ಚಿಟಗುಪ್ಪ :ತಾಲೂಕಿನ ಬೆಳಕೇರಾ ಗ್ರಾಮದ ಬೆಟ್ಟದ ರೇವಣ್ಣಸಿದ್ದೇಶ್ವರ 16ನೇ ಜಾತ್ರಾ ಮಹೋತ್ಸವ ನಿಮಿತ್ಯ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆ ಜರುಗಿತ್ತ.
ಅಂದು ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ಜರಗಿದ್ದು,ಬಳಿಕ ವಿವಿಧ ಸಂಸ್ಥಾನಗಳ ಪೂಜ್ಯ ಶಿವಾಚಾರ್ಯರಿಂದ ಪುರಾಣ ಪ್ರವಚನ ನಡೆಯಿತು.
ತದನಂತರ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ರಂಜಿಸಿದವು.ಅಲ್ಲದೆ ಇಡಿ ದಿವಸ ಭಕ್ತಾದಿಗಳಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಜಾತ್ರಾ ಪಂಚ ಕಮಿಟಿಯ ಅಧ್ಯಕ್ಷ ಅನೀಲಕುಮಾರ ಪೊಲೀಸ್ ಪಾಟೀಲ್, ಉಪಾಧ್ಯಕ್ಷ ರಾಜಶೇಖರ ಮೂಲಗಿ,ಕಾರ್ಯದರ್ಶಿ ರಾಜು ಹುಡಗಿ,ಕೋಶಾಧ್ಯಕ್ಷ ಚಂದ್ರಶೇಖರ್ ನಾರಾಯಣಪೇಟ್,ಶಿವಕುಮಾರ ಪಾಟೀಲ್ ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾಗಿದ್ದರು.
ವರದಿ:ಸಜೀಶ ಲಂಬುನೋರ