Ad imageAd image

 ಸಿಮೆಂಟ್ ಕಾರ್ಖಾನೆ ವಿರುದ್ಧಜಯ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ

Bharath Vaibhav
 ಸಿಮೆಂಟ್ ಕಾರ್ಖಾನೆ ವಿರುದ್ಧಜಯ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ
WhatsApp Group Join Now
Telegram Group Join Now

ಸೇಡಂ: ಜಯ ಕರ್ನಾಟಕ ಜನಪರ ವೇದಿಕೆ ಸೇಡಂ ತಾಲೂಕ ಘಟಕ ವತಿಯಿಂದ ವಾಸವದತ್ತಾ (ಶ್ರೀ ರಾಜಶ್ರೀ ಅಲ್ಟ್ರಾಟೆಕ್) ಸಿಮೆಂಟ್ ಕಾರ್ಖಾನೆ ವಿರುದ್ಧ ವಾಸವದತ್ತಾ ಸಿಮೆಂಟ್ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಹಾಗೂ ಸೇಡಂ ನಗರದಲ್ಲಿ ಇರುವ ರೈಲ್ವೆ ಹಳಿಯನ್ನು ಸ್ಥಳಾಂತರಿಸುವ ಕುರಿತು ಮತ್ತು ಕಾರ್ಖಾನೆ ಮಾಡುವ ಸ್ಫೋಟಕದಿಂದ ಹಾನಿಯಾಗಿರುವ ಮನೆಗಳಿಗೆ ಮತ್ತು ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಇನ್ನೂ ವಿವಿಧ ಸಮಸ್ಯೆಗಳ ಕುರಿತು ಅನಿರ್ದಿಷ್ಟ ಧರಣಿ ತಾಲೂಕಡಲಿತ ಕಚೇರಿ ಮುಂದೆ ನಡೆಸಿದರು.

ತಾಲೂಕ ದಂಡಾಧಿಕಾರಿಗಳು ಧರಣಿಯಲ್ಲಿ ಭಾಗಿಯಾಗಿ ಮನವಿ ಪತ್ರಕ್ಕೆ ಸ್ಪಂದಿಸಿ 15 ದಿನಗಳ ಕಾಲಾವಕಾಶ ಕೊಡಿ ಮಾನ್ಯ ಸಹಾಯಕ ಆಯುಕ್ತರ ಗಮನಕ್ಕೆ ತಂದು ಕೆಲವು ಸಮಸ್ಯೆಗಳನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.

ಅನಿರ್ದಿಷ್ಟ ಧರಣಿ ಮುಂದಿನ 15 ದಿನಗಳ ಒಳಗಾಗಿ ತಾವು ತಿಳಿಸಿರುವ ಕೆಲವು ಸಮಸ್ಯೆಗಳು ಸರಿಪಡಿಸದೆ ಇದ್ದಲ್ಲಿ ಸೇಡಂ ನಗರದಲ್ಲಿರುವ ಬಸವೇಶ್ವರ ವೃತ್ತದಲ್ಲಿ ರಸ್ತೆ ಬಂದ್ ಕರೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಧರಣಿ ಕೈ ಬಿಡಲಾಯಿತು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಪದಾಧಿಕಾರಿಗಳು, ಹಾಗೂ ಸೇಡಂ ತಾಲೂಕಿನ ಪದಾಧಿಕಾರಿಗಳು ಸೇರಿದಂತೆ ರೈತರು ಮತ್ತು ವಿವಿಧ ಗ್ರಾಮಗಳ ಮುಖಂಡರು ಭಾಗಿಯಾಗಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!