ಲಂಡನ್ : ಬ್ರಿಟನ್ ಪ್ರವಾಸದಲ್ಲಿದ್ದ ಭಾರತದ ವಿದೇಶಾಂಗ ಸಚಿವ ಎಸ್ .ಜೈಶಂಕರ್ ಮೇಲೆ ಗುರುವಾರ ಲಂಡನ್‌ನಲ್ಲಿ ಖಲಿಸ್ವಾಮಿ ಉಗ್ರರು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಬಾಥಮ್ ಹೌಸ್ ಬಿಂತಕರ ಬಾವಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಜೈಶಂಕರ್ ಅವರು ತಮ್ಮ ಕಾರಿನಲ್ಲಿ ಹೊರಡುತ್ತಿದ್ದಾಗ ಈ ಘಟನೆ ನಡೆದಿದೆ.
ಬಾಥಮ್ ಹೌಸ್ ಕಾರ್ಯಕ್ರಮವನ್ನು ಮುಗಿಸಿಕೊಂಡು ಕಾರಿನಲ್ಲಿ ಜೈಶಂಕರ್ ಅವರು ಹೊರಡುವಾಗ ವ್ಯಕ್ತಿಯೊಬ್ಬ ಅವರ ಕಾರಿನ ಕಡೆಗೆ ಓಡಿಹೋಗಿ ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಲಂಡನ್ ಪೊಲೀಸರು ಈ ವ್ಯಕ್ತಿಯನ್ನು ಹಿಡಿದು ಜೈಶಂಕರ್ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಕಳುಹಿಸಿದ್ದಾರೆ. ವಿಶ್ವದ ಅಭಿವೃದ್ಧಿಯಲ್ಲಿ ಭಾರತದ ವಾಶ ಎಂಬ ವಿಷಯದ ಕುರಿತು ಸಂವಾದ ಅಧಿವೇಶನದಲ್ಲಿ ಭಾಗವಹಿಸಲು ಜೈಶಂಕರ್ ಲಂಡನ್‌ನ ಬಾಥಮ್ ಹೌಸ್ ಚಿಂತಕರ ಚಾವಡಿಗೆ ತೆರಳಿದ್ದರು. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ತಮ್ಮ ಕಾರಿನಲ್ಲಿ ಹಿಂತಿರುಗುತ್ತಿದ್ದರು.
ಇದೇ ವೇಳೆ ರಸ್ತೆಬದಿಯಲ್ಲಿ ಜಮಾಯಿಸಿದ ಖಲಿಸ್ವಾಮಿ ಉಗ್ರರು ಭಾರತ ವಿರೋಧಿ ಘೋಷಣೆಗಳನ್ನು ತೂಗಲು ಪ್ರಾರಂಭಿಸಿದ್ದಾರೆ. ಜೈಶಂಕರ್ ಕಾರಿನಲ್ಲಿ ಕುಳಿತಿದ್ದಾಗ ಒಬ್ಬ ವ್ಯಕ್ತಿ ಅವರ ಕಾರಿನ ಕಡೆಗೆ ಓಡಿ ಬಂದು ಘೋಷಣೆಗಳನ್ನು ಕೂಗುತ್ತಾ ಕಾರಿನ ಮುಂದೆ ಇದ್ದ ಭಾರತೀಯ ಧ್ವಜವನ್ನು ಹರಿದು ಹಾಕಿದ್ದಾನ, ವಿಡಿಯೊದಲ್ಲಿ ಖಲಿಸ್ತಾನಿ ವರ ಪ್ರತಿಭಟವಾಕಾರರು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಿರುವುದು ಹೇಳಿ ಬಂದಿದೆ.




