Ad imageAd image

ಕೆ ಆರ್ ಇಎಸ್ ಶಿಕ್ಷಣ ಸಂಸ್ಥೆಯಲ್ಲಿ 2024-25 ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೂಡುವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

Bharath Vaibhav
ಕೆ ಆರ್ ಇಎಸ್ ಶಿಕ್ಷಣ ಸಂಸ್ಥೆಯಲ್ಲಿ 2024-25 ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೂಡುವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ
WhatsApp Group Join Now
Telegram Group Join Now

ಐನಾಪುರ: ಜಗತ್ತಿನಲ್ಲಿ ನಾಲ್ಕು ತರಹದ ಮಕ್ಕಳು ಇರುತ್ತಾರೆ. ಮೊದಲನೆಯವ ದಾರಿತಪ್ಪಿದ ಮಗ,ಎರಡನೆಯವ ದಾರಿತಪ್ಪದ ಮಗ,ಮೂರನೇಯವ ತಪ್ಪಿಸುವ ಮಗ ನಾಲ್ಕನೇಯವ ದಾರಿ ತೋರಿಸುವ ಮಗ ಹೀಗೆ ನಾಲ್ಕು ತರಹ ಮಕ್ಕಳಲ್ಲಿ ತಂದೆ ತಾಯಿಗೆ ದಾರಿ ತೋರಿಸುವ ಶ್ರೇಷ್ಠ ಮಕ್ಕಳಾಗಬೇಕು ಅಂದಾಗ ಮಾತ್ರ ಬದುಕು ಸುಂದರವಾಗುತ್ತದೆ ಎಂದು ಶಿಕ್ಷಕ ಕುಮಾರ ಗಾಣಿಗೇರ ಹೇಳಿದರು.

ಅವರು ತಾಲೂಕಿನ ಐನಾಪುರ ಪಟ್ಟಣದ ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದ.2024-25ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೂಡುವ ಮತ್ತು ಪ್ರತಿಭಾ ಪುರಸ್ಕಾರ ಮತ್ತು ಸತ್ಕಾರ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ.ಮಾತನಾಡುತ್ತಾ ಇಂದಿನ ದಿನಮಾನಗಳಲ್ಲಿ ಪುಸ್ತಕ ಜ್ಞಾನ ಉಪಯೋಗವಿಲ್ಲ ಜ್ಞಾನಕಿಂತ ಉದ್ಯೋಗಕ್ಕೆ ಶಿಕ್ಷಣ ಬೇಕು ಅದರ ಜೊತೆಗೆ ಸಾಮಾನ್ಯ ಜ್ಞಾನವು ಬೇಕು ಎಂದ ಅವರು ಶಾಲೆಯಲ್ಲಿ ಜ್ಞಾನದ ಜೊತೆಗೆ ಆಟ, ಪಾಠ, ನೋಟ,ದೊಂದಿಗೆ ಬದುಕು ಕಟ್ಟಿಕೊಳ್ಳುವ ಜ್ಞಾನವನ್ನು ಗುರುಗಳು ನೀಡುತ್ತಾರೆ ಎಂದ ಅವರು ಮುಂದೆ ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದೆ ಎಲ್ಲಾ ವೃತ್ತಿಗೂ ಮೂಲ ಆಗಿರುವುದರೊಂದಿಗೆ ಉತ್ತಮ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಶಕ್ತಿ ಇರುವುದು ಈ ವೃತ್ತಿಗೆ ಮಾತ್ರ. ಒಂದು ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಗಳ ಪಾತ್ರವೂ ಮಹತ್ತರವಾದುದು ಎಂದರು.
ಇನ್ನೋರ್ವ ಮುಖ್ಯ ಅತಿಥಿ ಗಳಾದ ಡಾ.ಎನ್.ವ್ಹಿ ಶಿರಗುಪ್ಪಿ ಮಾತನಾಡಿ ಶೂರರಲ್ಲಿ ಸಿಂಧೂರ ಲಕ್ಷ್ಮಣನ್ನಾಗಿ ಕ್ರಾಂತಿಯಲ್ಲಿ ಸಂಗೋಳಿ ರಾಯಣ್ಣ ನ್ನಾಗಿ ಶಾಂತಿಯಲ್ಲಿ ಗಾಂಧಿಯಾಗಿ ಪೈಗಂಬರನ್ನಾಗಿ ಕಲೆಯಲ್ಲಿ ರವಿವರ್ಮನ್ನಾಗಿ ಛಲದಲ್ಲಿ ಚಾಲ್ಯುಕೆರಂತಾಗಿ ತತ್ವನಿಷ್ಠೆಯಲ್ಲಿ ಗುರುನಾನಕರಾಗಿ ಸುಜ್ಞಾನದಲ್ಲಿ ಅಂಬೇಡ್ಕರ್ ರಾಗಿ ಬೇಳೆದು ನಿಂತರೆ ಇದರಂತಾ ಸಂಪತ್ತು ಬೇರೊಂದಿಲ್ಲ ಎಂದರು.

ಸಂದರ್ಭದಲ್ಲಿ ಸನ್2023-24ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಪ್ರತಿಭಾ ಪುರಸ್ಕಾರ ನೀಡಿದರು. ಸಾಧನೆಗೆ ಪ್ರೇರಣೆ ನೀಡಿದ ಗುರುಗಳಿಗಳನ್ನು ಸಹಿತ ಸತ್ಕರಿಸಿದರು.

ಸಂಸ್ಥೆ ಯ ಗೌರವ ಅಧ್ಯಕ್ಷತೆ ಸಂಸ್ಥೆ ಯ ಚೇರಮನರಾದ ವಿಶ್ವನಾಥ ಕಾರ್ಚಿ, ವಹಿಸಿದರು. ಅಧ್ಯಕ್ಷ ತೆಯನ್ನು ಸಂಸ್ಥೆ ಉಪಾಧ್ಯಕ್ಷ ಸಂಜು ಭಿರಡಿ ವಹಿಸಿದ್ದರು. ಉಪ ಪ್ರಾಚಾರ್ಯ ಎ ಎಂ ಹುಲ್ಲೇನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂದರ್ಭದಲ್ಲಿ ಸಂಸ್ಥೆ ನಿರ್ದೇಶಕರಾದ ಸುರೇಶ ಗಾಣಿಗೇರ, ಉದಯ ನಿಡಗುಂದಿ, ಪ್ರವೀಣ ಕುಲ್ಲಕರ್ಣಿ, ಮಗದುಮ್ಮಸರ್ ಹಾಗೂ,ಸಂಸ್ಥೆ ಯ ಎಲ್ಲ ಸದಸ್ಯರು ಶಿಕ್ಷಕರು ವಿದ್ಯಾರ್ಥಿಗಳು ಪಾಲಕರು ಇತರರು ಇದರು.
ಉಪ್ರಾಚಾರ್ಯರಾದ ಎ.ಎಂ.ಹುಲ್ಲೆನ್ನವರ ಸ್ವಾಗತಿಸಿದರು. ಶಿಕ್ಷಕ ಶಿವಗೌಡ ಚೌಗಲಾ ನಿರೂಪಿಸಿದರು.

ವರದಿ: ಮುರಗೇಶ ಗಸ್ತಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!