ಒಬ್ಬ ಮಹಿಳೆ ಜೀವನದಲ್ಲಿ ಆರ್ಥಿಕವಾಗಿ ಸ್ವಾತಂತ್ರ್ಯ ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ. ಹಾಗಂತ ಎಲ್ಲಾ ಮಹಿಳೆಯರಿಗೂ ಕೂಡ ಮನೆಯಿಂದ ಹೊರ ಹೋಗಿ ದುಡಿದು ಬರಲು ಸಾಧ್ಯವಾಗುವುದಿಲ್ಲ. ಇದಕ್ಕೆ ಚಿಕ್ಕ ಮಕ್ಕಳು, ವಯಸ್ಸಾದ ತಂದೆ ತಾಯಿ, ಅತ್ತೆ ಮಾವಂದಿರನ್ನು ನೋಡಿಕೊಳ್ಳುವ ಜವಾಬ್ದಾರಿ, ಇನ್ನೂ ಕೆಲವರಿಗೆ ಜೀವನವನ್ನೇ ಒತ್ತಡಕ್ಕೆ ತಳ್ಳುವ ಕೆಲಸದ ಬಗ್ಗೆ ನಿರಾಸಕ್ತಿ, ಹೀಗೆ ಅನೇಕ ಕಾರಣಗಳಿಂದ ಇಂದು ಲಕ್ಷಾಂತರ ಮಹಿಳೆಯರು ಮನೆ ಬಿಟ್ಟು ಕೆಲಸಕ್ಕೆ ಹೋಗುತ್ತಿಲ್ಲ.
ಇಂತವರ ಜೀವನಕ್ಕೆ ವರದಾನವಾಗಿ ಬಂದಿದ್ದೇ ಯೂಟ್ಯೂಬ್. ಹೌದು ಇಂದು ಯೂಟ್ಯೂಬ್ ಲಕ್ಷಾಂತರ ಮಹಿಳೆಯರ ದುಡಿಮೆಯ ಮೂಲವಾಗಿದೆ. ತಮ್ಮ ಕ್ರಿಯಾಶೀಲತೆಯಿಂದ ಜನಪ್ರಿಯತೆ ಹಾಗೂ ಆರ್ಥಿಕವಾಗಿ ಸಬಲರಾದ ಕನ್ನಡದ ಕೆಲವು ಮಹಿಳಾ ಯೂಟ್ಯೂಬರ್‌ಗಳ ವಿವರ ಇಲ್ಲಿದೆ. ರೇಖಾ ಅಡುಗೆ ರೇಖಾ ಅಡುಗೆ ಯೂಟ್ಯೂಬ್ ಚಾನೆಲ್ ಹೆಸರಿಗೆ ತಕ್ಕಂತೆ ಇದೊಂದು ಪಕ್ಕಾ ಆಹಾರದ ರೆಸಿಪಿಗಳನ್ನು ಸಿದ್ಧಪಡಿಸಿ ತೋರಿಸುವ ಚಾನೆಲ್.
ಕನ್ನಡ ಯೂಟ್ಯೂಬ್‌ನಲ್ಲಿ ಅಗ್ರಸ್ಥಾನದಲ್ಲಿ ರೇಖಾ ಅಡುಗೆ ಚಾನೆಲ್ ಅವರನ್ನು ಕಾಣಬಹುದು. ಈ ಚಾನೆಲ್‌ನ ಮಾಲಕಿ ರೇಖಾ. ಮಧ್ಯಮ ವರ್ಗದಿಂದ ಬಂದಿರುವ ರೇಖಾ ಇಂದು ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿ. ಯಾಕೆಂದರೆ ಹೆಣ್ಣೆಂದರೆ ಅಡುಗೆ ಮನೆಯ ನಾಲ್ಕು ಗೋಡೆಯೊಳಗಿರಬೇಕು ಎಂದು ಜಡಿಯುವವರ ಮಧ್ಯೆ, ಹೆಣ್ಣು ಮನಸ್ಸು ಮಾಡಿದರೆ ಅದೇ ಅಡುಗೆ ಮನೆಯಿಂದ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು ಎನ್ನುವುದನ್ನು ತೋರಿಸಿಕೊಟ್ಟವರು.
