ಬೆಂಗಳೂರು : ಹೆಣ್ಣು ಮಕ್ಕಳನ್ನು ಗೌರವಿಸುವುದು ನಮ್ಮ ಕರ್ತವ್ಯಡಾ. ಭೀಮ ನಾಯಕ್ ಹೆಣ್ಣು ಅಂದರೆ ತಾಯಿ, ಅಕ್ಕ ತಂಗಿ ಹಾಗೂ ಮಡದಿಯಾಗಿ ನಿಸ್ವಾರ್ಥತೆಯಿಂದ ಹಗಲಿರುಳೆನ್ನದೆ ತನ್ನ ಸಂಸಾರಕ್ಕಾಗಿ ಗಂಡ ಒಳ್ಳೆಯವನಾಗಲಿ ಕೆಟ್ಟವನಾಗಲಿ ಎಲ್ಲವನ್ನೂ ಸಹಿಸುತ್ತಾ ತನ್ನ ಮಕ್ಕಳ ಭವಿಷ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ. ಅದಕ್ಕಾಗಿಯೇ ಹೆಣ್ಣನ್ನು ಹೃದಯಕ್ಕೆ ಹೋಲಿಸುತ್ತಾರೆ ಆದ್ದರಿಂದ ಹೆಣ್ಣನ್ನು ನಾವೆಲ್ಲರೂ ಗೌರವಿಸುವುದು ನಮ್ಮ ನಿಮ್ಮೇಲ್ಲರ ಅದ್ಯ ಕರ್ತವ್ಯ ಎಂದು ಡಾ. ಭೀಮ ನಾಯಕ್ ಅಭಿಪ್ರಾಯಪಟ್ಟರು.
ಪೀಣ್ಯ ದಾಸರಹಳ್ಳಿ ಸಮೀಪದ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಕಾವೇರಿ ನಗರದಲ್ಲಿರುವ ಇಂಟಿಗ್ರೇಟೆಡ್ ಪ್ರಾಜೆಕ್ಟ್ ಫಾರ್ ಡೆವಲಪ್ಮೆಂಟ್ ಆಫ್ ಪೀಪಲ್( ಐಪಿ ಡಿಪಿ) ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೆ. ಭೀಮ ನಾಯಕ್ ಅವರ ನೇತೃತ್ವದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಐಪಿಡಿಪಿ ಕಚೇರಿ ಆವರಣದಲ್ಲಿ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳೆಯರಿಗೆ ಗೌರವಿಸುವ ಸಮಾರಂಭ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನುಟಾರ್ಗೆಟ್ ಕಾರ್ಪೊರೇಷನ್ ಕಂಪನಿ ಸಂಜೀವ್. ಸತೀಶ್. ಮತ್ತು ರಾಘವ್ ಅವರ ಬಾಗಿತ್ವದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ನಂತರ ಮಾತನಾಡಿದ ಡಾ. ಕೆ. ಭೀಮಾ ನಾಯಕ್ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬ ಹಿತೋಕ್ತಿಯಂತೆ ಹೆಣ್ಣು ಮನೆಯ ಕಣ್ಣು ಮನೆಯ ಬೆಳಗುವ ಬೆಳಕು ಎಂದೆಲ್ಲಾ ಕರೆಯುತ್ತೇವೆ ಹೆಣ್ಣು ಈಗಿನ ಪರಿಸ್ಥಿತಿಯಲ್ಲಿ ತನ್ನ ಸಂಸಾರದ ಹಿತಕ್ಕಾಗಿ ತನ್ನ ಮಕ್ಕಳ ಬದುಕಿಗಾಗಿ ತಾನು ತಿನ್ನುವಳೋ ಇಲ್ಲವೋ ತನ್ನ ಮಕ್ಕಳಿಗಾಗಿ ಬಚ್ಚಿಡುವಳು ತನ್ನ ಗಂಡ ನೀಡುವ ಕಿರುಕುಳಗಳ ನೋವು ಎಲ್ಲವನ್ನು ಸಹಿಸುತ್ತಾ ಬರುವ ನೋವು ಕಷ್ಟಗಳನ್ನು ತಾನೊಬ್ಬಳೇ ಅನುಭವಿಸುತ್ತಾ ತಾಯಿಯಾಗಿ ಹೆಂಡತಿಯಾಗಿ ಅಕ್ಕ-ತಂಗಿಯಾಗಿ ಹಲವಾರು ರೂಪ ತಾಳುತ್ತಾಳೆ ನಮ್ಮ ದೇಶ ಮತ್ತು ನಾಡಿನಲ್ಲಿ ಹೆಣ್ಣಿಗೆ ಶ್ರೇಷ್ಠವಾದ ಸ್ಥಾನವನ್ನು ಕಲ್ಪಿಸಲಾಗಿದೆ ಎಂದರು.
