Ad imageAd image

ಆರೊಪಿಯನ್ನು ಬಂಧಿಸುವಲ್ಲಿ ಪೊಲೀಸರು ಹಿಂದೇಟು :ಶಶಿಕಾಂತ್ ಬಿಜವಾಡ ಆರೊಪ

Bharath Vaibhav
ಆರೊಪಿಯನ್ನು ಬಂಧಿಸುವಲ್ಲಿ ಪೊಲೀಸರು ಹಿಂದೇಟು :ಶಶಿಕಾಂತ್ ಬಿಜವಾಡ ಆರೊಪ
WhatsApp Group Join Now
Telegram Group Join Now

ಹುಬ್ಬಳ್ಳಿ:ಅಂಗನವಾಡಿ ಆಹಾರ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಬಿಜೆಪಿ ಎಸ್’ಸಿ ಮೋರ್ಚಾ ಧಾರವಾಡ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ್ ಬಿಜವಾಡ ಆರೋಪಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಪ್ರಕರಣದ ಪ್ರಮುಖ ಆರೋಪಿ ಯಾರೆಂಬುದು ಜಗ್ಗತ್ತಜಾಹಿರ್ ಆಗಿದೆ. ಅವರು ಶಾಸಕ ಪ್ರಸಾದ್ ಅಬ್ಬಯ್ಯ ಅವರ ಆಪ್ತರು ಎಂಬುದು ತಿಳಿದಿದೆ. ಈ ಬಗ್ಗೆ ಬಿಜೆಪಿ ಪ್ರತಿಭಟನೆ ಮಾಡಿದಾಗ ಶಾಸಕರು ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀವು ಬಡಮಕ್ಕಳು, ಬಾಣಂತೀಯರು ತಿನ್ನುವ ಪೌಷ್ಟಿಕ ಆಹಾರಕ್ಕೆ ಕನ್ನ ಹಾಕಿದವರನ್ನು ಬಿಡುವುದಿಲ್ಲ ಎಂದು ಹೇಳುತ್ತೀರಿ, ಆದರೆ ಇನ್ನೊಂದೆಡೆ ಅಂತವರ ರಕ್ಷಣೆಗೆ ನಿಂತಿದ್ದೀರಿ ಎಂದು ಆರೋಪಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರವಾಣಿ ಕರೆಗಳ ವಿವರ ಪರೀಕ್ಷೆ ಮಾಡಲು ಮಾಡನಾಡಿದಿದೆಯೇ ಹೊರತು ತಮ್ಮ ವೈಯಕ್ತಿಕ ದೂರವಾಣಿ ಕರೆಗಳ ಬಗ್ಗೆ ಅಲ್ಲ ಎಂದು ಶಾಸಕರಿಗೆ ಸ್ಪಷ್ಟಪಡಿಸಿದರು.

ಅಂಗನವಾಡಿ ಅವ್ಯವಹಾರದಲ್ಲಿ ಭಾಗಿಯಾದವರು ನಿಮ್ಮ ಪಕ್ಷದವರೇ ಆಗಿದ್ದಾರೆ. ನಿಮ್ಮದೇ ಸರ್ಕಾರವಿದೆ. ಆದರೂ ಬಂಧನ ಯಾಕೆ ಆಗುತ್ತಿಲ್ಲ. ಇದಕ್ಕೆ ನೀವು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಈ ವಿಷಯದಲ್ಲಿ ಮಹಾನಗರ ಪೊಲೀಸರ ಬಗ್ಗೆ ವೈಫಲ್ಯದ ಸದನದಲ್ಲಿ ಬಿಜೆಪಿ ಕಾಂಗ್ರೆಸ್ ಶಾಸಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಪೊಲೀಸರ ವಿರುದ್ದವು ಹೋರಾಟಕ್ಕೆ ಸಿದ್ದರಾಗುತ್ತೇವೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಂಜುನಾಥ ಕಾಟಕರ್, ಶಿವಾನಂದ ಅಂಬಿಗೇರ್ ಪಾಲ್ಗೊಂಡಿದ್ದರು.

ವರದಿ:ಸುಧಿರ ಕುಲಕರ್ಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!