ಎಸ್‌ಎಸ್‌ಎಲ್‌ಸಿಯಲ್ಲಿ ಫೇಲ್ ಆಗಿದ್ದ ರೇಖಾ ಮನೆಯ ಪರಿಸ್ಥಿತಿ ನೋಡಿ ದುಡಿಯಲು ಆರಂಭಿಸುತ್ತಾರೆ. ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ರೇಖಾ ಅವರಿಗೆ ಅಡುಗೆಯಲ್ಲಿ ಎಲ್ಲಿಲ್ಲದ ಒಲವಿರುತ್ತದೆ. ಹೀಗಾಗಿ ಗಾರ್ಮೆಂಟ್‌ನಲ್ಲಿ ನಡೆಸುವ ಅಡುಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದೇ ಪದೇ ಪ್ರಶಸ್ತಿಗಳನ್ನು ಪಡೆಯುತ್ತಿರುತ್ತಾರೆ.
ಇದನ್ನು ಗಮನಿಸಿದ ಅವರ ತಮ್ಮ ಅಡುಗೆ ಯೂಟ್ಯೂಬ್‌ವೊಂದನ್ನು ತೆರೆದುಕೊಡುತ್ತಾರೆ. ಬಳಿಕ ಗಾರ್ಮೆಟ್ಸ್ ಬಿಟ್ಟು ಯೂಟ್ಯೂಬ್ ಅನ್ನೇ ಉದ್ಯೋಗವಾಗಿ ತೆಗೆದುಕೊಂಡ ರೇಖಾ ಅವರು ಇಂದು ಕ್ಯಾಟರಿಂಗ್ ಕೂಡ ನಡೆಸುತ್ತಿದ್ದಾರೆ. ಇನ್ನು ರೇಖಾ ಅಡುಗೆ ಯೂಟ್ಯೂಬ್ ಚಾನೆಲ್‌ಗೆ 2.74M subscribers ಇದ್ದು, ಯೂಟ್ಯೂಬ್ ಗಳಿಕೆಯಲ್ಲೇ ರೇಖಾ ಅವರು ಯಶಸ್ಸು ಕಂಡಿದ್ದಾರೆ. ಮಾಯಾ ಲೋಕ ಮಾಯಾ ಲೋಕ ಯೂಟ್ಯೂಬ್ ಚಾನೆಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಮಾಯಾ ಲೋಕ ಎನ್ನುವುದಕ್ಕಿಂತ ಚಿನ್ನಿಮಾ ಚಾನೆಲ್ ಅಂದರೆ ಬಹುಶಃ ಇನ್ನೂ ಬೇಗ ಗೊತ್ತಾಗಬಹುದು.
ಹೌದು ಮಾಯಾ ಲೋಕ ಯೂಟ್ಯೂಬ್ ಚಾನೆಲ್ ಎನ್ನುವುದು ದಿನ ನಿತ್ಯದ ಜೀವನದ ವ್ಲಾಗ್ ಆಗಿದ್ದು, ಇವರ ಕ್ರಿಯೆಟಿವಿಟಿ ಎಂಥವರಿಗಾದರೂ ಇಷ್ಟವಾಗುತ್ತದೆ. ಈ ಚಾನೆಲ್‌ನ ಮಾಲಕಿ ರೇಖಾ ಒಬ್ಬ ಮನೆಯಲ್ಲಿರುವ ಮಹಿಳೆ ಹೇಗೆ ಪ್ರತಿನಿತ್ಯ ಜೀವನ ಹೇಗಿರುತ್ತದೆ ಎನ್ನುವುದನ್ನು ವ್ಲಾಗ್ ಮೂಲಕ ತೋರಿಸುತ್ತಾರೆ.: ಹೆಣ್ಣಿನ ಮಹತ್ವ ತಿಳಿದವರ ಬಾಳು ಬಂಗಾರ: ಇಲ್ಲದಿದ್ರೆ.. ಒಂದು ಸುಂದರ ಕುಟುಂಬದ ಯೂಟ್ಯೂಬ್ ಚಾನೆಲ್ ಇದಾಗಿದ್ದು, ಇವರು ಯೂಟ್ಯೂಬ್ ವಿಡಿಯೋಗಾಗಿ ರಚಿಸಿರುವ ತೋಟದ ಮನೆಯಂತೂ ಎಂತವರನ್ನಾದರೂ ಆಕರ್ಷಿಸುತ್ತದೆ. ಕೆಲಸದ ಒತ್ತಡ ಜೀವನಕ್ಕೆ ಬ್ರೇಕ್ ಹಾಕಿ ಅಂತಹ ಮನೆಯೊಂದಲ್ಲಿ ಸಮಯ ಕಳೆಯಬೇಕು ಎನ್ನುವ ಮನಸ್ಸಾಗುತ್ತದೆ. ಪತಿ-ಪತ್ನಿ ಇಬ್ಬರೂ ಈ ಯೂಟ್ಯೂಬ್‌ಗಾಗಿ ಶ್ರಮಿಸುತ್ತಿದ್ದು, ಈಗಾಗಲೇ 2.72M subscribers ಹೊಂದಿದ್ದಾರೆ.
