ಚಿಟಗುಪ್ಪ:ರೈತರು ಬೆಂಬಲ ಬೆಲೆಯ ತೊಗರಿ ಖರೀದಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರಕುಮಾರ ಖಂಡ್ರೆ ಹೇಳಿದರು.
ತಾಲ್ಲೂಕಿನ ತಾಳಮಡುಗಿ ಗ್ರಾಮದಲ್ಲಿ ತೊಗರಿ ಖರೀದಿ ಕೇಂದ್ರವನ್ನ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಈ ಭಾಗದ ರೈತರ,ಸಾರ್ವಜನಿಕರ ಅನುಕೂಲಕ್ಕಾಗಿ ತೊಗರಿ ಖರೀದಿ ಕೇಂದ್ರ ತೆರೆಯಲಾಗಿದ್ದು ತಾಳಮಡುಗಿ ಮತ್ತು ಕಂದಗುಳ ಗ್ರಾಮದ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ ಮಾತನಾಡಿ,ನೋಂದಣಿಯಾದ ಎಲ್ಲ ರೈತರ ತೊಗರಿಯನ್ನು ಖರೀದಿಸಲಾಗುತ್ತದೆ.ಇದರ ಅನುಕೂಲವನ್ನು ಪ್ರತಿ ರೈತರು ಪಡೆಯುವ ಮೂಲಕ ತೊಗರಿ ಖರೀದಿ ಕೇಂದ್ರದ ಕಾರ್ಯ ಯಶಸ್ವೀಗೊಳಿಸಬೇಕು ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಶ್ರೀಮಂತ ಪಾಟೀಲ ಮಾತಾಡಿ,ಗೋಡಾಣ ಮತ್ತು ಔಷದಿ ಕೇಂದ್ರ ತಾಳಮಡುಗಿ ಗ್ರಾಮದಲ್ಲಿ ನಿರ್ಮಿಸಬೇಕು.ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಪಿಕೆಪಿಎಸ್ ಅಧ್ಯಕ್ಷ ಉಮೇಶ ಕುಲಕರ್ಣಿ ಮಾತನಾಡಿ,ತಾಳಮಡುಗಿ ಪಿಕೆಪಿಎಸ್ ಮೇಲೆ ಹೆಚ್ಚಿನ ಕಾಳಜಿ ವಹಿಸಿ ನಮ್ಮ ರೈತರ ಬೇಡಿಕೆಗಳನ್ನು ಪೂರೈಸಲು ತಾವುಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರ.
ಪಿಕೆಪಿಎಸ್ ಉಪಾಧ್ಯಕ್ಷ ರವಿ ಹಾವಶೆಟ್ಟಿ, ನಿರ್ದೇಶಕರಾದ ಮೆಹೇಬೂಬ ಖಾನ ಪಟೇಲ್,ಸೋಮಶೇಖರ ಧಡಿಮಾಳ,ಕೈಲಾಸ ಪಾವಡಶೆಟ್ಟಿ,ವಿಜಯಕುಮಾರ,ಕಸ್ತೂರಬಾಯಿ ಧಡಿಮಾಳ,ಚಂದ್ರಕಲಾಬಾಯಿ ಶೇರಿಕಾರ,ವೀರಶಟ್ಟಿ ನಿಂಬುರೆ,ಲಕ್ಷ್ಮಣ ಸೇಟ್ವಾಜಿ,ಪ್ರಮುಖರಾದ ಬಾಬುರಾವ ಪಾಟೀಲ, ಮಾಣಿಕಪ್ಪ ಹಾವಶೆಟ್ಟಿ,ಪಿಕೆಪಿಎಸ್ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ನಾಗನಕೇರಾ,ಪ್ರಹ್ಲಾದ ವಿಶ್ವಕರ್ಮ ಸೇರಿ ಪಿಕೆಪಿಎಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಜೀಶ ಲಂಬುನೋರ ಚಿಟಗುಪ್ಪ




