ನವದೆಹಲಿ: ಮಾರ್ಚ್ 22 ರಿಂದ ಆರಂಭವಾಗುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಪ್ರಸಾರ ವೇಳೆ ಹಾಗೂ ಮೈದಾನದಲ್ಲಿ ತಂಬಾಕು ಹಾಗೂ ಮಧ್ಯಪಾನ ಸಂಬಂಧಗಳ ಜಾಹೀರಾತುಗಳನ್ನು ನಿಷೇಧಿಸಬೇಕೆಂದು ಕೇಂದ್ರ ಆರೋಗ್ಯ ಇಲಾಖೆಯು ಐಪಿಎಲ್ ಮಂಡಳಿಗೆ ಸೂಚನೆ ನೀಡಿದೆ.
ತಂಬಾಕು ಹಾಗೂ ಮಧ್ಯಪಾನ ಕಂಪನಿಯ ಜಾಹೀರಾತುಗಳನ್ನು ತೋರಿಸು್ವುದರಿಂದ ದೇಶದ ಯುವ ಜನತೆಯ ಮೇಲೆ ದುಷ್ಟಪರಿಣಾಮ ಬೀರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಐಪಿಎಲ್ ಮಂಡಳಿಗೆ ತಿಳಿಸಿದೆ. ಇದು ನೇರವಾಗಿ ಯುವ ಜನತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಐಪಿಎಲ್ ಮಂಡಳಿಗೆ ನೀಡಿದ ಸೂಚನೆಯಲ್ಲಿ ತಿಳಿಸಲಾಗಿದೆ.




