Ad imageAd image

ಅಮೆರಿಕಾ ಒತ್ತಡಕ್ಕೆ ಮಣಿಯಿತೇ ಮೋದಿ ಸರ್ಕಾರ: ಸುಂಕ ಕಡಿತಕ್ಕೆ ಭಾರತ ಒಪ್ಪಿದೆ ಎಂದ ಡೊನಾಲ್ಡ್ ಟ್ರಂಪ್

Bharath Vaibhav
ಅಮೆರಿಕಾ ಒತ್ತಡಕ್ಕೆ ಮಣಿಯಿತೇ ಮೋದಿ ಸರ್ಕಾರ: ಸುಂಕ ಕಡಿತಕ್ಕೆ ಭಾರತ ಒಪ್ಪಿದೆ ಎಂದ ಡೊನಾಲ್ಡ್ ಟ್ರಂಪ್
WhatsApp Group Join Now
Telegram Group Join Now

ನವದೆಹಲಿ: ಸುಂಕ ಕಡಿತಕ್ಕೆ ಭಾರತ ಒಪ್ಪಿಕೊಂಡಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆ ನೀಡಿದ್ದು, ಈ ಹೇಳಿಕೆ ದೊಡ್ಡ ಸಂಚಲವನ್ನು ಸೃಷ್ಟಿಸಿದೆ.

ಶ್ವೇತಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, “ಭಾರತದ ಸುಂಕ ದರಗಳು ಅಸಹನೀಯವಾಗಿವೆ. ಭಾರತದ ಸುಂಕ ದರಕ್ಕೆ ಪ್ರತಿಯಾಗಿ ಅಮೆರಿಕವೂ ಸುಂಕ ದರ ಹೆಚ್ಚಿಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಹೇಳಿದ್ದಾರೆ..

ಭಾರತ ನಮ್ಮ ಮೇಲೆ ಭಾರಿ ಸುಂಕ ವಿಧಿಸುತ್ತದೆ. ಈ ಬೃಹತ್ ಪ್ರಮಾಣದ ಸುಂಕದಿಂದ ಅದು ದ್ವಿಪಕ್ಷೀಯ ವ್ಯಾಪಾರದಲ್ಲಿ ಭಾರೀ ಲಾಭ ಗಳಿಸುತ್ತಿದೆ. ಭಾರತಕ್ಕೆ ನೀವು ಏನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ಈಗ ಅಮೆರಿಕದ ಪ್ರತಿ ಸುಂಕ ನೀತಿಗೆ ಹೆದರಿ ತನ್ನ ಸುಂಕ ದರಗಳನ್ನು ಕಡಿಮೆ ಮಾಡಲು ಮುಂದಾಗಿದೆ. ನಾವು ಅವರ ಅನ್ಯಾಯಯುತ ಸುಂಕ ನೀತಿಯನ್ನು ಬಹಿರಂಗಪಡಿಸುತ್ತೇವೆ ಎಂಬ ಭಯದಲ್ಲಿ ಅವರು ಸುಂಕ ದರಗಳನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆಂದು ತಿಳಿಸಿದ್ದಾರೆ.

ಮುಂದಿನ ತಿಂಗಳುಗಳಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ಪ್ರಯತ್ನವನ್ನು ಟೆಸ್ಲಾ ನಡೆಸುತ್ತಿದ್ದು, ಶೂನ್ಯ ಸುಂಕದ ನಿರೀಕ್ಷೆಯಲ್ಲಿದೆ. ಇದರ ನಡುವಲ್ಲೇ ಟ್ರಂಪ್ ಅವರ ಈ ಹೇಳಿಕೆ ಹಲವು ಚರ್ಚೆಗಳನ್ನು ಹುಟ್ಟುಹಾಕುವಂತೆ ಮಾಡಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!