ನಿಪ್ಪಾಣಿ : ಶಾಸಕಿ ಶಶಿಕಲಾ ಜೊಲ್ಲೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ವಿಶೇಷ ಪ್ರಯತ್ನದಿಂದ ತಾಲೂಕಿನ ಭೋಜ ಭೋಜವಾಡಿ ಮುಖ್ಯ ರಸ್ತೆಯಿಂದ ಮಡಿವಾಳರ ತೋಟದವರೆಗಿನ ರಸ್ತೆ ಡಾಂಬರೀಕರಣಕ್ಕಾಗಿ ಮುಖ್ಯಮಂತ್ರಿಯ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿ 17 ಲಕ್ಷ ರೂಪಾಯಿ ಮಂಜೂರಾಗಿದ್ದು ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು.
ಪ್ರಾರಂಭದಲ್ಲಿ ಪ್ರಕಾಶ್ ಪರಿಟ ಭರತ ಗುರವ ಅವರ ಹಸ್ತದಿಂದ ಭೂಮಿ ಪೂಜೆ ನೆರವೇರಿತು ಇದೇ ಸಂದರ್ಭದಲ್ಲಿ ಅನಿಲ್ ಮಡಿವಾಳ ರವೀಂದ್ರ ಪರಿಟ ಭವುಸಾಹೇಬ ಪರಿಟ, ಸಂತೋಷ್ ಚೌಹಾನ ಹಾಗೂ ಮಲಗೊಂಡ ಪಾಟೀಲರ ಹಸ್ತದಿಂದ ಶ್ರಿಫಲಾರ್ಪನೆ ನಡೆಯಿತು.
ಸಮಾರಂಭದಲ್ಲಿ ಡಾಕ್ಟರ್ ಸುದರ್ಶನ್ ಮುರಾಬಟ್ಟೆ ಅದಗೌಡ ಪಾಟೀಲ ಮಾತನಾಡಿಧರು. ರಸ್ತೆ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ವಿನೋದ ಸಂಕಪಾಳ ಸಂಜಯ ಕಮತೆ ರಾಜು ಅಲಾಸೆ, ಶ್ರೀಕಾಂತ ಪರೀಟ್ ಗುತ್ತಿಗೆದಾರ ಅಕ್ಷಯ ಜಯಕರ ಸೇರಿದಂತೆ ಭೋಜ ಭೋಜವಾಡಿ ಗ್ರಾಮದ ಗಣ್ಯರು ತೋಟಪಟ್ಟಿಗಳ ರೈತರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




