ಚೊಳಚಗುಡ್ಡ: ನವಚೇತನ ಎಜ್ಯುಕೇಶನ್ ಸೊಸೈಟಿ ಚೊಳಚಗುಡ್ಡ ಇದರ ಅಡಿಯಲ್ಲಿ ನಡೆಯುತ್ತಿರುವ ಶಾಕoಭರೀ ವಿದ್ಯಾನಿಕೇತನ ಶಾಲೆಗೆ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದಂತಹ ಶ್ರೀ ಶ್ರೀ ಶ್ರೀ ವಿಧುಶೇಖರಭಾರತೀ ಜಗದ್ಗುರುಗಳು ಭೇಟಿ ನೀಡಿ ಹೊಸದಾಗಿ ಶಾಲೆಯ ಮಹದ್ವಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಸರಸ್ವತಿ ದೇವಿಯ ವಿಗ್ರಹದ ಕಲ್ಲಿಗೆ ಪೂಜೆಯನ್ನು ಮಾಡಿದರು.
ನಂತರ ಶಾಲೆಯ ಆವರಣಕ್ಕೆ ಆಗಮಿಸಿ 2018ರಲ್ಲಿ ತಾವು ಕಟ್ಟಡದ ಭೂಮಿ ಪೂಜೆಯನ್ನು ನೆರವೇರಿಸಿದ್ದ ಆ ಕಟ್ಟಡವು ನಿರ್ಮಾಣಗೊಂಡಿರುವುದನ್ನು ನೋಡಿ ಅತೀವ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ||ಬಸವರಾಜ ಮುಲ್ಕಿ ಪಾಟೀಲ ಹಾಗೂ ನಿರ್ದೇಶಕರುಗಳಾದಂತಹ ಶ್ರೀ ಮಹೇಶಗೌಡ ತಲೇಗೌಡರ ಡಾ|| ಸಿದ್ದನಗೌಡ ಪಾಟೀಲ ಗೌರವ ಕಾರ್ಯದರ್ಶಿಗಳಾದಂತಹ ಡಾ|| ಗಿರೀಶ ದಾನಪ್ಪಗೌಡರ ಡಾ|| ಶಂಕರಗೌಡ ಸಂಕದಾಳ ಸಂಸ್ಥೆಯ ಎಲ್ಲ ನಿರ್ದೇಶಕ ಮಂಡಳಿಯವರು ಹಾಗೂ ಮುಖ್ಯೋಪಾಧ್ಯರಾದ ಪ್ರಶಾಂತ ಪಡಿಯಪ್ಪನವರ ಸಿಬಿಎಸ್ಸಿ ಶಾಲೆಯ ಪ್ರಾಚಾರ್ಯರಾದ ರಮೇಶ ಶಹಬಾದ ಹಾಗೂ ಎರಡು ಶಾಲೆಯ ಶಿಕ್ಷಕ ವರ್ಗದವರು ಊರಿನ ಗುರುಹಿರಿಯರು ಮುದ್ದು ಮಕ್ಕಳು ಹಾಗೂ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಅರ್ಚಕರು ಬೋಧಕ ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ




