ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಹಿರಿಯ ಆಟಗಾರ ವಿರಾಟ್ ಕೋಹ್ಲಿ ಈಗಲೂ ಲಾಂಗರ್ ಫಾರ್ಮೆಟ್ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾಟ್ಸನ್ ಇಬ್ಬರೂ ಹಿರಿಯ ಆಟಗಾರರನ್ನು ಬೆಂಬಲಿಸಿದ್ದಾರೆ.
ಈಚೆಗೆ ಮುಗಿದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಉದಾಹರಣೆಯನ್ನೇ ನೀಡಿದ ಅವರು ವಿರಾಟ್ ಕೋಹ್ಲಿ ಭಾರತದ ಪರ ಪಂದ್ಯಾವಳಿಯಲ್ಲಿ ಎರಡನೇ ಅತ್ಯಧಿಕ ಸ್ಕೋರರ್ ಎನಿಸಿದ್ದಾರೆ. ಅವರು ಪಾಕ್ ವಿರುದ್ಧ ಶತಕ ಬಾರಿಸಿದ್ದರೆ, ಆಸ್ಟ್ರೇಲಿಯಾ ವಿರುದ್ಧ 84 ರನ್ ಗಳಿಸಿ ಒಟ್ಟಾರೆ ಪಂದ್ಯಾವಳಿಯಲ್ಲಿ 218 ರನ್ ಕಲೆ ಹಾಕಿದ್ದರು. ಇನ್ನೊಂದೆಡೆ ರೋಹಿತ್ ಶರ್ಮಾ ಫೈನಲ್ ಪಂದ್ಯದಲ್ಲಿ 76 ರನ್ ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಇಬ್ಬರು ಹಿರಿಯ ಆಟಗಾರರು ಮಹತ್ವದ ಪಂದ್ಯಗಳಲ್ಲಿ ಒತ್ತಡ ನಿಭಾಯಿಸಿ ಆಡಬಲ್ಲ ಆಟಗಾರರೂ ಆಗಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರು ನನ್ನ ಅಭಿಪ್ರಾಯದಲ್ಲಿ ಲಾಂಗರ್ ಫಾರ್ಮೆಟ್ ಪಂದ್ಯಗಳಲ್ಲಿ ಮುಂದುವರೆಯುವುದು ಉತ್ತಮ. ಹೀಗಾಗಿ ಕಿರಿಯ ಆಟಗಾರರು ಮತ್ತಷ್ಟು ತಾಳ್ಮೆಯಿಂದ ಕಾಯಲಿ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




