ಮೊಸರು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಶಾಖದ ಉರಿ ತಡೆಯಲು, ತಂಪಾದ ಮೊಸರಿನ ಊಟ ಹೆಚ್ಚು ರುಚಿಕರವಾಗಿರುತ್ತದೆ. ಜೊತೆಗೆ ಶುಷ್ಕ ಋತುವಿನಲ್ಲಿ ನಮ್ಮ ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಮೊಸರು ಉತ್ತಮ ಆಯ್ಕೆಯಾಗಿದೆ. ಆದರೆ ಇದಕ್ಕೆ ನೀವು ಆಯ್ಕೆ ಮಾಡುವ ಪಾತ್ರೆಗಳು ಸಹ ಬಹಳ ಮುಖ್ಯ. ಹಾಗಾದರೆ ರುಚಿಯ ಹೊರತಾಗಿ, ಮಣ್ಣಿನ ಮಡಕೆಯಲ್ಲಿ ಮೊಸರು ತಯಾರಿಸಿ ತಿನ್ನುವುದರಿಂದ ಏನಾದರೂ ಪ್ರಯೋಜನಗಳಿವೆಯೇ? ಬೇಸಿಗೆಯಲ್ಲಿ ಮೊಸರನ್ನು ಮಣ್ಣಿನ ಮಡಕೆಯಲ್ಲಿಯೇ ಇಡಬೇಕು ಎನ್ನುವುದಕ್ಕೆ ನಿಜವಾದ ಕಾರಣವೇನು ತಿಳಿದುಕೊಳ್ಳಿ.
ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಸಂಪ್ರದಾಯ ಹಿಂದಿನಿಂದಲೂ ಇದೆ. ಭಾರತೀಯರು ಅದರಲ್ಲಿ ಮಾಡುವ ಅಡುಗೆಗೆ ಒಗ್ಗಿಕೊಂಡಿದ್ದಾರೆ. ಆದರೆ ತಲೆಮಾರುಗಳು ಬದಲಾದಂತೆ, ಅವುಗಳ ಬಳಕೆಯೂ ಕಣ್ಮರೆಯಾಗುತ್ತಿತ್ತು. ಆದರೆ ಈಗ ಮಣ್ಣಿನ ಪಾತ್ರೆಗಳ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಹುಟ್ಟುತ್ತಿದ್ದು. ಮಡಕೆಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಐಸ್ ಕ್ರೀಮ್, ಬಿರಿಯಾನಿ, ಲಸ್ಸಿ ಮತ್ತು ಇತರ ಅನೇಕ ಆಹಾರಗಳನ್ನು ಮಣ್ಣಿನ ಮಡಕೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಮಣ್ಣಿನ ಮಡಕೆಯಲ್ಲಿ ಮೊಸರು ತಯಾರಿಸಿ ತಿನ್ನುವುದರಿಂದ ಏನಾದರೂ ಪ್ರಯೋಜನಗಳಿವೆಯೇ? ಬೇಸಿಗೆಯಲ್ಲಿ ಮೊಸರನ್ನು ಮಣ್ಣಿನ ಮಡಕೆಯಲ್ಲಿಯೇ ಇಡಬೇಕು ಎನ್ನುವುದಕ್ಕೆ ನಿಜವಾದ ಕಾರಣವೇನು ತಿಳಿದುಕೊಳ್ಳಿ.
ಮೊಸರು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಶಾಖದ ಉರಿ ತಡೆಯಲು, ತಂಪಾದ ಮೊಸರಿನ ಊಟ ಹೆಚ್ಚು ರುಚಿಕರವಾಗಿರುತ್ತದೆ. ಜೊತೆಗೆ ಶುಷ್ಕ ಋತುವಿನಲ್ಲಿ ನಮ್ಮ ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಮೊಸರು ಉತ್ತಮ ಆಯ್ಕೆಯಾಗಿದೆ. ಆದರೆ ಇದಕ್ಕೆ ನೀವು ಆಯ್ಕೆ ಮಾಡುವ ಪಾತ್ರೆಗಳು ಸಹ ಬಹಳ ಮುಖ್ಯ. ಇದಕ್ಕಾಗಿ ಸರಿಯಾದ ಪಾತ್ರೆಯನ್ನು ಬಳಸಿದಾಗ ಮಾತ್ರ ಅದು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಪ್ರೋಬಯಾಟಿಕ್ ಗಳಿಂದ ಸಮೃದ್ಧವಾಗಿರುತ್ತೆ:
ಮಣ್ಣಿನ ಪಾತ್ರೆಗಳಲ್ಲಿ ತಯಾರಿಸಿದ ಮೊಸರು ಪ್ರೋಬಯಾಟಿಕ್ ಗಳಿಂದ ಸಮೃದ್ಧವಾಗಿರುತ್ತದೆ. ಉಕ್ಕು ಮತ್ತು ಗಾಜಿನಂತಹ ಪಾತ್ರೆಗಳಲ್ಲಿ ತಯಾರಿಸಿದ ಮೊಸರಿಗಿಂತ ಮಣ್ಣಿನ ಪಾತ್ರೆಗಳಲ್ಲಿ ತಯಾರಿಸಿದ ಮೊಸರಿನಲ್ಲಿ ಪ್ರೋಬಯಾಟಿಕ್ ಅಂಶ ಹೇರಳವಾಗಿರುತ್ತದೆ. ಇದು ನಮ್ಮ ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತವೆ.