ಇನ್ನು ಯೂಟ್ಯೂಬ್ ನಿಂದ ತಮ್ಮ ಜೀವನವೇ ಬದಲಾಯಿತು ಎಂದು ರೇಖಾ ಅವರು ಅನೇಕ ಬಾರಿ ಹೇಳುತ್ತಾರೆ. ಅವರ ವ್ಲಾಗ್‌ಗಳನ್ನು ನೋಡುವವರಿಗೆ ಆರ್ಥಿಕವಾಗಿ ಅವರ ಜೀವನ ಹೇಗೆ ಬದಲಾಗಿದೆ ಎನ್ನುವುದನ್ನು ನೋಡಬಹುದು. ಮಧು ಗೌಡ ಹಾಗೂ ನಿಶಾ ರವೀಂದ್ರ ಕನ್ನಡ ಯೂಟ್ಯೂಬ್ ಅಂದರೆ ಮಧು ಗೌಡ ಹಾಗೂ ನಿಶಾ ರವೀಂದ್ರ ಥಟ್ ಅಂತ ನೆನಪಾಯಿಗೇ ಆಗುತ್ತದೆ. ಮಧು ಗೌಡ ಹಾಗೂ ನಿಶಾ ರವೀಂದ್ರ ಬೇರೆ ಬೇರೆ ಚಾನೆಲ್ ಹೊಂದಿದ್ದು, ನಿಶಾ ರವೀಂದ್ರ ಚಾನೆಲ್‌ನಲ್ಲಿ 1.11M subscribers ಹೊಂದಿದ್ದಾರೆ ಇನ್ನೂ ಮಧು ಗೌಡ 735K subscribers ಹೊಂದಿದ್ದಾರೆ.
ಒಂದು ಫ್ಯಾಮಿಲಿ ವ್ಲಾಗ್‌ಗಳಿರುವ ಮಧು ಗೌಡ ಹಾಗೂ ನಿಶಾ ರವೀಂದ್ರ ಯೂಟ್ಯೂಬ್‌ನಲ್ಲಿ ಕಾಮಿಡಿ ವಿಡಿಯೋಗಳನ್ನು ಕೂಡ ನೀವು ನೋಡಬಹುದು. ಇನ್ನು ಸಂಬಂಧದಲ್ಲಿ ಇವರಿಬ್ಬರು ಅತ್ತಿಗೆ ನಾದಿನಿ ಆಗಿದ್ದು, ನಿಶಾ ರವೀಂದ್ರ ಅಣ್ಣ ನಿಖಿಲ್ ಅವರನ್ನು ಮಧು ಗೌಡ ಇತ್ತೀಚಿಗೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇವರ ಮದುವೆ ನೋಡಿದವರು ಕರ್ನಾಟಕದ ಅಂಬಾನಿ ಮದುವೆ ಎಂದಿದ್ದಾರೆ. ಅಲ್ಲದೇ ಕಳೆದ ತಿಂಗಳು ಥಾರ್ ಕೂಡ ಖರೀದಿ ಮಾಡಿದ್ದಾರೆ. ಕಾಲೇಜು ಹೋಗುತ್ತಲೇ ಯೂಟ್ಯೂಬ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಿಂದ ನಿಶಾ ರವೀಂದ್ರ ಆರ್ಥಿಕವಾಗಿ ತಮ್ಮ ಕುಟುಂಬಕ್ಕೆ ಬೆಂಬಲವಾಗಿರುವುದು ಮೆಚ್ಚಲೇಬೇಕು.
ವರ್ಷ ಕಾವೇರಿ ಸ್ಟೈಲ್ ಅಂದರೆ ವರ್ಷ ಕಾವೇರಿ, ಸಖತ್ ಸ್ಟೈಲಿಶ್ ಆಗಿ ಕಾಣುವ ವರ್ಷ ಕಾವೇರಿ ಪಕ್ಕಾ ಹಿರೋಯಿನ್ ಫೀಲ್ ಕೊಡುವ ಕನ್ನಡದ ಹುಡುಗಿ. ತಮ್ಮ ಸೋಶಿಯಲ್ ಮೀಡಿಯಾ ವಿಡಿಯೋಗಳಲ್ಲೇ ಹಿರೋಯಿನ್ ಫೀಲ್ ಕೋಡುವ ಕೊಡಗಿನ ಬೆಡಗಿ ವರ್ಷ ಕಾವೇರಿ ಅದ್ಯಾಕೆ ಈವರೆಗೂ ಕಿರುತೆರೆಗೆ ಕಾಲಿಟ್ಟಿಲ್ಲ ಎನ್ನುವುದು ಗೊತ್ತಿಲ್ಲ. ಪ್ರತಿ ಬಾರಿ ಬಿಗ್ ಬಾಸ್ ಆರಂಭವಾಗುವ ಸುದ್ದಿ ಹೊರಬೀಳುತ್ತಿದ್ದಂತೆ ಸಂಭಾವ್ಯ ಪಟ್ಟಿಯಲ್ಲಿ ವರ್ಷ ಕಾವೇರಿ ಹೆಸರು ಪಕ್ಕಾ ಇದ್ದೇ ಇರುತ್ತದೆ.
