Ad imageAd image

ತೋಟಗಾರಿಕೆ ಇಲಾಖೆಗೆ ಬಂದಿರುವ ಸಬ್ಸಿಡಿ ಅನುದಾನವನ್ನು ಕೊಡುವಲ್ಲಿ ತಾರತಮ್ಯ :ಕರ್ನಾಟಕ ರಾಜ್ಯ ರೈತ ಸಂಘ ಆರೋಪ

Bharath Vaibhav
ತೋಟಗಾರಿಕೆ ಇಲಾಖೆಗೆ ಬಂದಿರುವ ಸಬ್ಸಿಡಿ ಅನುದಾನವನ್ನು ಕೊಡುವಲ್ಲಿ ತಾರತಮ್ಯ :ಕರ್ನಾಟಕ ರಾಜ್ಯ ರೈತ ಸಂಘ ಆರೋಪ
WhatsApp Group Join Now
Telegram Group Join Now

ಮೊಳಕಾಲ್ಮೂರು:ತಾಲೂಕಿನಲ್ಲಿ ತೋಟಗಾರಿಕೆ ಇಲಾಖೆಗೆ ಬಂದಿರುವ ಸಬ್ಸಿಡಿ ಅನುದಾನವನ್ನು ಕೊಡುವಲ್ಲಿ ತಾರತಮ್ಯ ಹಾಗೂ ಅಧಿಕೃತ ದಾಖಲೆಗಳನ್ನು ಇಲಾಖೆಗೆ ಕೊಡಲು ರೈತರಲ್ಲಿ ಗೊಂದಲವಾಗುತ್ತಿದ್ದು ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಬೇಡ ರೆಡ್ಡಿ ಹಳ್ಳಿ ಬಸವ ರೆಡ್ಡಿ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತೋಟಗಾರಿಕೆ ಇಲಾಖೆ ಮುಂದೆ ಪ್ರತಿಭಟನೆ ಮಾಡಿ ಮಾತನಾಡಿದರು.

ತೋಟಗಾರಿಕೆ ಇಲಾಖೆಯಲ್ಲಿ ಅರ್ಹ ರೈತರಿಗೆ ಸಬ್ಸಿಡಿ ನೀಡುವಲ್ಲಿ ವಿಫಲವಾಗಿದೆ, ಇದನ್ನು ಸರಿಪಡಿಸಿ ಆದೇಶ ನೀಡುವ ಮೂಲಕ ಗೊಂದಲವನ್ನು ಸರಿಪಡಿಸಬೇಕು ಸಬ್ಸಿಡಿ ಹಣ ವಿತರಣೆಯಲ್ಲಿ ಅವ್ಯವಹಾರವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ನೇರ ಒಣಗಿಹರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಎಷ್ಟು ರೈತರಿಗೆ ಉತ್ಪಾದಕರ ಸಂಸ್ಥೆಯ ರಚನೆಗಾಗಿ ಘಟಕವಾರು ನೀಡಲಾದ ಆರ್ಥಿಕ ನೆರವು 24 25 ನೇ ಸಾಲಿನ ಇಲಾಖೆಯಿಂದ ಸಂಸ್ಥೆಗಳಿಗೆ ಸಬ್ಸಿಡಿ ಹಣ ಎಷ್ಟು ಕೊಟ್ಟಿದ್ದೀರಾ ಸಂಸ್ಥೆಗಳು ಚಾಲ್ತಿಯಲ್ಲಿ ಇವೆಯಾ ಎಷ್ಟು ವಹಿವಾಟು ಮಾಡಿದ್ದಾರೆ ಯಾವ್ಯಾವ ರೈತರಿಗೆ ಸಬ್ಸಿಡಿ ಹಣ ನೀಡಿದ್ದೀರಾ ಎಂಬುದನ್ನು ವರದಿ ಕೊಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷರಾದ ರಾಜಣ್ಣ ಮಾತನಾಡಿ, ತಾಲೂಕಿನಲ್ಲಿ ರೈತರಿಗೆ ಅನುಕೂಲ ಹಾಗುವ ಹಾಗೆ ತೋಟಗಾರಿಕೆ ಇಲಾಖೆಯವರು ಕ್ರಮಗಳನ್ನು ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಈರಣ್ಣ ತಾಲ್ಲೂಕು ಪ್ರಧಾನ ಕಾರ್ಯದರ್ಶಿ, ಚಂದ್ರಣ್ಣ ವೀರಣ್ಣ ಲಿಂಗಣ್ಣ ಮರ್ಲಳ್ಳಿ ರವಿಕುಮಾರ್ ವಿಜು ಕುಮಾರ್ ದೊಡ್ಡಪಾಪಯ್ಯ ದೊಡ್ಡ ಸ್ಪೂರಯ್ಯ ಇನ್ನು ಹಲವರು ಉಪಸ್ಥಿತರಿದ್ದರು.

ವರದಿ :ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!