ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ವ್ಯಾಪ್ತಿಗೆ ಬರುವ ಜಿಕೆಡಬ್ಲ್ಯೂ ಲೇಔಟ್ ನಲ್ಲಿ ಶ್ರೀ ಅಣ್ಣಮ್ಮ ದೇವಿ ಶ್ರೀ ದುರ್ಗಾಂಬೆ ಅಂತರ ಘಟ್ಟಮ್ಮ ದೇವಿ ಮಹೋತ್ಸವದಲ್ಲಿ ಪಾಲ್ಗೊಂಡ ದರ್ಶನ ಪಡೆದ ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡ ಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಯುವ ಮುಖಂಡ ಹಾಗೂ ಬಿಬಿಎಂಪಿ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ವಿ. ನಾಗರಾಜ್ ಅಂದ್ರಹಳ್ಳಿ.
ನಂತರ ಅವರು ಮಾತನಾಡಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ೬ನೇ ಊರ ಹಬ್ಬವನ್ನು ಶ್ರದ್ದಾ ಭಕ್ತಿ ಭಾವದಿಂದ ಪ್ರತಿ ವರ್ಷವು ಜಿಕೆ ಡಬ್ಲ್ಯೂ ಲೇಔಟ್ನ ಸ್ನೇಹ ಭಾರತಿ ಕನ್ನಡ ಯುವಕರ ಸಂಘ ಮುಖಂಡರಾದ ಅಮರ್ ಮತ್ತು ಚಂದ್ರ ಇವರ ಮುಂದಾಳತ್ವದಲ್ಲಿ ಶ್ರೀ ಅಣ್ಣಮ್ಮ ದೇವಿ, ಶ್ರೀ ದುರ್ಗಾಂಬೆ,ಅಂತರ ಘಟ್ಟಮ್ಮ ದೇವಿ ,ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಊರು ಹಬ್ಬ ವನ್ನಾಗಿ ಆಚರಿಸಲಾಗುತ್ತದೆ. ಅದರಲ್ಲಿ ನನ್ನನ್ನು ಆಹ್ವಾನಿಸಿ ದೇವರ ದರ್ಶನ ಪಡೆಯಲು ಅನುಕೂಲ ಮಾಡಿಕೊಡುತ್ತಾರೆ ಅವರಿಗೆ ಲೇಔಟ್ ಹಿರಿಯ ಮುಖಂಡರಿಗೆ ತುಂಬೂಹೃದಯದ ಹಾರ್ದಿಕ ಶುಭಾಶಯಗಳು ಕೊರಿ ನೆರೆದಿದ್ದ ಭಕ್ತಿಗಳನ್ನು ಉದ್ದೇಶಿಸಿ ವಿ.ನಾಗರಾಜ್ ಅಂದ್ರಹಳ್ಳಿ ಮಾತಾಡಿದರು.
ಈ ಸಂದರ್ಭದಲ್ಲಿ ರಾಜಗೋಪಾಲನಗರ ವಾರ್ಡಿನ ಪ್ರಭಾವಿ ಮುಖಂಡ ಡಾ. ರುದ್ರೇಗೌಡ್ರು, ಜೆಡಿಎಸ್ ಕಾರ್ಯದರ್ಶಿ ಹನುಮಂತರಾಜು, ಬಿಜೆಪಿ ಮಾಜಿ ಅಧ್ಯಕ್ಷ ಹರೀಶ್ ಸೇರಿದಂತೆ ಜಿಕೆಡಬ್ಲ್ಯೂ ಲೇಔಟ್ ರವೀಂದ್ರ ಕುಮಾರ್, ರಾಜಗೋಪಾಲನಗರ, ಕಸ್ತೂರಿ ಬಡಾವಣೆ, ಶಾಂಭವಿ ನಗರ, ಕೆಂಪಗೆ ಗೌಡ ನಗರ ಹಾಗೂ ವಿವಿಧ ಬಡಾವಣೆಗಳ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಭಾಗವಹಿಸಿ ದೇವರ ದರ್ಶನ ಪಡೆದರು.
(ವರದಿ: ಅಯ್ಯಣ್ಣ ಮಾಸ್ಟರ್