ಅಷ್ಟರ ಮಟ್ಟಿಗೆ ತಮ್ಮ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಕೆಲವೊಂದು ವಿಚಾರದಲ್ಲಿ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಕುಗ್ಗಿದ್ದ ವರ್ಷ, ಹುಡುಗಿಯರು ಡಿಪ್ರೆಷನ್‌ನಿಂದ ನೋವಿನಿಂದ ಹೇಗೆ ಸ್ಟ್ರಾಂಗ್ ಕಂಬ್ಯಾಕ್ ಮಾಡಬೇಕು ಎನ್ನುವುದಕ್ಕೆ ಉದಾಹರಣೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ವರ್ಷ ಕಾವೇರಿ ಡಿಫರೆಂಟ್ ಸೈಲ್‌ನಲ್ಲಿ ಮೇಕಪ್ ಮಾಡುವ ಹಾಗೂ ತಮ್ಮ ಪ್ರತಿನಿತ್ಯ ಜೀವನದ ವ್ಲಾಗ್‌ಗಳನ್ನು ತಮ್ಮ ಯೂಟ್ಯೂಬ್‌ನಲ್ಲಿ ಹಾಕುತ್ತಾರೆ. ಈಗಾಗಲೇ 1.41M subscribers ಹೊಂದಿರುವ ವರ್ಷ ಕಾವೇರಿ ಯೂಟ್ಯೂಬ್‌ನಿಂದಲೂ ಆದಾಯ ಗಳಿಸುತ್ತಿದ್ದಾರೆ. ತಂದೆ-ತಾಯಿ ಹಾಗೂ ತಂಗಿ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿರುವ ವರ್ಷ ಚಿಕ್ಕ ವಯಸ್ಸಿಗೆ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಅನಿತಾ ಶಮಂತ್ ಅನಿತಾ ಶಮಂತ್ ಇವರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು ಯಾಕೆಂದರೆ ಮುಂದಿನ ದಿನಗಳಲ್ಲಿ ನೀವು ಯೂಟ್ಯೂಬ್ ಮಾಡಬೇಕು ಅಂದರೆ ನಿಮಗೆ ಇವರು ಖಂಡಿತ ಸಹಾಯವಾಗುತ್ತಾರೆ ಮುಂದೆ ಓದಿ. ಮಾಹಿತಿಯುಕ್ತ ವಿಡಿಯೋಗಳನ್ನೇ ಮಾಡುವ ಅನಿತಾ ಶಮಂತ್ ಅವರು ಯೂಟ್ಯೂಬ್ ಅಕಾಡೆಮಿಯನ್ನು ಹೊಂದಿದ್ದಾರೆ. ಈ ಮೂಲಕ ಹೊಸದಾಗಿ ಯೂಟ್ಯೂಬ್ ಮಾಡುವವರಿಗೆ ಕ್ಲಾಸ್‌ಗಳನ್ನು ನೀಡಿ ಯೂಟ್ಯೂಬ್‌ನಿಂದ ದುಡಿಮೆ ಹೇಗೆ ಎನ್ನುವುದನ್ನು ಹೇಳಕೊಡುತ್ತಾರೆ. ಹೊಂದಿರುವ ಅನಿತಾ ಶಮಂತ್ ಅವರು ತಾವಿಂದು ಏನೇ ಗಳಿಸಿದ್ದರೂ ಕೂಡ ಅದು ಯೂಟ್ಯೂಬ್‌ನಿಂದಲೇ ಎಂದು ಅನೇಕ ಬಾರಿ ತಮ್ಮ ವಿಡಿಯೋಗಳಲ್ಲಿ ಹೇಳಿಕೊಳ್ಳುತ್ತಾರೆ. ಈ ಮೂಲಕ ತಮ್ಮಂತೆ ಮನೆಯಲ್ಲಿರುವ ಮಹಿಳೆಯರು ದುಡಿದು ಗಳಿಸಬೇಕು ಎನ್ನುವುದಕ್ಕೆ ಪ್ರೋತ್ಸಾಹ ನೀಡುತ್ತಾರೆ.




