Ad imageAd image

‘ಕೆ.ಎಲ್ ರಾಹುಲ್ ಕೂಲ್ ಹುಡುಗ ಇದೇ ಕಾರಣಕ್ಕೆ ಮಗಳನ್ನು ಕೊಡಲು ಒಪ್ಪಿದೆ’

Bharath Vaibhav
‘ಕೆ.ಎಲ್ ರಾಹುಲ್ ಕೂಲ್ ಹುಡುಗ ಇದೇ ಕಾರಣಕ್ಕೆ ಮಗಳನ್ನು ಕೊಡಲು ಒಪ್ಪಿದೆ’
WhatsApp Group Join Now
Telegram Group Join Now

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಕೆಎಲ್ ರಾಹುಲ್ ಗೆ ತಮ್ಮ ಮಗಳನ್ನು ಧಾರೆಯೆರೆದು ಕೊಡಲು ನಟ ಸುನಿಲ್ ಶೆಟ್ಟಿ ಯಾವ ಕಾರಣಕ್ಕೆ ಒಪ್ಪಿದ್ದರು ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಎಲ್ಲರಿಗೂ ಗೊತ್ತಿರುವ ಹಾಗೆ ಸುನಿಲ್ ಶೆಟ್ಟಿ ಮಗಳು ಅಥಿಯಾ ಪತಿ ಕ್ರಿಕೆಟಿಗ ಕೆಎಲ್ ರಾಹುಲ್. ಇಬ್ಬರೂ ಮೂಲತಃ ಕರ್ನಾಟಕದ ಕರಾವಳಿಯವರು. ಮೂಲ್ಕಿಯಲ್ಲಿ ಸುನಿಲ್ ಶೆಟ್ಟಿ ಊರಾದರೆ ರಾಹುಲ್ ಕೂಡಾ ಮೂಲತಃ ಮಂಗಳೂರಿನವರು.
ಅಥಿಯಾ ತಮ್ಮ ಪ್ರೀತಿ ವಿಚಾರ ಹೇಳಿದಾಗ ಸುನಿಲ್ ಶೆಟ್ಟಿ ರಾಹುಲ್ ರನ್ನು ಒಪ್ಪಿದ್ದು ಇದೊಂದೇ ಕಾರಣಕ್ಕಂತೆ. ಸಂದರ್ಶನವೊಂದರಲ್ಲಿ ಸುನಿಲ್ ಶೆಟ್ಟಿ ಹೀಗಂತ ಹೇಳಿದ್ದರು. ‘ರಾಹುಲ್ ಎಷ್ಟು ಕೂಲ್ ಹುಡುಗ ಎಂದರೆ ಮೈದಾನದಲ್ಲಿ ಒಮ್ಮೆಯೂ ಯಾರ ಜೊತೆಗೂ ಜಗಳ ಮಾಡಿಕೊಂಡವನಲ್ಲ. ಅವನ ಹೆಸರಿನಲ್ಲಿ ಒಂದೇ ಒಂದು ವಿವಾದವಿಲ್ಲ. ಅವನು ಎಷ್ಟು ಶಾಂತ ಹುಡುಗ ಎಂದರೆ ಶತಕ, ಅರ್ಧಶತಕ ಸಿಡಿಸಿದರೂ ಹೆಚ್ಚೆಂದರೆ ಬ್ಯಾಟ್ ಮೇಲೆತ್ತುತ್ತಾನೆ ಹೊರತು ಬೇರೆ ಯಾವುದೇ ಆಕ್ರಮಣಕಾರೀ ಸೆಲೆಬ್ರೇಷನ್ ಕೂಡಾ ಇರಲ್ಲ. ಅಂತಹ ಒಬ್ಬ ವ್ಯಕ್ತಿ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನಿಸಿತು. ಅದೇ ಕಾರಣಕ್ಕೆ ಅವನು ನನಗೆ ಇಷ್ಟವಾದ’ ಎಂದು ಸುನಿಲ್ ಶೆಟ್ಟಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ಅಥಿಯಾ ಮತ್ತು ರಾಹುಲ್ ಕೆಲವು ದಿನಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಬಳಿಕ ಮನೆಯವರ ಒಪ್ಪಿಗೆಯೊಂದಿಗೆ ಸುನಿಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲೇ ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!