖಲೆಯಾಗಿದೆ. 15 ದಿನಕ್ಕೊಮ್ಮೆ ದುಬೈಗೆ ಹೋಗಿ ಬರ್ತಿದ್ದ ರನ್ಯಾ? ದುಬೈನಿಂದ ಅಕ್ರಮವಾಗಿ ಚಿನ್ನ ತಂದು ಸಿಕ್ಕಿಬಿದ್ದಿರುವ ನಟಿ ರನ್ಯಾ ದುಬೈಗೆ ಹೋಗಿದ್ದು ಇದೇ ಮೊದಲೇನು ಅಲ್ಲ. 15 ದಿನಕ್ಕೊಮ್ಮೆ ದುಬೈಗೆ ಹೋಗಿ ಬಂದಿರುವುದು ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ.

ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿದ್ದಾರೆ ರನ್ಯಾ. ಹೀಗೆ ದುಬೈಗೆ ಹೋಗಿ ಬರುತ್ತಿದ್ದ ರನ್ಯಾ ಅಂತಿಂತ ಚಿನ್ನ ತರುತ್ತಿರಲಿಲ್ಲ. 9.6ಗಿಂತಲೂ ಪರಿಶುದ್ಧವಾಗಿರುವ ಅಂರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ 999.90 ಮಾರ್ಕ್ ಇರುವ ಚಿನ್ನದ ಗಟ್ಟಿಯನ್ನು ಎತ್ತಿಕೊಂಡು ಬರುತ್ತಿದ್ದರು. ಹೀಗೆ ದುಬೈನಿಂದ ಬಂದ ರನ್ಯಾ ಅವರನ್ನು ತಪಾಸಣೆ ಇಲ್ಲದೆ ಕಾನ್ಸಟೇಬಲ್ ಒಬ್ಬರು ಕರೆ ತರುತ್ತಿದ್ದರು ಎಂದು ತಿಳಿದು ಬಂದಿದೆ.

ತಪಾಸಣೆ ಇಲ್ಲದೆ ರನ್ಯಾ ಬಂದಿದ್ದು ಹೇಗೆ? ದುಬೈನಿಂದ ಬೆಂಗಳೂರಿಗೆ ಪ್ರತಿಬಾರಿಯೂ ಬಂದು ಇಳಿದಾಗ ವಿಮಾನ ನಿಲ್ದಾಣದಲ್ಲಿ ತಪಾಸಣೆ ಇಲ್ಲದೆ ರನ್ಯಾ ಹೊರಗೆ ಬರುತ್ತಿದ್ದಳು. ಇದಕ್ಕೆ ಕಾನ್ಸಟೇಬಲ್ ಸಾಥ್ ನೀಡುತ್ತಿದ್ದ ಅನ್ನೋ ಅಂಶ ಬೆಳಕಿಗೆ ಬಂದಿದೆ. ಏರ್‌ಪೋರ್ಟ್‌ ಕಾನ್ಸಟೇಬಲ್ ಆದ ಬಸವರಾಜ್ ರನ್ಯಾ ರಾವ್ ಡಿಜಿಪಿ ಮಗಳು ಎಂದು ತಪಾಸಣೆ ಇಲ್ಲದೆ ಏರ್‌ಪೋರ್ಟ್‌ನಿಂದ ಕರೆತರುತ್ತಿದ್ದರು.

15 ದಿನದ ಹಿಂದೆಯೂ ರನ್ಯಾ ಇದೇ ರೀತಿ ಗಲಾಟೆ ಮಾಡಿಕೊಂಡು ತಪಾಸಣೆ ಇಲ್ಲದೆ ರನ್ಯಾ ವಿಮಾನ ನಿಲ್ದಾಣದಿಂದ ಬಂದಿದ್ದಾರೆ. ಹಾಗಾದರೆ ರನ್ಯಾ ಚಿನ್ನವನ್ನು ಹೇಗೆ ತರುತ್ತಿದ್ದರು ಗೊತ್ತಾ? ರನ್ಯಾ ಗೋಲ್ಡ್‌ ಇಟ್ಟುಕೊಮಡಿದ್ದು ಎಲ್ಲಿ? ರನ್ಯಾ ದುಬೈ ಏರ್‌ಪೋರ್ಟ್‌ಗೆ ಬಂದಾಗ ಏರ್‌ಪೋರ್ಟ್‌ನ ಟಾಯ್ಲೆಟ್‌ನಲ್ಲಿ ವ್ಯಕ್ತಿಯೊಬ್ಬ ಗೋಲ್ಡ್ ತಂದು ಕೊಟ್ಟಿದ್ದ. ಆಗ ರನ್ಯಾ ಗಮ್‌ ಮೂಲಕ ಗೋಲ್ಡ್‌ ಬಿಸ್ಕತ್‌ಗಳನ್ನು ಸೊಂಟಕ್ಕೆ ಬೆಲ್ಟ್‌ ರೀತಿ ಹಚ್ಚಿಕೊಂಡಿದ್ದಳು.

