ಬೆಳಗಾವಿಯ ಅಂಬೇವಾಡಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಪ್ರಕರಣವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಲೆಕ್ಕ ಸಹಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಮಹಾಂತೇಶ ಖೋತ ಖಂಡಿಸಿದ್ದಾರೆ.

ಬೆಳಗಾವಿ ತಾಲ್ಲೂಕಿನ ಗೋಜಗಾ ಗ್ರಾಮದ ಬಳಿ ಅಂಬೇವಾಡಿ ಗ್ರಾಪಂ ಕಾರ್ಯದರ್ಶಿ ನಾಗಪ್ಪ ಕೊಡ್ಲಿ ಎಂಬುವವರ ಮೇಲೆ ಮಾರಕಾಸ್ರ್ತಗಳಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಪರಾರಿ ಯಾಗಿದ್ದಾರೆ ಬೈಕ್ ಮೇಲೆ ಹೊರಟಿದ್ದ ಕಾರ್ಯದರ್ಶಿ ನಾಗಪ್ಪ ಕೊಡ್ಲಿ ಮೇಲೆ ಅಟ್ಯಾಕ್ ಮಾಡಲಾಗಿದೆ. ಪಂಚಾಯಿತಿಯಲ್ಲಿ ಅಕ್ರಮ ಪಹಣಿ ಸೃಷ್ಟಿಸಿ ಕೊಡುವಂತೆ ಒತ್ತಡ ಹಾಕಲಾಗಿತ್ತು. ಇದಕ್ಕೆ ಒಪ್ಪಿರಲಿಲ್ಲ ದುಷ್ಕರ್ಮಿಗಳು ಬೈಕ ಮೇಲೆ ಹೋಗುತ್ತಿದ್ದವನ ಅಡ್ಡ ಗಟ್ಟಿ ಹಲ್ಲೆ ಮಾಡಲಾಗಿದೆ . ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತೀರುವ ಸರ್ಕಾರಿ ನೌಕರರ ಮೇಲೆ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹಲ್ಲೆಗಳು ನಡಿತಾನೆ ಇವೆ ಇವುಗಳನ್ನು ತಡೆಗಟ್ಟಲು ಹಲ್ಲೆ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಹಾಕಿ ಜೈಲಿಗೆ ಅಟ್ಟಬೇಕು ಎಂದು ಆಗ್ರಹಿಸಿದ್ದಾರೆ…




