Ad imageAd image

ಮಾನ್ವಿ ಅಭಿವೃದ್ಧಿಯಾಗಿಲ್ಲ ಎಂದು ಮಾಜಿ ಶಾಸಕ ವೆಂಕಟಪ್ಪ ನಾಯಕ ಆಕ್ರೋಶ

Bharath Vaibhav
ಮಾನ್ವಿ ಅಭಿವೃದ್ಧಿಯಾಗಿಲ್ಲ ಎಂದು ಮಾಜಿ ಶಾಸಕ ವೆಂಕಟಪ್ಪ ನಾಯಕ ಆಕ್ರೋಶ
WhatsApp Group Join Now
Telegram Group Join Now

ಶಾಸಕ ಹಂಪಯ್ಯ ನಾಯಕರನ್ನ ಸರಿಸಿ ನೀವು ಅಧಿಕಾರ ಮಾಡುತ್ತೀರಾ ಎಂದು ಬೋಸರಾಜು ವಿರುದ್ಧ ಗುಡುಗು

ರೌಡಿಸಂಗೆ ಹೆದರಲ್ಲ ನಾನು ಎಂದು ಮಾಜಿ ಶಾಸಕ ವೆಂಕಟಪ್ಪ ನಾಯಕ

ಮಾನ್ವಿ ಐಬಿ ಮರಳು ಖದೀಮರ ಅಡ್ಡೆಯಾಗಿದೆ ಎಂದು ಆಕ್ರೋಶ

ಅಕ್ಕಿ,ಮರಳು,ಇಸ್ಪೀಟ್ ದಂಗೆಕೋರರನ್ನು ಬೆಳೆಸಿದ್ದೀರಾ ಎಂದು ಕಿಡಿ

ಮಾನ್ವಿ  : ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಕಾಮಗಾರಿಗೆ ಸಚಿವ ಎನ್.ಎಸ್.ಬೋಸರಾಜು ಚಾಲನೆ ನೀಡುತ್ತಾರೆ.ಆದರೆ ಜಿಲ್ಲೆಗೆ ಶರಣಪ್ರಕಾಶ್ ಪಾಟೀಲ್ ಹಾಗೂ ಎನ್.ಬೋಸರಾಜು ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರಾ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಲೇವಡಿ ಮಾಡಿದರು.

ಪಟ್ಟಣದ ಬಸವ ವೃತ್ತದಲ್ಲಿ ರಾಜ್ಯ ಸರಕಾರ ಎಸ್ಸಿಪಿ ಟಿಎಸ್ ಪಿ ಅನುದಾನ ದುರ್ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಮಾನ್ವಿ ಶಾಸಕ ಹಂಪಯ್ಯನಾಯಕ ಆದರೆ, ಶಾಸಕ ಹಂಪಯ್ಯ ನಾಯಕರ ಚೇರನ್ನು ಸಚಿವ ಎನ್.ಎಸ್.ಬೋಸರಾಜು ಸರಿಸಿ ತಾವೇ ಅಧಿಕಾರಿಗಳ ಸಭೆ ನಡೆಸುತ್ತಾರೆ,ಇದೆಂತಾ ದುರ್ವಿಧಿ ಮಾನ್ವಿಯ ಜನತೆ ನೀವೆ ನೋಡಿ ಎಂದು ಗುಡುಗಿದರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಅವರು ಕೊಡಗಿನಲ್ಲಿ ಅಧಿಕಾರ ಮಾಡದೆ ರಾಯಚೂರಿಗೆ ಬಂದ ನಂತರ ಸೀದಾ ಮಾನ್ವಿಗೆ ಬಂದು ಒಂದು ಲಕ್ಷ ರುಪಾಯಿ ವೆಚ್ಚದ ಉದ್ಘಾಟನೆ ಹಾಗೂ ಕಾಮಗಾರಿಗೆ ಚಾಲನೆ ನೀಡುತ್ತಾರೆ.

