Ad imageAd image

ಮಾಣಿಕಪ್ರಭು ವಿರಕ್ತಮಠ ಮಠದ ಜಾತ್ರಾ ಮಹೋತ್ಸವ ಇಂದಿನಿಂದ

Bharath Vaibhav
ಮಾಣಿಕಪ್ರಭು ವಿರಕ್ತಮಠ ಮಠದ ಜಾತ್ರಾ ಮಹೋತ್ಸವ ಇಂದಿನಿಂದ
WhatsApp Group Join Now
Telegram Group Join Now

ಐಗಳಿ: ಕ್ರಾಸ್ ಮಾಣಿಕಪ್ರಭು ವಿರಕ್ತಮಠ ಮಠದ ಜಾತ್ರಾ ಮಹೋತ್ಸವ ಇಂದಿನಿಂದ ಪ್ರಾರಂಭವಾಗಲಿದೆ. ಜಾನುವಾರಗಳ ಬೃಹತ್ ಮಾರಾಟ  ಹಾಗೂ ವಿವಿಧ ಧಾರ್ಮಿಕ ಮತ್ತು ಮನರಂಜನೆ ಕಾರ್ಯಕ್ರಮ ಗಳು ಜರಗಲಿವೆ ನಾಳೆ ಮಂಗಳವಾರ 11 ರಿಂದ 15 ರವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ.

ಮಂಗಳವಾರ ರಂದು  ಶ್ರೀಗಳ ಗದ್ದುಗೆ ವಿಶೇಷ ಪೂಜೆ ಹಾಗೂ ಮಹಾಪೂಜೆ ನಡೆಯಲಿದೆ. ಜಾತ್ರೆಯಲ್ಲಿ ಈ ಬಾರಿ ರೈತರಿಗಾಗಿ ಬೃಹತ್ ಕೃಷಿಮೇಳವನ್ನು ಆಯೋಜಿಸಲಾಗಿದೆ ಈ ಬೃಹತ್  ಕೃಷಿ ಮೇಳದ ಉಪಯೋಗವನ್ನು ಅಥಣಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಸದುಪಯೋಗ ಪಡೆಯಬೇಕಾಗಿದೆ ಎಂದು ಜಾತ್ರಾ ಕಮಿಟಿಯ ಅಧ್ಯಕ್ಷರಾದ ಪ್ರಲ್ಹಾದ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://www.instagram.com/reel/DHBdJU0pbWF/?utm_source=ig_web_copy_link&igsh=MzRlODBiNWFlZA==

13 ರಿಂದ 15 ರವರೆಗೆ ಪ್ರತಿದಿನ ಸಂಜೆ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಜರಗಲಿದೆ ಈ ಕಾರ್ಯಕ್ರಮದಲ್ಲಿ ಗಣ್ಯರು ರಾಜಕೀಯ ನಾಯಕರು ರೈತ ಪರ ಚಿಂತಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಲಿದ್ದಾರೆ ಈ ಜಾತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಜಾನುವಾರುಗಳಿಗೆ  ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಲೈಟಿಂಗ್ ವ್ಯವಸ್ಥೆ ಮತ್ತು ಪ್ರತಿದಿನ ಅನ್ನಪ್ರಸಾದ ವ್ಯವಸ್ಥೆ ನಡೆಯಲಿದೆ.

ಈ ಜಾತ್ರೆಯಲ್ಲಿ ಪ್ರತಿಯೊಬ್ಬ ರೈತರು ಆಗಮಿಸಿ ಕೃಷಿ ಮೇಳದಲ್ಲಿ ಭಾಗಿಯಾಗಿ ತಮ್ಮ ಇಷ್ಟವಾದ ಸಲಕರಣೆಗಳು ಹಾಗೂ ರೈತರಿಗೆ ಬೇಕಾಗಿರುವ ವಿವಿಧ ರೀತಿಯ ಎಲೆಕ್ಟ್ರಿಕಲ್ ವಸ್ತುಗಳು ನಾನಾ ರೀತಿಯ ವಸ್ತುಗಳು ಈ ಒಂದು ಕೃಷಿ ಮೇಳದಲ್ಲಿ ಸಿಗಲಿವೇ ನಮ್ಮ  ಕರ್ನಾಟಕ ಹಾಗೂ ಮಹಾರಾಷ್ಟ್ರ ದಿಂದ  ಮಾರಾಟಗಾರರು ಆಗಮಿಸಲಿದ್ದಾರೆ ಆದ ಕಾರಣ ರೈತರು ಈ ಒಂದು ಸುವರ್ಣ ಅವಕಾಶವನ್ನು ಸದುಪಯೋಗ ಪಡೆದುಕೊಂಡು   ಕೃಷಿ ಮೇಳವನ್ನು ಯಶಸ್ವಿಯಾಗಿ ನಡಿಸಿ ಕೊಡಬೇಕೆಂದು ಜಾತ್ರೆ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!