ಬಾದಾಮಿ: ಕರ್ನಾಟಕ ರಾಜ್ಯ ಹಸಿರು ಕ್ರಾಂತಿ ರೈತ ಸಂಘ ಬಾದಾಮಿ ಘಟಕದಿಂದ ಕರ್ನಾಟಕ ರಾಜ್ಯ
ವಕೀಲರ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಎಸ್. ಎಸ್.ಮಿಟ್ಟಲಕೋಡ ಅವರಿಗೆ ಸನ್ಮಾನ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಬಾದಾಮಿಯ ಖ್ಯಾತ ವಕೀಲರಾದ ಎಸ್ ಎಸ್ ಮಿಟ್ಟಲಕೋಡ ಅವರು ಇಂದು ಬಾದಾಮಿಗೆ ಆಗಮಿಸಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಎಸ್. ಎಸ್. ಮಿಟ್ಟಲಕೋಡ್ ಅವರನ್ನು ವಕೀಲರ ಸಂಘ ಬಾದಾಮಿ ವತಿಯಿಂದ ಹಾಗೂ ಕರ್ನಾಟಕ ರಾಜ್ಯ ಹಸಿರು ಕ್ರಾಂತಿ ರೈತ ಸಂಘ ಬಾದಾಮಿ ವತಿಯಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಕೀಲರ ಸಂಘದ ಮುಖಂಡರು ಹಾಗೂ ಕರ್ನಾಟಕ ರಾಜ್ಯ ಹಸಿರು ಕ್ರಾಂತಿ ರೈತ ಸಂಘದ ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ




