Ad imageAd image

ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ವಾತ್ಸಲ್ಯ ಮನೆ ಸಂಸದ ಸಾಗರ್ ಖಂಡ್ರೆ ಅವರಿಂದ ಹಸ್ತಾಂತರ

Bharath Vaibhav
ಶ್ರೀ ಕ್ಷೇ. ಧ. ಗ್ರಾ. ಯೋಜನೆಯ  ವಾತ್ಸಲ್ಯ ಮನೆ ಸಂಸದ ಸಾಗರ್ ಖಂಡ್ರೆ ಅವರಿಂದ ಹಸ್ತಾಂತರ
WhatsApp Group Join Now
Telegram Group Join Now

ಭಾಲ್ಕಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನೂತನವಾಗಿ ನಿರ್ಮಿಸಲಾದ ವಾತ್ಸಲ್ಯ ಮನೆಯ ಹಸ್ತಾಂತರ ಕಾರ್ಯವನ್ನು ಬೀದರ ಜಿಲ್ಲಾ ಸಂಸದರಾದ ಸಾಗರ ಈಶ್ವರ್ ಖಂಡ್ರೇ ಅವರು ಹಸ್ತಾಂತರಿಸಿದರ, ನಂತರ ಮಾತನಾಡಿದ ಅವರು ಸಮಾಜ ಸುಧಾರಣೆ ಹಾಗೂ ಅಭಿವೃದ್ಧಿ ಕಾಣಲು ಕಡುಬಡವರಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಮನೆಯು ಪ್ರಮುಖವಾಗಿದ್ದು ಜೀವನ ನಡೆಸಲು ಅಗತ್ಯವಾಗಿದೆ. ಪೂಜ್ಯರು ಬಡವರಿಗೆ ವಾತ್ಸಲ್ಯ ಮನೆ ರಚನೆ ಜೊತೆಗೆ ಹಾಗೂ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನಕಲ್ಯಾಣ ಮಾಡುತ್ತಿದ್ದಾರೆ, ಇಂತಹ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನಮ್ಮವತಿಯಿಂದ ಯಾವುದೇ ಸರಕಾರ ಬೇಕಾಗಿದ್ದಲ್ಲಿ ಸಂಪೂರ್ಣ ಸಾಥ ನೀಡುವುದಾಗಿ ತಿಳಿಸುತ್ತ
ಗ್ರಾಮೀಣ ಭಾಗದ ನಿರ್ಗತಿಕರ ಜೀವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಾತ್ಸಲ್ಯ ಮನೆ ಎಂದು ನಾಮಕರಣ ಮಾಡಿ ನಿರ್ಮಿಸಿ ಕೊಟ್ಟು ಬಡವರ ಬಾಳಲ್ಲಿ ಬೇಳಕಾಗಿದೆ ಎಂದು ನುಡಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣಕುಮಾರ ನಿರ್ಗತಿಕ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವುದರ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇರವಾಗಿದೆ. ಇಳಿ ವಯಸ್ಸಿನಲ್ಲಿ ಕುಟುಂಬಕ್ಕೆ ನೆಮ್ಮದಿ ಬೇಕಾದ ಸೂರನ್ನು ನಿರ್ಮಿಸಿರುವುದು ಅಗತ್ಯವಾಗಿದ್ದು ಯೋಜನೆ ಈ ಕೆಲಸವನ್ನು ಯೋಜನೆಯು ರಾಜ್ಯ ವ್ಯಾಪ್ತಿಯಲ್ಲಿ ಮಾಡುತ್ತ ಕಳೆದ ವರ್ಷ 4 ವಾತ್ಸಲ್ಯ ಮನೆಗಳನ್ನು ಈ ವರ್ಷ 4 ವಾತ್ಸಲ್ಯ ಮನೆಗಳನ್ನು ಮಾನ್ಯರ ಹಸ್ತದಿಂದ ಹಸ್ತಾಂತರ ಮಾಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ, ಪುರಸಭೆ ಅಧ್ಯಕ್ಷೇ ಶಶಿಕಲಾ ಅಶೋಕ ಸಿಂಧನಕೇರೆ ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಜನಜಾಗೃತಿ ಮಾಧ್ಯಮ ಸಲಹೆಗಾರ ಸಂತೊಷ ಬಿಜಿ.ಪಾಟೀಲ ಸದಸ್ಯರಾದ ಶಿವರಾಜ ಮಲ್ಲೇಶಿ ದೀಪಕ ಥಮಕೆ, ತಾಲೂಕು ಯೋಜನಾಧಿಕಾರಿ ಸಂತೋಷ ಟಿ ಎನ್ ಮೇಲ್ವಿಚಾರಕರು, ಮತ್ತು ಜ್ಞಾನವಿಕಾಸ ಸಮನ್ವಯಧಿಕಾರಿಗಳು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ವರದಿ: ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!