Ad imageAd image

ಸಾವಯುವ ಕೃಷಿಯಿಂದ ಆರೋಗ್ಯವಂತ ಸಮಾಜ ನಿರ್ಮಾಣ: ಸವದಿ

Bharath Vaibhav
ಸಾವಯುವ ಕೃಷಿಯಿಂದ ಆರೋಗ್ಯವಂತ ಸಮಾಜ ನಿರ್ಮಾಣ: ಸವದಿ
WhatsApp Group Join Now
Telegram Group Join Now

ಅಥಣಿ: ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಕೆ ಮಾಡದೆ ಮಹಿಳಾ ಸಂಘಗಳ ಮೂಲಕ ಸಾವಯವ ಕೃಷಿಯನ್ನು ಪ್ರಾರಂಭಿಸಿ ಮನೆಯಲ್ಲಿರುವ ಗೊಬ್ಬರ ಬಳಕೆ ಮಾಡುವ ಮೂಲಕ ಆಹಾರ ಧಾನ್ಯಗಳು, ತರಕಾರಿಗಳನ್ನು ಬೆಳೆದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು

ಅವರು ಅಥಣಿ ಪಟ್ಟಣದ ಕೃಷಿ ಇಲಾಖೆಯ ವಿಶ್ವ ಬ್ಯಾಂಕಿನ ರಿವಾರ್ಡ ಯೋಜನೆಯ ಜೀವನೋಪಾಯ ಘಟಕದಡಿ ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ವಿತರಣಾ ಕಾರ್ಯಕ್ರಮಕ್ಕೆ ಸಸಿಗೆ ನೀರು ಎರೆಯುವ ಮೂಲಕ ಸ್ವ ಸಹಾಯ ಸಂಘಗಳಿಗೆ 50 ಸಾವಿರ ರೂ.ಗಳ ಚೇಕ್ ವಿತರಣೆ ಮಾಡಿ ಮಾತನಾಡಿದರು ಬೆಳಗಾವಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅಥಣಿ ತಾಲೂಕಿನ ತೆಲಸಂಗ ಹಾಗೂ ಅರಟಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಬ್ಯಾಡಗಿ, ಹಾಲಳ್ಳಿ ಗ್ರಾಮಗಳ 27 ಸ್ವಸಹಾಯ ಸಂಘಗಳಿಗೆ ತಲಾ 50 ಸಾವಿರಗಳಂತೆ 36 ಲಕ್ಷ ರೂ.ಗಳ ಸಹಾಯಧನ ನೀಡಲಾಗಿದೆ. 2 ಒಕ್ಕೋಟಗಳಿಗೆ ತಲಾ 4 ಲಕ್ಷಗಳಂತೆ 8 ಲಕ್ಷ ರೂ.ಗಳನ್ನು ಹಾಗೂ ಬೀಜ ಧನವಾಗಿ 8 ಜನರಿಗೆ 1 ಲಕ್ಷ 60 ಸಾವಿರ ಸಹಾಯ ಧನದ ಚೆಕ್ ವಿತರಣೆ ಮಾಡಲಾಗಿದೆ.

ವಿಶೇಷ ಅನುದಾನವನ್ನು ಪಡೆದಿರುವ ಸ್ವಸಹಾಯ
ಸಂಘಗಳ ಸದಸ್ಯರು ಇದರ ಸದುಪಯೋಗವನ್ನು ಮಾಡಿಕೊಂಡು ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಬಳಕೆ ಮಾಡಬೇಕು. ಸ್ವ ಸಹಾಯ ಸಂಘಗಳ ಉದ್ದಮಶೀಲತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಅದರ ಜೊತೆಗೆ ಇಂದಿನ ದಿನಮಾನಗಳಿಗೆ ಅತ್ಯಾವಶ್ಯವಿರುವ ಸಾವಯವ ಕೃಷಿ ಪದ್ಧತಿ ಕಡೆ ಹೆಚ್ಚು ಆದ್ಯತೆ ನೀಡಬೇಕು ಅದರಿಂದ ಜನರ ಜೀವನ ಆರೋಗ್ಯ ಸುಧಾರಣೆಗೆ ಸಂಘಗಳ ಮೂಲಕ ಕಾರ್ಯಪ್ರವರ್ತಕವಾಗಿಬೇಕು. ಆದರಿಂದ ಮಹಿಳಾ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿರುವ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ತೆಲಸಂಗ ಗ್ರಾ.ಪ ಅಧ್ಯಕ್ಷ ಭಾರತಿ ಲೋಕಾಂಡೆ, ಅರಟಾಳ ಗ್ರಾ.ಪ ಅಧ್ಯಕ್ಷ ಶಾಂತಾಬಾಯಿ ಹಟ್ಟಿ, ಮುಖಂಡರಾದ ಶ್ರೀಶೈಲ ನಾಯಿಕ, ರಾಮ ಪೂಜಾರಿ, ರಾಮನಗೌಡ ಪಾಟೀಲ, ಶಿವಪ್ಪ ಹಟ್ಟಿ, ಶಕ್ತಿ ಪಾಟೀಲ, ಮಲ್ಲಪ್ಪ ಪೂಜಾರಿ, ಜಡೇಪ್ಪ ಕುಂಬಾರ, ಮಲ್ಲು ಕುಳ್ಳೋಳಿ, ಮುತ್ತು ಮೊಕಾಶಿ, ಪ್ರದೀಪ್ ನಂದಗಾಂವ, , ಅಧಿಕಾರಿಗಳಾದ ರಮೇಶ ಚೌಗಲಾ ಸೇರಿದಂತೆ ಸ್ವ ಸಹಾಯ ಸಂಘಗಳ ಸದಸ್ಯರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಶಿಕ್ಷಕರಾದ ಸಂಗಮೇಶ ಹಚ್ಚಡದ ನಿರೂಪಿಸಿದರು. ಕೃಷಿ ಸಹಾಯಕ ನಿರ್ದೇಶಕ ನಿಂಗಣ್ಣ ಬಿರಾದಾರ ಸ್ವಾಗತಿಸಿ ವಂದಿಸಿದರು.

ವರದಿ ರಾಜು ವಾಘಮಾರೆ.
ಭಾರತ ವೈಭವ ನ್ಯೂಜ್ ಅಥಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!