ಸಚಿವ ಎನ್.ಎಸ್.ಬೋಸರಾಜು ಸಾಹೇಬ್ರೆ ಶಾಸಕ ಹಂಪಯ್ಯನಾಯಕ ಸಾಹೇಬ್ರೆ ಮಾನ್ವಿಯಲ್ಲಿ ಕಳೆದ 25 ವರ್ಷದಿಂದ ಅಧಿಕಾರ ಮಾಡುತ್ತಿದ್ದೀರಾ.ಆದರೆ ಮಾನ್ವಿ ಮಾತ್ರ ಅಭಿವೃದ್ಧಿಯಾಗಿಲ್ಲ.ನಾನು ಶಾಸಕನಾಗಿದ್ದ ಸಮಯದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸರಕಾರದಿಂದ 10 ಕೋಟಿ ಹಣ ಮಂಜೂರು ಮಾಡಿಸಿದ್ದೆ.ಆದರೆ ತಾವುಗಳು ಟೆಂಡರ್ ರದ್ದು ಪಡಿಸಿ ಇದುವರೆಗೂ ಕಾಮಗಾರಿ ಪ್ರಾರಂಭ ಮಾಡಿಸಿಲ್ಲ ಎಂದು ಆರೋಪಿಸಿದರು.

ಮಾನ್ವಿ ಪಟ್ಟಣದ ಐಬಿ ಅಂದರೆ ಯಾರಾದರು ರಾಜಕಾರಣಿಗಳು ಬಂದರೆ ಇರಲು ಅವಕಾಶ ಇತ್ತು.ಆದರೆ ಪ್ರಸ್ತುತ ದಿನಗಳಲ್ಲಿ ನೋಡಿದರೆ ಮರಳು ಖದೀಮರ ಅಡ್ಡೆಯಾಗಿ ಮಾರ್ಪಾಡಾಗಿದ್ದರಿಂದ ಒಂದು ರೀತಿಯಲ್ಲಿ ಮರಳು ಖದೀಮರ ವ್ಯವಹಾರದ ಕಚೇರಿಯಾಗಿದೆ.ಅದಲ್ಲದೇ ಅಲ್ಲಿಯೇ ಕುಳಿತು ಮರಳು ಖದೀಮರು ಕುಡಿದು ತಿಂದು ತೇಗುವ ಸ್ಥಿತಿಯಲ್ಲಿದ್ದು, ಇದು ಮುಂದೊಂದು ದಿನ ಕುಡುಕರ ಅಡ್ಡೆಯಾಗುವುದರಲ್ಲಿ ಎರಡನೆ ಮಾತಿಲ್ಲ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಕಿಡಿಕಾರಿದರು.

ಸಚಿವ ಎನ್.ಬೋಸರಾಜು ಅವರೆ ರೌಡಿಸಂ, ಅಕ್ಕಿ ಕಳ್ಳತನ,ಇಸ್ಪೀಟ್ ಆಟ ಆಡುವವರಿಗೆ ಪ್ರೋತ್ಸಾಹ ಕೊಡುತ್ತಿದ್ದೀರಾ. ಆದರೆ ನಾನು ಒಬ್ಬ ಮಾಜಿ ಶಾಸಕನಿದ್ದೇನೆ,ಏನಾದರು ಕೇಳಿದರೆ ನೀವು ರಾಯಚೂರಿನಿಂದ ರೌಡಿಗಳನ್ನು ಕರೆಸುತ್ತೀರಾ ಅಂದರೆ ಇದಕ್ಕೆಲ್ಲ ನಾನು ಹೆದರುವವನು ಅಲ್ಲ. ನಾನು ಇರುವವರೆಗೂ ನಿಮ್ಮ ವಿರುದ್ಧ ಮಾತಾಡುತ್ತೇನೆ ಎಂದರು.

ವರದಿ : ಶಿವ ತೇಜ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!