ಐಗಳಿ : ಐಗಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ದಲಿತ ಮುಖಂಡರೊಂದಿಗೆ ಪಿಎಸ್ಐ ಚಂದ್ರಶೇಖರ ಸಾಗನೂರ ಅವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯ ನಡೆಸಿದರು. ಸಭೆಯಲ್ಲಿ ಮುಖಂಡರು ಆಗಮಿಸಿ ಗ್ರಾಮದಲ್ಲಿ ಆಗುತ್ತಿರುವ ಅನೈತಿಕ ಚಟುವಟಿಕೆಗಳ ಕುರಿತು ಕ್ರಮ ಕೈಗೊಳ್ಳಬೇಕು ದಲಿತ ಕೇರಿಗಳಲ್ಲಿ ಸಿಸಿ ಟಿವಿ ಅಳವಡಿಸುವುದು, ಅಕ್ರಮ ಸಾರಾಯಿ ಮಾರಾಟ ನಿಷೇಧಿಸುವುದು, ಮತ್ತು ಏಪ್ರಿಲ್ ನಲ್ಲಿ ಬರುವ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ಆಚಾರಣೆ ಮಾಡಲು ದಲಿತ ಮುಖಂಡರು ತಿಳಿಸಿದರು.

ನಂತರ ಪಿಎಸ್ಐ ಅವರು ಸಭೆ ಉದ್ದೇಶಿಸಿ ಮಾತನಾಡಿ ಮುಖಂಡರ ಮನವಿಯನ್ನು ಆಲಿಸಿದ್ದೆನೆ. ಅವುಗಳನ್ನು ಹಂತ ಹಂತವಾಗಿ ನಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಇದಕ್ಕೆ ದಲಿತ ಮುಖಂಡರು ಸಹಕಾರ ನೀಡಬೇಕು ಹಾಗೂ ತಾವು ಕೂಡ ಸಮಾಜದಲ್ಲಿನ ಕುಂದು ಕೊರತೆಯನ್ನು ನಮ್ಮ ಹಂತದಲ್ಲಿ ತಿದ್ಧುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.

ಯಾವುದೇ ರೀತಿಯಾದಂತಹ ಘಟನೆಗಳು ಹಾಗೂ ಅನೈತಿಕ ಚಟುವಟಿಕೆಗಳು ನಡೆದಲ್ಲಿ ನಮಗೆ ತಿಳಿಸಬೇಕು ಎಂದು ಹೇಳಿದರು. ಹೋಳಿ ಹಬ್ಬವನ್ನು ಗ್ರಾಮದಲ್ಲಿ ಆಚರಣೆ ವೇಳೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಾವುಗಳು ಸಹಕರಿಸಬೇಕು ಬಣ್ಣ ಆಡುವಾಗ ನೈಸರ್ಗಿಕ ಬಣ್ಣವನ್ನು ಬಳಸಿ ಮಕ್ಕಳಿಗೆ ಶಿಕ್ಷಣ ನೀಡಿ, ದುಶ್ಚಟಗಳಿಂದ ದೂರ ಉಳಿಯಬೇಕು ಕುಡಿದು ವಾಹನ ಚಲಾಯಿಸಬಾರದು ಬೇಸಿಗೆಯಲ್ಲಿ ಕಳ್ಳರು ಹಾವಳಿ ಇದ್ದು ಮುನ್ನೆಚ್ಚರಿಕಿಯಿಂದ ಇರಬೇಕು ಎಂದು ಮನವಿ ಮಾಡಿದರು. ಈ ಸಭೆಯಲ್ಲಿ ದಲಿತ ಮುಖಂಡರಾದ ಚಿದಾನಂದ್ ತಳಕೇರಿ ಶ್ರೀಕಾಂತ್ ಆಲಗೂರ ಪ್ರಶಾಂತ್ ಕಾಂಬಳೆ ಸುರೇಶ ಕಾಂಬಳೆ ಸಚಿನ್ ಮಹಾಲಿಂಗಪೂರ ರಾಜಕುಮಾರ್ ನಾಟಿಕಾರ ಸಂತೋಷ ಕೋಹಳ್ಳಿ ರಾಜು ಫರ್ನಾಕರ್ ಸಂದೀಪ ಕಾಂಬಳೆ ಸಿಬ್ಬಂದಿಗಳಾದ ಸಂಜು ಸನ್ನಗೊಂಡ ಎಮ್ ಬಿ ಗುಂಡೋಡಗಿ ಪಿ ಎಸ್ ಮಲಗೌಡರ ಎ ಸಿ ಮುಜಾವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ: ಆಕಾಶ ಮಾದರ




