Ad imageAd image

ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರಿಗೆ ಟೋಲ್ ಕಿಟ್ ಫಲಾನುಭವಿಗಳಿಗೆ ಸೌಲಭ್ಯಗಳು ವಿತರಣೆ : ಶಾಸಕ ಎಚ್ ವಿ ವೆಂಕಟೇಶ್

Bharath Vaibhav
ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರಿಗೆ ಟೋಲ್ ಕಿಟ್ ಫಲಾನುಭವಿಗಳಿಗೆ ಸೌಲಭ್ಯಗಳು ವಿತರಣೆ : ಶಾಸಕ ಎಚ್ ವಿ ವೆಂಕಟೇಶ್
WhatsApp Group Join Now
Telegram Group Join Now

ಪಾವಗಡ  : ಈ ವೇಳೆಯಲ್ಲಿ ಸಮರ್ಪಕವಾಗಿ ಮಾತನಾಡಿದ ಕಟ್ಟಡಕಾರ್ಮಿಕರು ಇಲಾಖೆಯಿಂದ ನೀಡುವ ಸವಲತ್ತುಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಮಾಜಿ ಸಚಿವ ವೆಂಕಟರಮಣಪ್ಪ ತಿಳಿಸಿದರು.

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕುನಾ ಪಟ್ಟಣ ದಲ್ಲಿರುವ ಗುರುಭವನದಲ್ಲಿ ದಿನಾಂಕ. 13/03/25 ಗುರುವಾರ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಚ್ ವಿ ವೆಂಕಟೇಶ್ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿತ್ತು ಉದ್ಯೋಗ ಕಾರ್ಯ ವೈಖರಿಗಳಲ್ಲಿ ಕಾರ್ಮಿಕರ ಪಾತ್ರ ದೊಡ್ಡ ಮಟ್ಟದಲ್ಲಿ ಎಲ್ಲಾ ಕಾರ್ಮಿಕರು ಸದುಪಯೋಗ ಪಡೆದುಕೊಳ್ಳುವ ಮೂಲಕ ತಮ್ಮ ವೃತ್ತಿಯಿಂದ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಹೇಳಿ ನಂತರ ಕಟ್ಟಡಕಾರ್ಮಿಕರಿಗೆ ಸರ್ಕಾರದಿಂದ ಸೌಲಭ್ಯ ಬರುವ ಕಿಟ್ ಗಳನ್ನು ಮರಣ, ಮದುವೆ, ಅಂತ್ಯತಕ್ರೀಯೆ, ಅರೋಗ್ಯ ಸಹಾಯಧನದ ಅದೇಶ ಪತ್ರಗಳನ್ನು ವಿತರಿಸಿ ಮಾತನಾಡಿ, ಕಟ್ಟಡ ಕಾರ್ಮಿಕರು 60 ವರ್ಷ ನಂತರ ಮಾಶಾಸನ, ವಿದ್ಯಾಬ್ಯಾಸಕ್ಕೆ ಶೈಕ್ಷಣಿಕ ಸಹಾಯಧನ, ಆರೋಗ್ಯ ಸವಲತ್ತುಗಳನ್ನು ನೀಡುತ್ತಿದ್ದು, ತಮ್ಮ ಮಕ್ಕಳನ್ನು ಉತ್ತಮ ವಿದ್ಯಾವಂತರಾಗಿಸಬೇಕು ಎಂದು ತಿಳಿಸಿದ ಶಾಸಕ ವೆಂಕಟೇಶ್.

ಇದೇ ವೇಳೆಯಲ್ಲಿ ತಾಲ್ಲೂಕಿನಲ್ಲಿ ಅರ್ಹ ಕಟ್ಟಡ ಕಾರ್ಮಿಕರನ್ನು ನೊಂದಾಯಿಸಿಲು ಕಾರ್ಮಿಕ ನೀರೀಕ್ಷಕರಾದ ಹರೀಶ್ ಕುಮಾರ್ ಗೆ ಖಡಕ್ ಹೆಚ್ಚರಿಕೆ ನೀಡಿದರು.

ಶಾಸಕ ಈ ವೇಳೆ ಮಾಜಿ ಸಚಿವ ವೆಂಕಟರಮಣಪ್ಪ, ಪುರಸಭಾ ಸದಸ್ಯರಾದ ಕಲ್ಪವೃಕ್ಷ ರವಿ, ಗುತ್ತಿಗೆದಾರರಾದ ಆರ್. ಎ. ಹನುಮಂತರಾಯ, ಮಧುಗಿರಿ ಕಾರ್ಮಿಕ ವಿಸ್ತರ್ಣಾಧಿಕಾರಿ ಶ್ರೀಕಾಂತ್, ಫೈರಜ್‌ಖಾನ್ , ರೆಹಮಾನ್, ತಾಲ್ಲೂಕು ಕಾರ್ಮಿಕ ನಿರೀಕ್ಷಕರಾದ ಹರೀಶ್ ಕುಮಾರ್.ಮಾಜಿ ಪುರಸಭಾ ಸದಸ್ಯ ರಿಜ್ವಾನ್ ಹುಲ್ಲಾ, ಕಾರ್ಮಿಕ ಮುಖಂಡರಾದ ಗೌಡರಂಗಪ್ಪ, ಕೃಷ್ಣಮೂರ್ತಿ, ರಾಮಕೃಷ್ಣ, ಜೆ. ಅಂಜಯ್ಯ , ಹಮಾಲಿ ರಾಮಾಂಜಿನಪ್ಪ, ಬ್ಯಾಡನೂರು ಶಾಂತರಾಜಯ್ಯ, ಎಚ್.ಎಸ್. ಭಾಗ್ಯಲಕ್ಚಿö್ಮ, ಮೈಲಾರಲಿಂಗಪ್ಪ, ಉಪಸ್ಥಿತರಿದ್ದರು.

ವರದಿ: ಶಿವಾನಂದ  ಪಾವಗಡ 

WhatsApp Group Join Now
Telegram Group Join Now
Share This Article
error: Content is protected !!