ಸ್ವಾವಲಂಬಿಯಾಗಬೇಕು ತನ್ನ ಕಾಲಿನ ಮೇಲೆ ತಾನು ನಿಲ್ಲಬೇಕು ಎಲ್ಲಾ ಕ್ಷೇತ್ರದಲ್ಲಿಯೂ ಸಶಕ್ತಳಾಗಿ ಬದುಕಬೇಕು ಎಂಬ ಕನಸನ್ನು ಕಂಡ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೆಣ್ಣಿಗಾಗಿ ಮೊಟ್ಟ ಮೊದಲ ಬಾರಿಗೆ ಹೆಚ್ಚಿನ ಮೀಸಲಾತಿಯನ್ನು ದೊರಕಿಸಿಕೊಟ್ಟ ಮಹಾನ್ ನಾಯಕ ನಮ್ಮ ದೇಶದಲ್ಲಿ ಹುಟ್ಟಿರುವ ನಾರಿಯರಲ್ಲಿ ಮೊಟ್ಟಮೊದಲು ಶಿಕ್ಷಕಿಯಾದ ಸಾವಿತ್ರಿಬಾಯಿ ಪುಲೆ, ವೀರರಾಣಿ ಚೆನ್ನಮ್ಮ, ಅಕ್ಕಮಹಾದೇವಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಹೀಗೆ ಇನ್ನೂ ಹಲವಾರು ನಾರಿಯರು ಹುಟ್ಟಿ ಬೆಳೆದ ನಮ್ಮ ಭೂಮಿ ಪುಣ್ಯವಾದದ್ದು ಈಗಿನ ಹೆಣ್ಣು ಮಕ್ಕಳು ವಿದ್ಯೆಯಿಂದ ಹಿಡಿದು ಪ್ರತಿ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ ಅವರನ್ನು ನಾವು ಸದಾ ಗೌರವಿಸೋಣ ಎಂದು ತಿಳಿಸುತ್ತಾ ಮಹಿಳಾ ದಿನಾಚರಣೆಯ ಶುಭ ಕೋರಿದರು ಸತೀಶ್ ಮಾತನಾಡಿದರು.
ದಿನಾಚರಣೆ ಪ್ರಯುಕ್ತ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ. ಬಕೆಟ್ನಲ್ಲಿ ಚೆಂಡು ಎಸೆತ, ನಿಂಬೆ ಚಮಚ ಸ್ಪರ್ಧೆ, ಮ್ಯೂಸಿಕಲ್ ಚೇರ್ ಹೀಗೆ ಅನೇಕ ಸ್ಪರ್ಧೆಗಳು ಹಮ್ಮಿಕೊಂಡು ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಂಜೀವ್, ಸತೀಶ್, ರಾಘು ಇವರುಗಳು ಮಾತನಾಡಿದರು.
ಪ್ರಕೃತಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಐಪಿಡಿಪಿ ಸಂಸ್ಥೆಯ ಮುಖ್ಯಸ್ಥರು, ಸಂಯೋಜಕರು, ಸಿಬ್ಬಂದಿ ವರ್ಗದವರು ಮತ್ತು ವಿವಿಧ ಸ್ತ್ರಿ ಶಕ್ತಿ ಗುಂಪುಗಳ ಪ್ರಮುಖರು ಸದಸ್ಯರು ಕಾವೇರಿ ನಗರದ ಸಮಸ್ತ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಭಾಗವಹಿಸಿದ್ದರು.
(ವರದಿ: ಅಯ್ಯಣ್ಣ ಮಾಸ್ಟರ್




