Ad imageAd image

ಹೋಳಿ ಹುಣ್ಣಿಮೆ: ಸಾರ್ವಜನಿಕರ ಶಾಂತಿ ಸಭೆ

Bharath Vaibhav
ಹೋಳಿ ಹುಣ್ಣಿಮೆ: ಸಾರ್ವಜನಿಕರ ಶಾಂತಿ ಸಭೆ
WhatsApp Group Join Now
Telegram Group Join Now

ಹೋಳಿ ಹುಣ್ಣಿಮೆ ಹಾಗೂ ರಮಜಾನ ಹಬ್ಬಗಳ ಅಂಗವಾಗಿ ಸಾರ್ವಜನಿಕರ ಶಾಂತಿ ಸಭೆಯನ್ನು ರಾಮದುರ್ಗ ಪೊಲೀಸ್ ಠಾಣೆಯಿಂದ ಆಯೋಜಿಸಲಾಗಿತ್ತು

ಈ ಸಭೆಯಲ್ಲಿ ರಾಮದುರ್ಗ ಡಿವೈಎಸ್‌ಪಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕಾರ್ಯವಾಗಬಾರದು ಹಬ್ಬಗಳ ಆಚರಣೆ ಸಂಸ್ಕ್ರತಿ ಭರಿತವಾಗಿರಲಿ ಹಿಂದೂ ಮುಸ್ಲಿಂ ಬಾಂಧವರು ಸೇರಿಕೊಂಡು ಹಬ್ಬಗಳ ಆಚರಣೆ ಆಗಲಿ ಹಬ್ಬಗಳನ್ನ ಮುಂದೆ ಹಾಕಿ ಸೌಹಾರ್ದವಾಗಿ ಹಬ್ಬಗಳು ನಡೆಸಿದ ಉದಾಹರಣೆ ರಾಮದುರ್ಗದಲ್ಲಿದೆ ಹೀಗಾಗಿ ಅದನ್ನೇ ಮುಂದುವರೆಸಬೇಕು ಎಂದರು.

ಸಿಪಿಐ ಐ.ಆರ್.ಪಟ್ಟಣಶೆಟ್ಟಿ ಮಾತನಾಡುತ್ತ ಎರಡೂ ಹಬ್ಬಗಳು ಕೂಡಿ ಬರುವುದೇ ಅಪರೂಪ ನಾಲ್ಕುವರ್ಷದಿಂದ ಇಲ್ಲಿ ಸೌಹಾರ್ದ ನೋಡಿದ್ದೇನೆ ಎಲ್ಲರೂ ಸೇರಿ ಆಚರಣೆ ಮಾಡಿ ಯಾವುದೇ ಗೊಂದಲ ಗದ್ದಲಗಳಿಗೆ ಎಡೆಮಾಡಿಕೊಡದೇ ಪ್ರೀತಿ ವಿಶ್ವಾಸದಿಂದ ಆಚರಿಸಿ ಎಂದು ಹೇಳಿದರು

ಸಭೆಯನ್ನ ಉದ್ದೇಶಿಸಿ ಪಿಎಸ್.ಐ ಸವಿತಾ ಮುನ್ಯಾಳ ಮಾತನಾಡಿ ಒಪ್ಪಿಗೆ ಇಲ್ಲದೇ ಬಣ್ಣ ಎರಚುವುದು ಕುಡಿದು ಶಾಂತಿ ಕದಡುವಂತಹ ವರ್ತನೆ ಆಗುವುದು ಬೇಡ ಅಂದರು
ಸಿಪಿಐಎಂ ಪಕ್ಷದ ಮುಖಂಡ ಗೈಬು ಜೈನೇಖಾನ ಮಾತನಾಡಿ ಸೌಹಾರ್ದವಾಗಿ ಎರಡೂ ಹಬ್ಬಗಳನ್ನು ಆಚರಿಸೋಣ ಕೂಡಿ ಹಬ್ಬಗಳನ್ನು ಆಚರಿಸುವುದರಿಂದ ಜನರಲ್ಲಿ ಮಾನಸಿಕವಾಗಿ ಸ್ತೈರ್ಯ ತುಂಬ ಬಹುದು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರುಗಳಾದ ಶಂಕರ ಬೆನ್ನೂರ, ರಘುನಾಥ ರೇಣಕೆ, ಅಂಜುಮನ ಕಮೀಟಿ ಅಧ್ಯಕ್ಷ ಶಬ್ಬೀರ ಖಾಜಿ, ಮುಸ್ಲಿಂ ಕಮ್ಯುನಿಟಿ ಅಧ್ಯಕ್ಷ ಶಫಿ ಬೆಣ್ಣಿ, ಇನ್ನೂ ಅನೇಕ ಹಿರಿಯರು ಹಾಗೂ ಮುಖಂಡರು ಹಾಗೂ ಪತ್ರಕರ್ತರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ಮಂಜುನಾಥ ಕಲಾದಗಿ ರಾಮದುರ್ಗ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!