ವಿದ್ಯುತ್ ಪ್ರವಹಸಿ ಲೈನಮ್ಯಾನಗೆ ಸುಟ್ಟಗಾಯ
ರಾಯಚೂರು : ವಿದ್ಯುತ್ ದುರಸ್ತಿ ಕಾರ್ಯದಲ್ಲಿ ಏಕಾಎಕಿ ವಿದ್ಯುತ್ ಪ್ರವಹಸಿ ಲೈನಮ್ಯಾನ ಗಂಬೀರ ಗಾಯಗೊಂಡ ಘಟನೆ ನಗರದ ಗದ್ವಾಲ್ ರಸ್ತೆಯಲ್ಲಿ ಮಂಗಳವಾರ ಜರುಗಿದೆ.
ಬಳಗಾನೂರು ಮೂಲದ ವಿರೇಶ ಎಂಬಾತ ಗಾಯಗೊಂಡಿದ್ದಾನೆ.ವಡವಾಟಿ ೧೧೦ ಕೆ.ವಿ ದುರಸ್ತಿ ಕಾಮಗಾರಿ ನಡೆಯುವಾಗ ಮುಂಚಿತವಾಗಿ ಮಾಹಿತಿ ನೀಡದೇ ವಿದ್ಯುತ್ ಪ್ರಸಾರ ಪ್ರಾರಂಭಿಸಿದ್ದರಿಂದ ಕಂಬದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿರೇಶ ಕೈ ಕಾಲಿಗೆ ಸುಟ್ಟ ಗಾಯಗಳಾಗಿವೆ.ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್ ಗೆ ರವಾನಿಸಲಾಗಿದೆ. ಸಿಬ್ಬಂದಿಗಳ ನಿರ್ಲಕ್ಷ್ಯ ದಿಂದ ಘಟನೆ ಜರುಗಿದೆ ಎಂದು ಹೇಳಲಾಗಿ.
ವರದಿ: ಗಾರಲ ದಿನ್ನಿ ವೀರನ ಗೌಡ