ಅಲ್ಲಿಂದ ನೇರವಾಗಿ ವಿಮಾನ ಹತ್ತಿ ಬೆಂಗಳೂರಿಗೆ ಬಂದು ಇಳಿದಿದ್ದಾಳೆ. ಈಕೆ ಡಿಜಿ ರಾಮಚಂದ್ರರಾವ್ ಪುತ್ರಿ ಅಂತಾ ತಪಾಸಣೆ ಮಾಡ್ತಿರಲಿಲ್ಲ. ಅಧಿಕಾರಿಗಳೇ ಈಕೆಯನ್ನು ಮುತುವರ್ಜಿ ವಹಿಸಿ ಹೊರಗೆ ಕರೆದುಕೊಂಡು ಬರ್ತಿದ್ರು. ಇದು ರನ್ಯಾ ಗೋಲ್ಡ್ ಸ್ಮಗ್ಲಿಂಗ್‌ಗೆ ಪ್ಲಸ್ ಪಾಯಿಂಟ್ ಆಗಿತ್ತು.  ದುಬೈನಿಂದ ಚಿನ್ನ ತಂದುಕೊಡಲು ರನ್ಯಾ ರಾವ್ ಪಡೆಯುತ್ತಿದ್ದ ಹಣ ಎಷ್ಟು ಗೊತ್ತಾ?” ಮದುವೆಯಾಗಿ ಮೂರೇ ತಿಂಗಳಿಗೆ ಸ್ಮಗ್ಲಿಂಗ್ ನಟಿ ರನ್ಯಾ ಮೂರು ತಿಂಗಳ ಹಿಂದೆಯಷ್ಟೇ ರಾಜ್ಯದ ಹೆಸರಾಂತ ರಾಜಕೀಯ ಕುಟುಂಬದ ಸಂಬಂಧಿಕರ ಜೊತೆ ತಾಜ್‌ವೆಸ್ಟೆಂಟ್‌ನಲ್ಲಿ ಮದುವೆ ಮಾಡಿಕೊಂಡಿದ್ದರು.

ಗಂಡ ಹೆಸರಾಂತ ಆರ್ಕಿಟೆಕ್ಟ್ ಕೂಡ ಆಗಿದ್ದಾನೆ. ಮೂರು ತಿಂಗಳ ಹಿಂದೆಯಷ್ಟೇ ಹೊಸ ಲಾವೆಲ್ಲಾ ಫ್ಲ್ಯಾಟ್‌ಗೆ ಶಿಫ್ಟ್ ಆಗಿದ್ದರು. ಹೀಗೆ ಹನಿಮೂನ್ ಸಂಭ್ರಮದಲ್ಲಿ ಇರಬೇಕಾದ ರನ್ಯಾ ಚಿನ್ನದ ಸ್ಮಗ್ಲಿಂಗ್‌ ಇಳಿದು ಲಾಕ್ ಆಗಿದ್ದಾಳೆ. ಒಮ್ಮೆ ಚಿನ್ನ ಸಾಗಿಸಿದ್ರೆ ಈಕೆಗೆ 50 ಲಕ್ಷ ಕಮಿಷನ್ ಸಿಗುತ್ತಿತ್ತು ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಈಕೆಯ ಜೊತೆಗೆ ಹಲವು ಪ್ರಭಾವಿಗಳು, ದೊಡ್ಡ ದೊಡ್ಡ ತಂಡವೇ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ರನ್ಯಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ನಾಳೆ ಭವಿಷ್ಯ ಹೊರಬೀಳುವ ಸಾಧ್ಯತೆ ಇದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!